Published : Apr 05, 2022, 04:55 PM ISTUpdated : Apr 05, 2022, 05:35 PM IST
ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿ ಮನೆಮಾತಾಗಿರುವ ನಟಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ 26 ವರ್ಷ ತುಂಬಿದೆ. ಏಪ್ರಿಲ್ 5, 1996 ರಂದು ಕರ್ನಾಟಕದ ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ ದಕ್ಷಿಣದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ರಶ್ಮಿಕಾ ಅವರು ಎಕ್ಸ್‌ಪ್ರೆಶನ್ ಕ್ವೀನ್ ಮತ್ತು ನ್ಯಾಶನಲ್ ಕ್ರಶ್ ಎಂದೇ ಫೆಮಸ್ 2016ರಲ್ಲಿ ವೃತ್ತಿ ಜೀವನ ಆರಂಭಿಸಿದ ರಶ್ಮಿಕಾ ಇದುವರೆಗೆ ಕೇವಲ 13 ಚಿತ್ರಗಳಲ್ಲಿ ನಟಿಸಿದ್ದರೂ, ಕೋಟಿಗಳ ಒಡತಿ. ರಶ್ಮಿಕಾ ಮಂದಣ್ಣ ದೇಶದಾದ್ಯಂತ ಒಂದಲ್ಲ ಐದು ಲಕ್ಷುರಿಯಸ್ ಮನೆಯ ಓನರ್.
ಕಿರಿಕ್ ಪಾರ್ಟಿ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟು ಇಂದು ಬಾಲಿವುಡ್‌ನಲ್ಲೂ ತಮ್ಮ ಛಾಪೂ ಮೂಡಿಸಿರುವ ರಶ್ಮಿಕಾ ಈಗಾಗಲೇ ಒಂದಲ್ಲ ಎರಡಲ್ಲ, ಕನಿಷ್ಠ ಐದು ನಗರಗಳಲ್ಲಿ ಮನೆಗಳನ್ನೂ ಹೊಂದಿದ್ದಾರೆ.
26
Image: Rashmika Mandanna/Instagram
ಹೌದು ರಶ್ಮಿಕಾ ಮಂದಣ್ಣ ನಗರಗಳಲ್ಲಿ ಹಲವಾರು ಮನೆಗಳನ್ನು ಹೊಂದಿದ್ದಾರೆ.ರಶ್ಮಿಕಾ ಅವರು ಬೆಂಗಳೂರು, ಹೈದರಾಬಾದ್, ಮುಂಬೈ, ಗೋವಾ ಮತ್ತು ಕೂರ್ಗ್‌ನಲ್ಲಿ ಬಹು ಆಸ್ತಿಯನ್ನು ಹೊಂದಿದ್ದಾರೆ.
36
Image: Rashmika Mandanna/Instagram
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮುಂಬೈನಲ್ಲಿ ದೊಡ್ಡ ಫ್ಲಾಟ್ ಅನ್ನು ಖರೀದಿಸಿದ್ದಾರೆ. ರಶ್ಮಿಕಾರ ಮನೆಯ ಇಂಟೀರಿಯರ್ ತುಂಬಾ ಸುಂದರವಾಗಿದೆ. ರಶ್ಮಿಕಾ ಆಗಾಗ ತಮ್ಮ ಮನೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ
46
Image: Rashmika Mandanna/Instagram
'ಮಿಷನ್ ಮಜ್ನು' ಚಿತ್ರದ ಮೂಲಕ ಬಾಲಿವುಡ್‌ಗೆ ಚೊಚ್ಚಲ ಪ್ರವೇಶಕ್ಕೆ ಸಜ್ಜಾಗುತ್ತಿರುವ ನಟಿ, ಆಗಾಗ್ಗೆ ನಗರಕ್ಕೆ ಭೇಟಿ ನೀಡಬೇಕಾದ ಕಾರಣ ತನ್ನ ಹೊಸ ಫ್ಲಾಟ್‌ಗೆ ತೆರಳಿದರು.
56
Image: Rashmika Mandanna/Instagram
ರಶ್ಮಿಕಾ ಮಂದಣ್ಣ ಕೂಡ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಭರ್ಜರಿ ಆಸ್ತಿ ಹೊಂದಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಎರಡೂ ತುಂಬಾ ದುಬಾರಿ ಮನೆಗಳಾಗಿವೆ ಮತ್ತು ಸುಂದರವಾಗಿದೆ ಎಂದು ವರದಿಯಾಗಿದೆ.
66
Image: Rashmika Mandanna/Instagram
ಆದರೆ ಕೂರ್ಗ್ ಮತ್ತು ಗೋವಾದಲ್ಲಿರುವ ರಶ್ಮಿಕಾ ಅವರ ಮನೆಗಳು ಹಾಲಿಡೇಗೆ ಹೇಳಿ ಮಾಡಿಸಿದ ಹಾಗಿದೆ. ರಶ್ಮಿಕಾ ಮಂದಣ್ಣ ಕೂರ್ಗ್‌ನಿಂದ ಬಂದವರು, ಆಕೆಯ ಪೋಷಕರು ಇನ್ನೂ ಅಲ್ಲಿ ವಾಸಿಸುತ್ತಿದ್ದಾರೆ,