ಮಣಿರತ್ನಂ ಬಾಂಬೆ, ದಿಲೇ ಸೇ ಹಾಡಿಂದಲೇ ಭಾರತೀಯ ಈ ಅದ್ಭುತ ಪ್ರಾಕೃತಿಕ ತಾಣಗಳು ಫೇಮಸ್!

First Published Jun 15, 2024, 3:17 PM IST

ಮಾಂತ್ರಿಕ ನಿರ್ದೇಶಕರಾದ ಮಣಿರತ್ನಂ ಅವರು ತಮ್ಮ ಅದ್ಭುತ ಸಿನಿಮಾಟೋಗ್ರಾಫಿ ಮೂಲಕ ಸಾಮಾನ್ಯ ಸ್ಥಳಗಳನ್ನು ಮೋಡಿ ಮಾಡುವ ಹಿನ್ನೆಲೆಗಳಾಗಿ ಪರಿವರ್ತಿಸುವ ಸಾಮರ್ಥ್ಯಕ್ಕೆ ಹೆಸರುವಾಸಿ. ಅವರು ಭಾರತದ ಕೆಲವು ಅಪ್ರತಿಮ ಸ್ಥಳಗಳಿಗೆ ಅವರ ಚಲನಚಿತ್ರಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ನಿರ್ದೇಶಕ ಮಣಿರತ್ನಂ ತಮ್ಮ ಸಿನಿಮಾ  ಹಾಡುಗಳ ಮೂಲಕ ಜನಪ್ರಿಯಗೊಳಿಸಿರುವ ಭಾರತದ ಸ್ಥಳಗಳು ಇಲ್ಲಿವೆ.

1995 ರಲ್ಲಿ ಬಿಡುಗಡೆಯಾದ 'ಬಾಂಬೆ,' ಸಿನಿಮಾದ, 'ಕೆಹ್ನಾ ಹಿ ಕ್ಯಾ' ಹಾಡನ್ನು ತಮಿಳುನಾಡಿನ ಮಧುರೈನಲ್ಲಿರುವ ತಿರುಮಲೈ ನಾಯಕ್ ಅರಮನೆಯಲ್ಲಿ ಚಿತ್ರೀಕರಿಸಲಾಯಿತು. ಆ ಹಾಡು ರಿಲೀಸ್ ಆದಾಗಿನಿಂದಲೂ ಇಲ್ಲಿಗೆ ಬರೋ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತ್ತು. 

‘ದಿಲ್ ಸೇ’ ಚಿತ್ರದ ಹಿಟ್ ಹಾಡು ‘ಸತ್ರಂಗಿ ರೇ’ ಮಣಿರತ್ನಂ ಅವರ ಸಂಗೀತ ಸಾಧನೆಗೆ ಮತ್ತೊಂದು ಗರಿ. ಅವರ ವಿಕಿಪೀಡಿಯಾ ಪುಟದಲ್ಲಿ ಉಲ್ಲೇಖಿಸಿದಂತೆ, ಹಾಡಿನ ಒಂದು ಭಾಗವನ್ನು ಲಡಾಖ್‌ನ ಪ್ರಸಿದ್ಧ ಪಾಂಗಾಂಗ್ ಸರೋವರ ಮತ್ತು ಬಾಗ್ಸೋ ಮಾನಸ್ಟರಿಯಲ್ಲಿ ಚಿತ್ರೀಕರಿಸಲಾಗಿದೆ.

Mani Ratnam

ಐಶ್ವರ್ಯಾ ರೈ ಆಭಿನಯದ 'ಖಿಲಿ ರೇ' ಹಾಡು ಯಾರಿಗೆ ನೆನಪಿಲ್ಲ ಹೇಳಿ? ಪಶ್ಚಿಮ ಬಂಗಾಳದ ಕೋಲ್ಕತ್ತಾ ಸಾಹೇಬ್ ಕುತಿಯಲ್ಲಿ ಇದನ್ನು ಶೂಟ್‌ ಮಾಡಲಾಗಿದೆ.

ದಿಲ್‌ ಸೇ ಸಿನಿಮಾದ ಪ್ರೀತಿ ಜಿಂಟಾ ಮತ್ತು ಶಾರುಖ್ ಖಾನ್ ಅವರ  'ಜಿಯಾ ಜಲೇ'   ಹಾಡು ಕೇಳಿದರೆ ಮನಸ್ಸು ಹಗುರವಾಗುತ್ತದೆ. ಇದನ್ನು ಅಲೆಪ್ಪಿ ಹಿನ್ನೀರಿನಲ್ಲಿ ಶೂಟ್‌ ಮಾಡಲಾಗಿದೆ.

ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಅವರ 2010ರ  'ರಾವಣ,' ಸಿನಿಮಾದ ಹಾಡನ್ನು ಕೇರಳದ ಜನಪ್ರಿಯ ಅತಿರಪಲ್ಲಿ ಜಲಪಾತದಲ್ಲಿ ಚಿತ್ರೀಕರಿಸಲಾಗಿದೆ.ಮಣಿರತ್ನಂ ಅವರು  ದೃಶ್ಯ ಮಾಂತ್ರಿಕತೆಯನ್ನು ಛಾಯಾಗ್ರಾಹಕರಾದ ವಿ. ಮಣಿಕಂದನ್ ಮತ್ತು ಸಂತೋಷ್ ಶಿವನ್ ಅವರು ಸಾಕಾರಗೊಳಿಸಿದ್ದಾರೆ. 

90ರ ದಶಕದ ಐಕಾನಿಕ್ 'ದಿಲ್ ಸೆ' ಸಿನಿಮಾದ ಬ್ಲಾಕ್‌ಬಸ್ಟರ್ ಹಾಡು 'ಚೈಯ್ಯ ಚಯ್ಯ' ಹಾಡನ್ನು ತಮಿಳುನಾಡಿನ ಊಟಿಯಲ್ಲಿ ಚಲಿಸುವ ಬ್ಲೂ ಮೌಂಟೇನ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಚಿತ್ರೀಕರಿಸಿದ್ದು, ಇದು ಭಾರತೀಯ ಚಿತ್ರರಂಗದಲ್ಲಿಯೇ ಒಂದು ಅದ್ಭುತ ಪ್ರಯೋಗ.

1995 ರಲ್ಲಿ ಬಿಡುಗಡೆಯಾದ ಮಣಿರತ್ನಂ ಅವರ ಬಾಂಬೆ ಚಿತ್ರದ ಜನಪ್ರಿಯ ತು ಹಿ ರೇ  ಹಾಡನ್ನು ಕೇರಳದ ಬೇಕಲ್ ಕೋಟೆಯಲ್ಲಿ ಚಿತ್ರೀಕರಿಸಲಾಗಿದೆ.

Latest Videos

click me!