ಐಶ್ವರ್ಯಾ ರೈ ಅತ್ತಿಗೆ ಶ್ರೀಮಾ ರೈ ಹೀರಾಮಂಡಿ ಲುಕ್‌ ವೈರಲ್‌ !

Published : Jun 14, 2024, 04:16 PM IST

ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರ ಅತ್ತಿಗೆ ಶ್ರೀಮಾ ರೈ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಶ್ರೀಮಾ ಅವರು ಹೀರಾಮಂಡಿ ನೋಟವನ್ನು ಮರು ಸೃಷ್ಷಿಸಿದ್ದು, ಅವರ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸರಣಿ (Web Series), ಹೀರಾಮಂಡಿ: ದಿ ಡೈಮಂಡ್ ಬಜಾರ್, ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಗ್ಲಿಟ್ಜಿ ಸೆಟ್‌ನಿಂದ ಹಿಡಿದು ಸರಣಿಯ ಹಾಡುಗಳವರೆಗೆ ಉಡುಪುಗಳು ಮತ್ತು ಆಭರಣಗಳವರೆಗೆ, ಬನ್ಸಾಲಿಯವರ ಹೀರಾಮಂಡಿಯ ಪ್ರತಿಯೊಂದು ಅಂಶವು ಮ್ಯಾಜಿಕ್ ಅನ್ನು ಸೃಷ್ಟಿಸಿದೆ. 

PREV
17
ಐಶ್ವರ್ಯಾ ರೈ ಅತ್ತಿಗೆ ಶ್ರೀಮಾ ರೈ  ಹೀರಾಮಂಡಿ ಲುಕ್‌ ವೈರಲ್‌ !

ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸರಣಿ, ಹೀರಾಮಂಡಿ: ದಿ ಡೈಮಂಡ್ ಬಜಾರ್ ಕೆಲವರಿಂದ ಟೀಕೆಗೆ ಗೂರಿಯಾದರೂ, ಸೆಟ್ಟಿಂಗ್ಸ್, ಉಡುಗೆ ತೊಡುಗೆಗಳು ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ.

27

ಸಾಕಷ್ಷು ಜನರು ಅದರ ಹಾಡುಗಳು, ನೃತ್ಯ ಸರಣಿಗಳನ್ನು ಮರುಸೃಷ್ಟಿಸುತ್ತಿದ್ದಾರೆ. ಅದೇ ರೀತಿ , ಐಶ್ವರ್ಯಾ ರೈ ಬಚ್ಚನ್ ಅವರ ಅತ್ತಿಗೆ ಶ್ರೀಮಾ ರೈ ಅವರು ಹೀರಾಮಂಡಿ ನೋಟವನ್ನು ರೀಕ್ರೀಯೇಟ್‌ ಮಾಡಿದ್ದಾರೆ.

37

ಶ್ರೀಮಾ ರೈ ಅವರು ಹೀರಾಮಂಡಿ ನೋಟವನ್ನು ಮರುಸೃಷ್ಟಿಸಿ, ಛಾಯಾಚಿತ್ರಕ್ಕೆ ಪೋಸ್ ನೀಡಿದ್ದಾರೆ. ಜೂನ್‌ 13 ರಂದು ಪೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

47

'ನನ್ನ ಪಾತ್ರಕ್ಕೆ ನೀವು ಏನು ಹೆಸರಿಸುತ್ತೀರಿ?' ನಾನು ವೈಯಕ್ತಿಕವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಹೀರಾಮಂಡಿ ಇಷ್ಟವಾಯಿತು. ಮುಂದಿನ ಸೀಸನ್‌ಗಾಗಿ ಎದುರು ನೋಡುತ್ತಿದ್ದೇನೆ. ಅದಿತಿ ರಾವ್ ಹೈದರಿ ಅವರ ಬಿಬ್ಬಿಜಾನ್ ಮತ್ತು ರಾಣಿ ಮನೀಶಾ ಕೊಯಿರಾಲಾ ಅವರ ಪಾತ್ರಗಳು ಇಷ್ಟವಾದವು," ಎಂದು ಶ್ರೀಮಾ ಪೋಟೋಗಳ ಜೊತೆ ಬರೆದಿದ್ದಾರೆ.

57

ಫೋಟೋಗಳನ್ನು ಹಂಚಿಕೊಂಡ ಶ್ರೀಮಾ, ಆನ್‌ಲೈನ್‌ನಲ್ಲಿ ಸಾಕಷ್ಟು ಮೆಚ್ಚುಗೆ  ಗಳಿಸಿದ್ದಾರೆ. ಫೋಟೋಗಳಿಗೆ ಪ್ರತಿಕ್ರಿಯಿಸುವಾಗ, ಒಬ್ಬ ವ್ಯಕ್ತಿ 'ಬ್ಯೂಟಿಫುಲ್' ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು 'ಅದ್ಭುತವಾಗಿದ್ದೀರಿ' ಎಂದು ಹೇಳಿದ್ದಾರೆ. ಜೊತೆಗೆ 'ನಾನು ನಿಮ್ಮ ಪಾತ್ರಕ್ಕೆ ತಾರಾ ಎಂದು ಹೆಸರಿಸುತ್ತೇನೆ' ಎಂದು ಇನ್ನೊಬ್ಬರೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

 

67

ಮಾಜಿ ಬ್ಯಾಂಕರ್ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರುವ ಶ್ರೀಮಾ ರೈ, ಐಶ್ವರ್ಯಾ ಅವರ ಸಹೋದರ, ಆದಿತ್ಯ ರೈ ಅವರ ಪತ್ನಿ ಮತ್ತು ಗ್ಲಾಮರ್ ಜಗತ್ತಿನಲ್ಲಿ ಪರಿಚಿತ ಹೆಸರು.

77

ಶ್ರೀಮಾ ರೈ ಹುಟ್ಟಿದ್ದು ಮಂಗಳೂರಿನಲ್ಲಿ, ಬೆಳೆದದ್ದು ಅಮೆರಿಕದ ಫಿಲಡೆಲ್ಫಿಯಾದಲ್ಲಿ. ಆಕೆಯ ತಂದೆ ಅಮೆರಿಕದಲ್ಲಿ ವಿಜ್ಞಾನಿ, ಮತ್ತು ಆಕೆಯ ತಾಯಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದರು.  

Read more Photos on
click me!

Recommended Stories