Maldives ನೀಲಿ ಸಮುದ್ರದ ಮುಂದೆ ಬಿಕಿನಿಯಲ್ಲಿ Pooja Hegde: ಇದೆಲ್ಲಾ ಸಿನಿಮಾ ಅವಕಾಶಕ್ಕಾಗಿ ಎಂದ ಫ್ಯಾನ್ಸ್‌!

Published : Oct 17, 2023, 12:30 AM IST

ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಪೂಜಾ ಹೆಗ್ಡೆ ಇದೀಗ ಹಸಿರು ಬಿಕಿನಿ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV
17
Maldives ನೀಲಿ ಸಮುದ್ರದ ಮುಂದೆ ಬಿಕಿನಿಯಲ್ಲಿ Pooja Hegde: ಇದೆಲ್ಲಾ ಸಿನಿಮಾ ಅವಕಾಶಕ್ಕಾಗಿ ಎಂದ ಫ್ಯಾನ್ಸ್‌!

ಪೂಜಾ ಹೆಗ್ಡೆ 'ಒಕ ಲೈಲಾ ಕೋಸಂ', ಮುಕುಂದ','ಸಾಕ್ಷ್ಯಂ',' ಮಹರ್ಷಿ','ಹೌಸ್‌ಫುಲ್','ಅಲಾ ವೈಕುಂಠಪುರಮುಲೋ' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಪೂಜಾ ಹೆಗ್ಡೆ ಹಸಿರು ಬಿಕಿನಿಯಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 

27

ಬಿಕಿನಿಯಲ್ಲಿ ಪೂಜಾ ಹೆಗ್ಡೆ ಹಾಟ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದು, ಬುಟ್ಟ ಬೊಮ್ಮ ಎಂದಿದ್ದಾರೆ. ಜೊತೆಗೆ ಪೂಜಾ ಹಾಟ್‌ ಬಿಕಿನಿ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹಲ್ ಚಲ್ ಎಬ್ಬಿಸಿದ್ದು, ಇದೆಲ್ಲಾ ಸಿನಿಮಾ ಅವಕಾಶಕ್ಕಾಗಿ  ಎಂದು ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ.

37

ಇತ್ತೀಚೆಗಷ್ಟೇ ಪೂಜಾ ಹೆಗ್ಡೆ ಹಿಲ್ಟನ್ ಮಾಲ್ಡೀವ್ಸ್‌ನಲ್ಲಿ ತಮ್ಮ 33 ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ಅಲ್ಲದೇ  ಬೋಲ್ಡ್‌ ಫೋಟೋಗಳ ಮೂಲಕ ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದರು.

47

ಪೂಜಾ ಹೆಗ್ಡೆ ಹಿಲ್ಟನ್ ಮಾಲ್ಡೀವ್ಸ್‌ನಲ್ಲಿ ನೀಲಿ ಸಮುದ್ರದಲ್ಲಿ ಬಲೆಯ ಮೇಲೆ ತುಂಡುಡುಗೆ ಧರಿಸಿ ರೊಮ್ಯಾಂಟಿಕ್ ಭಂಗಿಯಲ್ಲಿ ಮಲಗಿ ಫೋಟೋಕ್ಕೆ ಪೋಸ್‌ ನೀಡಿದ್ದರು. ನಾನು ಸದ್ಯಕ್ಕೆ ಲಭ್ಯವಿಲ್ಲ ಎಂಬ ಕ್ಯಾಪ್ಷನ್ ಮೂಲಕ ಶಾರ್ಟ್ ಸ್ಕರ್ಟ್ ಧರಿಸಿ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದರು. 

57

ಜನ್ಮದಿನವನ್ನು ಸ್ನೇಹಿತರು ಅಥವಾ ಕುಟುಂಬದ ಸದಸ್ಯರ ನಡುವೆ ಆಚರಿಸಲಾಗುತ್ತದೆ. ಆದರೆ ಈ ನಟಿ ಏಕಾಂತವಾಗಿ ಕಡಲತೀರದ ಪ್ರಶಾಂತವಾದ ರೆಸ್ಟೋರೆಂಟ್‌ನಲ್ಲಿ ಕೇಕ್ ಕತ್ತರಿಸುವ ಮೂಲಕ ತನ್ನ ಬರ್ತ್​ಡೇ ಆಚರಿಸಿಕೊಂಡಿದ್ದರು. 

67

ನಾಗ ಚೈತನ್ಯ ಅಭಿನಯದ 'ಒಕಾ ಲೈಲಾ ಪಾರೋ' ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದ ಪೂಜಾ ಹೆಗ್ಡೆ ನಂತರ ವರುಣ್ ಅಭಿನಯದ 'ಮುಕುಂದ' ಚಿತ್ರದ ಮೂಲಕ ಮತ್ತಷ್ಟು ಫೇಮಸ್ ಆದರು. ಸತತ ಫ್ಲಾಪ್ ಗಳಿಂದ ಕಂಗೆಟ್ಟಿರುವ ಪೂಜಾ ಹೆಗಡೆ ಒಳ್ಳೆ ಹಿಟ್ ಗಾಗಿ ಕಾಯುತ್ತಿದ್ದಾರೆ.

77

ಈ ನಟಿಗೆ ಈಗ ಅಷ್ಟಾಗಿ ಅವಕಾಶಗಳು ಸಿಗುತ್ತಿಲ್ಲ. ಪೂಜಾ ಹೆಗ್ಡೆ ಚಿತ್ರಗಳು ಸತತ ಸೋಲು ಕಾಣುತ್ತಿವೆ. ರಾಧೇಶ್ಯಾಮ್‌ನಿಂದ ಪ್ರಾರಂಭಿಸಿ, ಬೀಸ್ಟ್ ಮತ್ತು ಆಚಾರ್ಯ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಾಣುತ್ತಿವೆ. ಇದರಿಂದ ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories