ನನ್ನ ದೃಷ್ಟಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಚಿರಂಜೀವಿ ನಟಿಸಿದ ಪ್ರತಿಬಂಧ್ ಎಂದು ಹೇಳಿದರು. ಅದೇ ರೀತಿ ನಾಗಾರ್ಜುನ್ ನಟಿಸಿದ ಶಿವ, ರಜನೀಕಾಂತ್ ನಟಿಸಿದ ಫಾಲಾಡಿ ಮುಕ್ಕಾ ಚಿತ್ರಗಳು ಮೊದಲಿಗೆ ಬಂದ ಪ್ಯಾನ್ ಇಂಡಿಯಾ ಚಿತ್ರಗಳು ಎಂದು ಅನುರಾಗ್ ಕಶ್ಯಪ್ ಉದಾಹರಣೆಯಾಗಿ ತಿಳಿಸಿದರು.
ಅನುರಾಗ್ ಕಶ್ಯಪ್ ಬಾಲಿವುಡ್ ನಲ್ಲಿ ನಿರ್ದೇಶಕರಾಗಿ ಮಿಂಚುತ್ತಿದ್ದಾರೆ. ಸೌತ್ ನಲ್ಲಿ ನಟನಾಗಿ ಕೂಡ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ವಿಜಯ್ ಸೇತುಪತಿ ಮಹಾರಾಜ ಚಿತ್ರದಲ್ಲಿ ಅನುರಾಗ್ ವಿಲನ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.