ತಮ್ಮ ಮೊದಲ ಹಿಂದಿ ಚಿತ್ರ ಓಂ ಶಾಂತಿ ಓಂ ಮೂಲಕ ಅಭಿಮಾನಿಗಳ ಮನದರಸಿಯಾದ ದೀಪಿಕಾ ಪಡುಕೋಣೆ (Deepika Padukone), ತಮ್ಮ ಮುಖದ ಹೊಳಪನ್ನು ಎಂದಿಗೂ ಕಳೆದುಕೊಂಡಿಲ್ಲ. ಆರಂಭದಲ್ಲಿ ಹೇಗಿದ್ದರೂ, ಹಾಗೇಯೇ ಇವತ್ತು ಕೂಡ ಇದ್ದಾರೆ ನಟಿ. ವಿಶೇಷವಾಗಿ ನಾವು ಅವರ ಮದುವೆಯ ಸಮಯದ ಬಗ್ಗೆ ಮಾತನಾಡಿದರೆ, ನಟಿಯ ಮುಖವು ಎಷ್ಟೊಂದು ಹೊಳೆಯುತ್ತಿತ್ತು, ಅನ್ನೋದನ್ನು ನೀವು ನೋಡಿರಬಹುದು. ಇವತ್ತು ಕೂಡ ದೀಪಿಕಾ ಹೊಳಪು (glowing skin) ಹಾಗೇಯೇ ಇದೆ. ದೀಪಿಕಾಳ ಸೌಂದರ್ಯ ನೋಡಿ ಎಲ್ಲರೂ ಅವಳಂತೆ ಕೂದಲು ಮತ್ತು ಚರ್ಮ ಹೊಂದಬೇಕೆಂದು ಬಯಸುತ್ತಾರೆ.