ಹ್ಯಾಂಡ್‌ಲೂಮ್‌ ಸೀರೆಗಳಿಗೆ ಮನಸೋತ ಭಾರತೀಯ ಸೆಲೆಬ್ರೆಟಿಗಳು

Published : Feb 14, 2023, 06:34 PM IST

ಸೀರೆ ನಮ್ಮ ಭಾರತ ದೇಶದ ವಿಶೇಷ ಉಡುಗೆ. ಅದರಲ್ಲೂ ಕೈಮಗ್ಗದ ಸೀರೆಗಳು ಸಖತ್‌ ಯೂನಿಕ್‌ ಎನಿಸಿಕೊಂಡಿವೆ. ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಅಲ್ಲಿಯದೇ ಆದ ಸೀರೆಗಳು ಸಾಕಷ್ಷು ಜನಪ್ರಿಯವಾಗಿವೆ. ಸಿನಿಮಾ ನಟಿಯರು ಸಹ ಈ ಹ್ಯಾಂಡ್‌ಲೂಮ್‌ ಸೀರೆಗಳಿಗೆ ಮನಸೋತಿದ್ದಾರೆ ಮತ್ತು ಅದನ್ನು ಹಲವು ಬಾರಿ ಪ್ರದರ್ಶಿಸಿದ್ದಾರೆ ಕೂಡ. 

PREV
19
ಹ್ಯಾಂಡ್‌ಲೂಮ್‌ ಸೀರೆಗಳಿಗೆ ಮನಸೋತ ಭಾರತೀಯ ಸೆಲೆಬ್ರೆಟಿಗಳು

ವಿದ್ಯಾ ಬಾಲನ್ ತಮ್ಮ ಶಕುಂತಲಾ ಸಿನಿಮಾದ ಚಿತ್ರದ ಪ್ರಮೋಷನ್‌ ಸಮಯದಲ್ಲಿ ಹೀಗೆ ಕಾಣಿಸಿಕೊಂಡಿದ್ದರು. ಈ ಸೀರೆಯನ್ನು ಕಾರೈಕುಡಿ ಚೆಟ್ಟಿನಾಡ್ ಕಾಟನ್‌ ನೇಕಾರರಿಂದ ಖರೀದಿಸಲಾಗಿದೆ ಎಂದು ವಿದ್ಯಾ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ

29

ಮಾಮ್ ಚಿತ್ರದಲ್ಲಿನ ಅಸಾಧಾರಣ ಅಭಿನಯಕ್ಕಾಗಿ ಶ್ರೀದೇವಿ ಅವರು ಪಡೆದ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲು ಹೋಗುವಾಗ ಜಾನ್ವಿ ಕಪೂರ್‌ ತಾಯಿಗೆ ಹೆಚ್ಚು ಇಷ್ಟವಾದ  ಈ ಸೀರೆಯನ್ನು ಆರಿಸಿಕೊಂಡಿದ್ದರು. 

39

ಬಾಲಿವುಡ್‌ನ ಫ್ಯಾಷನ್‌ ಐಕಾನ್‌ ಎಂದೇ ಫೇಮಸ್‌ ಆಗಿರುವ ನಟಿ ಸೋನಮ್‌ ಕಪೂರ್‌ ಖಾದಿ ಸೀರೆಯಲ್ಲಿ. ಅವರ ಸಹೋದರಿ ಸ್ಟೈಲಿಸ್ಟ್‌ ರೀಹಾ ಕಪೂರ್‌ ಈ ಪೋಟೋ ಸೋಶಿಯಲ್‌ ಮೀಡಿಯಾದಲ್ಲಿ ಹಿಂದೊಮ್ಮೆ ಹಂಚಿಕೊಂಡಿದ್ದರು

49

ಬಾಲಿವುಡ್‌ 90ರ ದಶಕದ ಟಾಪ್‌ ನಟಿಯಾದ ಕರಿಷ್ಮಾ ಕಪೂರ್‌ ಲಂಡನ್‌ನ ಇವೆಂಟ್‌ವೊಂದಕ್ಕೆ ಗಂಗಾ ಜಮುನಾ ಲೆನಿನ್‌ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು

59

ದೆಹಲಿಯ ಅನ್ಮೋಲ್ ಜ್ಯುವೆಲರ್ಸ್ ಸ್ಟೋರ್ ಲಾಂಚ್‌ನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮಸಾಬಾ ಗುಪ್ತಾ ವಿನ್ಯಾಸಗೊಳಿಸಿದ  ಬಿಳಿ ರೇಷ್ಮೆ ಸೀರೆಯನ್ನು ಧರಿಸಿದ್ದರು 

69

ತಮ್ಮ ಸಿನಿಮಾ ಸೂಯಿ ಧಾಗಾದ ಪ್ರಚಾರಕ್ಕಾಗಿ ಕೋಲ್ಕತ್ತಾಗೆ ಬೇಟಿ ನೀಡಿದಾಗ ಅನುಷ್ಕಾ ಶರ್ಮಾ ಬಿಳಿ ಕೈಮಗ್ಗದ ಕಾಟನ್ ಸೀರೆಯನ್ನು ನೀಲಿ ಮತ್ತು ಬಿಳಿ ಚೆಕ್ಸ್‌ ಬ್ಲೌಸ್‌ನೊಂದಿಗೆ ಧರಿಸಿದ್ದರು

79

Woven 2017 ಫ್ಯಾಷನ್ ಶೋನಲ್ಲಿ ಸಮಂತಾ ರುತ್ ಪ್ರಭು ಕಾಣಿಸಿಕೊಂಡಿದ್ದು ಹೀಗೆ. ಕೈಮಗ್ಗದ ಸೀರೆಯನ್ನು ಹೀಗೆ ಡಿಫೆರೆಂಟ್‌ ಆಗಿ ಉಟ್ಟು ಪೋಸ್‌ ನೀಡಿದ್ದರು ನಟಿ.

89

ಕೈಮಗ್ಗದ ಸೀರೆಗಳು ನಿರಂತವಾಗಿ ಸೆಲೆಬ್ರಿಟಿಗಳಿಂದ ಸ್ಥಿರವಾದ ಪ್ರೋತ್ಸಾಹವನ್ನು ಪಡೆದಿವೆ. ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ಚಂದೇರಿ ಹ್ಯಾಂಡ್‌ಲೂಮ್‌ ಸೀರೆಯಲ್ಲಿ.

99

ಬಾಲಿವುಡ್‌ನಿಂದ ದಕ್ಷಿಣದವರೆಗೆ ಸಿನಿಮಾ ನಟಿಯರು ಹಲವು ಬಾರಿ ವಿಶೇಷ ಸಂದರ್ಭಕ್ಕಾಗಿ ಹ್ಯಾಂಡ್‌ಲೂಮ್‌ ಸೀರೆಗಳನ್ನು ಆರಸಿಕೊಂಡಿರುವುದು ಕಂಡುಬಂದಿದೆ.ಪರಿಸರ ಪ್ರೇಮಿಯಾದ ನಟಿ ದಿಯಾ ಮಿರ್ಜಾ ಅವರಿಗೆ ಕೈಮಗ್ಗದ ಸೀರೆಗಳು ಸಹ ಇಷ್ಷ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories