Neha Bhasin Fashion: ನೇರಳೆ ಬ್ರಾಲೆಟ್‌ನಲ್ಲಿ ಮಿಂಚಿದ ನಟಿ, ಉರ್ಫಿಯ ದೊಡ್ಡಕ್ಕನಾ ಎಂದ ನೆಟ್ಟಿಗರು

Published : Dec 25, 2021, 11:42 AM IST

ಉರ್ಫಿ ಜಾವೇದ್ ಮಾಡರ್ನ್ ಡ್ರೆಸ್‌ನಲ್ಲಿ ಮಿಂಚೋದು ಹೊಸದೇನಲ್ಲ. ಅದರಲ್ಲೂ ಚಿತ್ರ ವಿತ್ರ ಬಟ್ಟೆ ಹಾಕೋದು ತುಂಬಾ ಕಾಮನ್. ಈಗ ನೇಹಾ ಬಾಸಿನ್ ಕೂಡಾ ಇದೇ ಅವತಾರದಲ್ಲಿ ಕಾಣಿಸ್ಕೊಂಡಿದ್ದಾರೆ.

PREV
16
Neha Bhasin Fashion: ನೇರಳೆ ಬ್ರಾಲೆಟ್‌ನಲ್ಲಿ ಮಿಂಚಿದ ನಟಿ, ಉರ್ಫಿಯ ದೊಡ್ಡಕ್ಕನಾ ಎಂದ ನೆಟ್ಟಿಗರು

ಬಿಗ್‌ಬಾಸ್ 15ರ ಮಾಜಿ ಸ್ಪರ್ಧಿಗಳಾದ ನೇಹಾ ಭಾಸಿನ್ ಹಾಗೂ ರಾಜೀವ್ ಅಡಟಿಯಾ ಅವರು ಇತ್ತೀಚೆಗೆ ಜೊತೆಯಾಗಿ ಡಿನ್ನರ್ ಮಾಡಿದರು. ಡಿನ್ನರ್ ಡೇಟ್‌ಗಾಗಿ ಮುಂಬೈನಲ್ಲಿ ಹೊರಗೆ ಕಾಣಿಸಿಕೊಂಡ ಇವರು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದಾರೆ.

26

ಆದರೆ ಈ ಜೋಡಿಗಿಂತಲೂ ನೆಟ್ಟಿಗರ ಗಮನ ಸೆಳೆದದ್ದು ನೇಹಾ ಭಾಸಿನ್ ಧರಿಸಿದ್ದ ಡ್ರೆಸ್. ಹೌದು ನಟಿ ಪರ್ಪಲ್ ಬ್ರಾಲೆಟ್‌ನಲ್ಲಿ ಬೋಲ್ಡ್ ಆಗಿ ಡ್ರೆಸ್ ಮಾಡಿಕೊಂಡು ಕಾಣಿಸಿಕೊಂಡಿದ್ದಾರೆ.

36

ಗಾಯಕಿಯಾಗಿ ಮಿಂಚಿರೋ ನೇಹಾ ಭಾಸಿನ್ ಈಗ ಉರ್ಫಿಯಂತೆಯೇ ಡ್ರೆಸ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ. ಪರ್ಪಲ್ ಲೆದರ್ ಬ್ರಾಲೆಟ್ ಧರಿಸಿದ್ದರು ನೇಹಾ. ಇದಕ್ಕೆ ಡಾರ್ಕ್ ಕಲರ್ ಲೆದರ್ ಸ್ಕರ್ಟ್ ಮ್ಯಾಚ್ ಮಾಡಿದ್ದರು.

46

ಇಯರಿಂಗ್ಸ್ ಹಾಗೂ ಕ್ಲಚ್‌ನೊಂದಿಗೆ ಲುಕ್ ಕಂಪ್ಲೀಟ್ ಆಗಿತ್ತು. ಇದನ್ನು ನೋಡಿದ ನೆಟ್ಟಿಗರು ಇದ್ಯಾರು ಉರ್ಫಿಯ ದೊಡ್ಡಕ್ಕನಾ ? ಉರ್ಫಿಯನ್ನು ಕಾಪಿ ಮಾಡಿದ್ರಾ ಎಂದೆಲ್ಲಾ ಕಮೆಂಟಿಸುತ್ತಿದ್ದಾರೆ.

56

ಮಾಜಿ ಬಿಗ್ ಬಾಸ್ OTT ಸ್ಪರ್ಧಿ ಇದೇ ರೀತಿಯ ಬಟ್ಟೆಗಳನ್ನು ಧರಿಸಿದ್ದರಿಂದ ನೇಹಾ ಅವರನ್ನು ಉರ್ಫಿಗೆ ಹೋಲಿಸಲಾಯಿತು. ಉರ್ಫಿ ತನ್ನ ಫ್ಯಾಷನ್ ಆಯ್ಕೆಗಳಿಗಾಗಿ ಭಾರೀ ಟ್ರೋಲ್ಗೆ ಒಳಗಾಗುತ್ತಿದ್ದಾರೆ.

66

ಕೆಂಡಾಲ್ ಜೆನ್ನರ್ ಮತ್ತು ಬೆಲ್ಲಾ ಹಡಿದ್ ಅವರನ್ನು ನಕಲು ಮಾಡಿದ ಆರೋಪವೂ ಉರ್ಫಿ ಮೇಲಿದೆ. ಈಗ ಉರ್ಫಿಯನ್ನು ಕಾಪಿ ಮಾಡುತ್ತಿದ್ದಾರೆ ನೇಹಾ ಭಾಸಿನ್

Read more Photos on
click me!

Recommended Stories