ತಮ್ಮ ಇಬ್ರಾಹಿಂ ಆಲಿ ಖಾನ್‌ ಬಗ್ಗೆ ಗುಟ್ಟು ರಟ್ಟು ಮಾಡಿದ ಸಾರಾ ಆಲಿ ಖಾನ್‍!

Published : May 20, 2023, 05:40 PM IST

ಈ ದಿನಗಳಲ್ಲಿ ಬಾಲಿವುಡ್‌  ನಟಿ ಸಾರಾ ಆಲಿ ಖಾನ್‌ (Sara Ali Khan)  ಸುದ್ದಿಯಲ್ಲಿದ್ದಾರೆ. ಈ ವರ್ಷ Cannesಗೆ (2023) ಪಾದಾಪರ್ಣೆ ಮಾಡಿದ ಸಾರಾ ತಮ್ಮ ಇಬ್ರಾಹಿಂ ಆಲಿ ಖಾನ್‌ಗೆ  (Ibrahim Ali Khan) ಸಂಬಂಧ ಪಟ್ಟ ದೊಡ್ಡ ಗುಟ್ಟೊಂದನ್ನು ಬಹಿರಂಗ ಪಡಿಸಿದ್ದಾರೆ. ಏನು ಗೊತ್ತಾ ಆ ವಿಷಯ? ವಿವರ ಇಲ್ಲಿದೆ.

PREV
17
ತಮ್ಮ ಇಬ್ರಾಹಿಂ ಆಲಿ ಖಾನ್‌ ಬಗ್ಗೆ ಗುಟ್ಟು ರಟ್ಟು ಮಾಡಿದ ಸಾರಾ ಆಲಿ ಖಾನ್‍!

ಸಾರಾ ಅಲಿ ಖಾನ್  ಇತ್ತೀಚೆಗೆ ಅನುಪಮಾ ಚೋಪ್ರಾ ಅವರ ಫಿಲ್ಮ್ ಕಂಪ್ಯಾನಿಯನ್‌ನೊಂದಿಗಿನ ಸಂವಾದದಲ್ಲಿ, ಅವರ ಸಹೋದರ ಇಬ್ರಾಹಿಂ ಅಲಿ ಖಾನ್ ಅವರು ತಮ್ಮ ದೊಡ್ಡ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ ಎಂದಿದ್ದರು. 

27

ಅಷ್ಟೇ ಅಲ್ಲ ಅವರು ನಟನಾಗಿ 'ತನ್ನ ಮೊದಲ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ' ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಆದರೆ ಸಿನಿಮಾಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ವಿಷಯವನ್ನೂ ಅವರು ಹೇಳಿಲ್ಲ. 

37

ತನ್ನ ತಾಯಿ ಮತ್ತು ನಟಿ ಅಮೃತಾ ಸಿಂಗ್ ಬಗ್ಗೆ ಮಾತನಾಡುತ್ತಾ, ಸಾರಾ, 'ನಾವಿಬ್ಬರೂ ಭಾವನಾತ್ಮಕ ಜೀವಿಗಳು. ಇಬ್ರಾಹಿಂ ಮನೆಗೆ ಬಂದಾಗ ನಾನು ಅದನ್ನು ಫೀಲ್ ಮಾಡಿಕೊಳ್ಳುತ್ತೇನೆ,' ಎಂದು ಹೇಳಿದರು. 

47

'ನಿಮಗೆ ಗೊತ್ತಾ, ಅವನು ನಟನಾಗಿ ತನ್ನ ಮೊದಲ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾನೆ. ಅದನ್ನು ನಾನು ನಂಬಲು ಸಾಧ್ಯವಿಲ್ಲ.   ಅವನು ಮನೆಗೆ ಬಂದಾಗಲೆಲ್ಲಾ, ಅದು ಶಾಲೆಯಿಂದ ಅಥವಾ ಶೂಟಿಂಗ್‌ನಿಂದ ಆಗಿರಲಿ, ನಾವಿಬ್ಬರೂ ತುಂಬಾ ಅಫೆಕ್ಷನೇಟ್ ಆಗಿರುತ್ತೇವೆ. ನನ್ನ ತಾಯಿಯ ಹೃದಯ ನನ್ನಲ್ಲಿರುವುದಕ್ಕೆ ನಂಗೆ ತಮ್ಮನೊಡನೆ ಅಂಥದ್ದೊಂದು ಬಾಂಧವ್ಯವಿದೆ.. ಏಕೆಂದರೆ ನಾವು ಇಬ್ರಾಹಿಂನನ್ನು ಅದೇ ರೀತಿ ನಡೆಸಿಕೊಳ್ಳುತ್ತೇವೆ,' ಎಂದು ಸಾರಾ ಹೇಳಿಕೊಂಡಿದ್ದಾರೆ.

57

ಆಲಿಯಾ ಭಟ್, ರಣವೀರ್ ಸಿಂಗ್, ಜಯಾ ಬಚ್ಚನ್, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ನಟಿಸಿರುವ ಕರಣ್ ಜೋಹರ್ ಅವರ ಮುಂಬರುವ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಕ್ಕೆ ಇಬ್ರಾಹಿಂ ಆಲಿ ಖಾನ್‌ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
 

67

ಈ ನಡುವೆ  ಕೇನ್ಸ್ ಚಲನಚಿತ್ರೋತ್ಸವದ 76ನೇ ಆವೃತ್ತಿಯಲ್ಲಿ  ಚೊಚ್ಚಲ ಪ್ರವೇಶ ಮಾಡಿದ ನಂತರ ಸಾರಾ ಅಲಿ ಖಾನ್ ಮುಂಬೈಗೆ ಮರಳಿದರು. ಶನಿವಾರ ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಆಕೆ ಫೋಟೋಗೆ ಫೋಸ್ ನೀಡಿದ್ದಾರೆ.

77

ಇಬ್ರಾಹಿಂ ಮತ್ತು ಸಾರಾ ಅಲಿ ಖಾನ್ ಅವರು ಸೈಫ್ ಅಲಿ ಖಾನ್ ಅವರ ಮಾಜಿ ಪತ್ನಿ ಮತ್ತು ನಟಿ ಅಮೃತಾ ಸಿಂಗ್ ಅವರ ಮಕ್ಕಳು. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ವರ್ಷ ಮತ್ತು 1991 ರಲ್ಲಿ ವಿವಾಹವಾದರು. ಹದಿಮೂರು ವರ್ಷಗಳ ದಾಂಪತ್ಯದ ನಂತರ ಈ ದಂಪತಿ 2004ರಲ್ಲಿ ವಿಚ್ಛೇದನ ಪಡೆದರು.

Read more Photos on
click me!

Recommended Stories