Cannes 2023: ಕಾಂಚೀಪುರಂ ಸೀರೆಯಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಸೌತ್ ಸ್ಟಾರ್

First Published | May 19, 2023, 4:37 PM IST

Cannes 2023: ಕಾಂಚೀಪುರಂ ಸೀರೆಯ ಧರಿಸಿ ನಟಿ ಖುಷ್ಬೂ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. 

ಕಾನ್ ಫಿಲ್ಮ್ ಫೆಸ್ಟಿವಲ್ ಅದ್ದೂರಿಯಾಗಿ ಪ್ರಾರಂಭವಾಗಿದ್ದು ಸಿನಿ ಗಣ್ಯರು ಮಿಂಚುತ್ತಿದ್ದಾರೆ. ಜಗತ್ತಿನ ಅನೇಕ ಸಿನಿಮಾ ತಾರೆಯರು ಕಾನ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ನಟಿಮಣಿಯರ ಡ್ರೆಸ್, ಮೇಕಪ್ ನೋಡುವುದೇ ವಿಶೇಷವಾಗಿರುತ್ತದೆ.  

ಈ ಬಾರಿ ಕೂಡ ಅನೇಕ ನಟಿಯರು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ವಿಚಿತ್ರ ಡ್ರೆಸ್ ಧರಿಸಿ ಕಂಗೊಳಿಸಿದ್ದಾರೆ. ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬಾಲಿವುಡ್‌ನ ಅನೇಕ ಗಣ್ಯರು ಸಹ ಕಾಣಿಸಿಕೊಂಡಿದ್ದಾರೆ. ಈ ಬಾರಿ ಅನೇಕ ನಟಿಯರು ಮೊದಲ ಬಾರಿಗೆ ಕಾನ್‌ ರೆಡ್ ಕಾರ್ಪೆಟ್ ವಾಕ್ ಮಾಡಿದ್ದಾರೆ. 

Tap to resize

ವಿಶೇಷ ಎಂದರೆ ಸೌತ್ ಸ್ಟಾರ್ ನಟಿ ಖುಷ್ಬೂ ಸುಂದರ್ ಕೂಡ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಖುಷ್ಬೂ ಕಾನ್ ನಲ್ಲಿ ಮಿಂಚಿದ್ದಾರೆ. ಖುಷ್ಬೂ ಅಪ್ಪಟ ಭಾರತೀಯಳಾಗಿ ಅದರಲ್ಲೂ ದಕ್ಷಿಣ ಭಾರತದ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. 

ಖುಷ್ಬೂ ಸಂಪೂರ್ವಾಗಿ ಸೀರೆಯಲ್ಲಿ ಮಿಂಚಿದ್ದಾರೆ. ಅದರಲ್ಲೂ ಕಾಂಚೀವರಂ ಸೀರಿಯಲ್ಲಿ ಖುಷ್ಬೂ ರೆಡ್ ಕಾರ್ಪೆಟ್ ವಾಕ್ ಮಾಡಿದ್ದಾರೆ. 

ಕಾಂಚೀವರಂ ಸೀರೆ ಧರಿಸಿದ ಖುಷ್ಬೂ ಸುಂದರ್​ ಅವರು ಹೆಮ್ಮೆಯಿಂದ ನಮ್ಮ ಸಂಸ್ಕೃತಿ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ನೇಕಾರರಿಗೆ ಉತ್ತೇಜನ ನೀಡುವ ಸಲುವಾಗಿ ಖುಷ್ಬೂ ಅವರು ಈ ಸೀರೆ ಧರಿಸಿ ಕಾನ್​ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. 

ನಾನು ಹೋದಲ್ಲೆಲ್ಲಾ ನನ್ನ ಭಾರತೀಯತೆಯನ್ನು ಹೆಮ್ಮೆಯಿಂದ ಸಾಗಿಸುತ್ತೇನೆ. ಕಾನ್‌ನಲ್ಲೂ ಕೂಡ.   ಎಲ್ಲೇ ಇ್ದದರೂ ಭಾರತೀಯವಾಗಿರಬೇಕು ಎಂದು ಹೇಳಿದ್ದಾರೆ. 

Latest Videos

click me!