ಆದ್ರೆ ಪ್ರಭಾಸ್ರನ್ನ ಫ್ಯಾಮಿಲಿ ಪ್ರೇಕ್ಷಕರಿಗೆ ಹತ್ತಿರ ತಂದ ಸಿನಿಮಾಗಳು ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್, ಮಿರ್ಚಿ. ಡಾರ್ಲಿಂಗ್ ಸಿನಿಮಾ ನಂತರ ಹುಡುಗಿಯರಲ್ಲಿ ಪ್ರಭಾಸ್ ಕ್ರೇಜ್ ಹೆಚ್ಚಾಯ್ತು. ಪ್ರಭಾಸ್ಗೆ ಲೇಡಿ ಫ್ಯಾನ್ ಫಾಲೋಯಿಂಗ್ ತಂದುಕೊಟ್ಟ ಸಿನಿಮಾಗಳಲ್ಲಿ ಮಿಸ್ಟರ್ ಪರ್ಫೆಕ್ಟ್ ಕೂಡ ಒಂದು. ಈ ಚಿತ್ರಕ್ಕೆ ದಶರಥ್ ನಿರ್ದೇಶಕರು. ದಿಲ್ ರಾಜು ನಿರ್ಮಾಪಕರು. ಆದ್ರೆ ಮಿಸ್ಟರ್ ಪರ್ಫೆಕ್ಟ್ ಸಿನಿಮಾ ಪ್ರಭಾಸ್ ಮಾಡಬೇಕಿರಲಿಲ್ಲವಂತೆ. ಆ ಪ್ರಾಜೆಕ್ಟ್ ರಿಜೆಕ್ಟ್ ಮಾಡ್ತೀನಿ ಅಂದುಕೊಂಡಿದ್ರಂತೆ.