ಸಂಗೀತ ಮಾಂತ್ರಿಕ ಎ.ಆರ್.ರಹಮಾನ್ - ನಿರ್ದೇಶಕ ಮಣಿರತ್ನಂ ಜೋಡಿ ಎಂದರೆ ಅದು ಗೆಲುವೇ. ರೋಜಾ ಚಿತ್ರದ ಯಶಸ್ಸಿನ ನಂತರ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ ಚಿತ್ರ ತಿರುಡಾ ತಿರುಡಾ. ಈ ಚಿತ್ರದಲ್ಲಿ ಪ್ರಶಾಂತ್ ನಾಯಕರಾಗಿದ್ದರು. ಹೀರಾ, ಎಸ್.ಪಿ.ಬಿ, ಸಲೀಂ ಗೋಸ್, ಅನು ಅಗರ್ವಾಲ್ ಮುಂತಾದ ದೊಡ್ಡ ತಾರಾಗಣವೇ ಇತ್ತು. ಈ ಚಿತ್ರವು ಅತ್ಯುತ್ತಮ ವಿಶೇಷ ಪರಿಣಾಮಗಳಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿತು.