Hrithik -Saba: ನಟ ಹೃತಿಕ್ ರೋಷನ್ ಮತ್ತು ನಟಿ-ಗಾಯಕಿ ಸಬಾ ಆಜಾದ್ ಡೇಟಿಂಗ್ ಮಾಡೋ ವಿಷಯ ಎಲ್ಲರಿಗೂ ಗಗೊತ್ತಿದೆ. ಇದೀಗ ಈ ಜೋಡಿಯ ಪ್ರೀತಿಗೆ 4 ವರ್ಷ ತುಂಬಿದ್ದು, ಈ ಶುಭ ಗಳಿಗೆಯನ್ನು ಎಂಜಾಯ್ ಮಾಡಲು ಹೃತಿಕ ರೊಮ್ಯಾಂಟಿಕ್ ಫೋಟೊಗಳನ್ನು ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.
ಬಾಲಿವುಡ್‌ನ ಗ್ರೀಕ್ ಗಾಡ್ ಎಂದು ಕರೆಯಲ್ಪಡುವ ನಟ ಹೃತಿಕ್ ರೋಷನ್ (Hrithik Roshan) ತಮ್ಮ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿರುತ್ತಾರೆ. ಹೃತಿಕ್ ಗಾಯಕಿ ಹಾಗೂ ನಟಿ ಸಬಾ ಆಜಾದ್ ಅವರೊಂದಿಗೆ ಸಂಬಂಧದಲ್ಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಈ ಜೋಡಿ ರಿಲೇಶನ್’ಶಿಪ್ ನಲ್ಲಿದು, ಈ ವಿಶೇಷ ಸಂದರ್ಭವನ್ನು ಸೆಲೆಬ್ರೇಟ್ ಮಾಡಲು, ಹೃತಿಕ್ ರೋಷನ್ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ರೊಮ್ಯಾಮ್ಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
27
ಹೃತಿಕ್- ಸಭಾ
ಹೃತಿಕ್ ರೋಷನ್ ಇನ್ಸ್ಟಾಗ್ರಾಮ್ ನಲ್ಲಿ ಸಬಾ ಆಜಾದ್ ಗಾಗಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಹೃತಿಕ್ ತಮ್ಮ ಮತ್ತು ಸಬಾ ಅವರ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಅಷ್ಟೇ ಮುದ್ದಾದ ಹಾಗೂ ಪ್ರೀತಿಯ ಕ್ಯಾಪ್ಶನ್ ಜೊತೆ ಹಂಚಿಕೊಂಡಿದ್ದಾರೆ ಹೃತಿಕ್.
37
ನಿನ್ನೊಂದಿಗೆ ಜೀವನ ಸುಂದರ
"ನಿನ್ನೊಂದಿಗೆ ಜೀವನವು ಸುಂದರವಾಗಿದೆ. ನಾಲ್ಕು ವರ್ಷಗಳು ಜೊತೆಯಾಗಿರುವ ಸಂಭ್ರಮ… ಸಂಗಾತಿ" ಎಂದು ಬರೆದಿದ್ದಾರೆ. ಇದರ ಜೊತೆಗೆ ಹೃತಿಕ್ "ಪ್ರೀತಿ ಒಂದು ಕಲಿಕೆಯ ಪ್ರಕ್ರಿಯೆ(love learning). ಒಟ್ಟಿಗೆ ಇರುವುದು ಅತ್ಯಂತ ಸುಂದರವಾದ ವಿಷಯ(together is better). ಇಬ್ಬರು ಕುತೂಹಲಕಾರಿ ವ್ಯಕ್ತಿಗಳು" (curious souls) ಎಂಬ ಹ್ಯಾಶ್‌ಟ್ಯಾಗ್ ಅನ್ನು ಸೇರಿಸಿದ್ದಾರೆ.
ಹಂಚಿಕೊಂಡ ಫೋಟೋಗಳಲ್ಲಿ, ಹೃತಿಕ್ ಮತ್ತು ಸಬಾ ಒಟ್ಟಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸುತ್ತಿರುವುದು ಫೋಟೊಗಳೂ ಇವೆ. ಅಲ್ಲದೇ ಇಬ್ಬರೂ ರೊಮ್ಯಾಂಟಿಕ್ ಆಗಿ ಪೋಸ್ ನೀಡುತ್ತಿರುವ ಕೆಲವು ಹಳೆಯ ಫೋಟೋಗಳು ಸಹ ಇವೆ.
57
ಶುಭಾಶಯ ತಿಳಿಸಿದ ನೆಟ್ಟಿಗರು
ನೆಟಿಜನ್‌ಗಳು ಹೃತಿಕ್ ಅವರ ಪೋಸ್ಟ್‌ಗೆ ಕಾಮೆಂಟ್‌ಗಳಿಂದ ತುಂಬಿದ್ದಾರೆ, ಅವರಿಗೆ ಶುಭ ಹಾರೈಸಿದ್ದಾರೆ ಮತ್ತು ಅವರ ಸಂತೋಷ ಶಾಶ್ವತವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಹೃತಿಕ್ ಅವರ ಸಹೋದರಿ ಪಶ್ಮಿನಾ ರೋಷನ್ ಕೂಡ ಕಾಮೆಂಟ್ ಮಾಡಿ ಇಬ್ಬರಿಗೆ ಶುಭ ಹಾರೈಸಿದ್ದಾರೆ.
67
ಸಬಾ ಆಜಾದ್ ಯಾರು?
ಸಬಾ ಆಜಾದ್ ಒಬ್ಬ ನಟಿ, ರಂಗಭೂಮಿ ನಿರ್ದೇಶಕಿ ಮತ್ತು ಗಾಯಕಿ. ಅವರು ಇತ್ತೀಚೆಗೆ "ಸಾಂಗ್ ಆಫ್ ಪ್ಯಾರಡೈಸ್" ಚಿತ್ರದಲ್ಲಿ ಕಾಣಿಸಿಕೊಂಡರು. ಈಕೆ ದಿಲ್ ಕಬ್ಬಡಿ, ಮುಜ್ಸೆ ಫ್ರಾಂಡ್ಸ್’ಶಿಪ್ ಕರೋಗಿ, ಸ್ಟ್ರೇಂಜರ್ಸ್ ಇನ್ ದ ನೈಟ್, ಪ್ಯೂರ್ ವೆಜ್, ಕನೆಕ್ಟೆಡ್, ಹೋಮ್ ಸ್ಟೋರೀಸ್ ನಲ್ಲಿ ನಟಿಸಿದ್ದಾ ಸಬಾ.
77
ಸುಸೇನ್ ಜೊತೆ 2014ರಲ್ಲಿ ವಿಚ್ಚೇದನ
ಹೃತಿಕ್ ರೋಷನ್ 2000 ರಲ್ಲಿ ಸುಸೇನ್ ಖಾನ್ ಅವರನ್ನು ವಿವಾಹವಾದರು. ಸುಸೇನ್ ಮತ್ತು ಹೃತಿಕ್ ಇಬ್ಬರು ಗಂಡು ಮಕ್ಕಳಿಗೆ ಪೋಷಕರಾದರು. ಆದರೆ, ಹೃತಿಕ್ ಮತ್ತು ಸುಸೇನ್ 2014 ರಲ್ಲಿ ವಿಚ್ಛೇದನ ಪಡೆದರು. ಬಳಿಕ ಹೃತಿಕ್ ಸಬಾ ಆಜಾದ್ ಜೊತೆ ರಿಲೇಶನ್’ಶಿಪ್’ನಲ್ಲಿದ್ದಾರೆ.