Shruti Haasan: ರಿಲೇಶನ್‌ಶಿಪ್‌ನ ಅತಿದೊಡ್ಡ ಗುಟ್ಟು ಬಿಚ್ಚಿಟ್ಟ ಶ್ರುತಿ

First Published | Jan 9, 2022, 10:27 PM IST

ಹೈದರಾಬಾದ್(ಜ. 09)  ದಕ್ಷಿಣ ಭಾರತದ ತಾರೆ ಶ್ರುತಿ ಹಾಸನ್  (Shruti Haasan) ತಮ್ಮ ಲವ್ ಸ್ಟೋರಿಯನ್ನು (Love Story) ಬಹಿರಂಗ ಮಾಡಿದ ನಂತರ ಒಂದೊಂದೆ ಗುಟ್ಟು ಬಿಟ್ಟುಕೊಡುತ್ತಿದ್ದಾರೆ. ಈ ಬಾರಿ ಮೊದಲು ಪ್ರಪೋಸ್ ಮಾಡಿದ್ದು ತಾವೇ ಎಂಬ ಸತ್ಯವನ್ನು ನಯವಾಗಿ ಒಪ್ಪಿಕೊಂಡಿದ್ದಾರೆ.

ಸಾರ್ವಜನಿಕವಾಗಿಯೇ  ಕಿಸ್ ಮಾಡುತ್ತಾ ಎಲ್ಲವೂ ಓಪನ್ ಎಂದೇ  ಹೇಳಿಕೊಂಡು ಬಂದಿರುವ ಶ್ರುತಿ ಲವ್ ಸ್ಟೋರಿಯ ಬಗ್ಗೆ ಮತ್ತಷ್ಟು ಮಾಹಿತಿ ಕೊಟ್ಟಿದ್ದಾರೆ.

ಕಪ್ಪು ನೀರಿನ ಮೊರೆ ಹೋದ ದಕ್ಷಿಣದ ಸುಂದರಿ

ಪ್ರಿಯಕರ ಸಂತನು ಹಜಾರಿಕ ಜತೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೋತ್ತರ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರಲ್ಲಿ ಮೊದಲು ಐ ಲವ್ ಯು ಹೇಳಿದ್ದು ಯಾರು ಎಂಬ ಪ್ರಶ್ನೆಗೆ ಶ್ರುತಿ ತಾವೇ ಎಂದು ಗುಟ್ಟು ಒಪ್ಪಿಕೊಂಡಿದ್ದಾರೆ. 

Tap to resize

ರೀಲ್ಸ್ ನಲ್ಲಿ ಶ್ರುತಿ ಈ  ವಿಚಾರ  ಹೇಳಿಕೊಂಡಿದ್ದು ಅಭಿಮಾನಿಗಳು ಸಹ ಮೆಚ್ಚುಗೆ ನೀಡಿದ್ದಾರೆ. ನಿಮ್ಮ ಜೋಡಿ ಚೆನ್ನಾಗಿರಲಿ ಎಂದು ಹಾರೈಸಿದ್ದಾರೆ. 

Shruti Haasan

ನಾನು ಇಂಡಿಪೆಂಡೆಂಟ್ ಗರ್ಲ್ ಎಂದು ಸದಾ ಹೇಳಿಕೊಳ್ಳುವ ಶ್ರುತಿ ತಮ್ಮ    ಕೈಯಲ್ಲಿರುವ ಪ್ರಾಜೆಕ್ಟ್ ಗಳನ್ನು  ಮುಗಿಸಿಕೊಡಬೇಕು ಎಂದು ಹೇಳುತ್ತ ಜವಾಬ್ದಾರಿಯನ್ನು ಮರೆತಿಲ್ಲ. 

ಶ್ರಿತಿ ಹಾಸನ್ ಸಹ ಕಪ್ಪು  ನೀರಿನ ಮೊರೆ ಹೋಗಿದ್ದರು.  ಆರೋಗ್ಯಕ್ಕೆ ಗುಣವಾಗುವಂತಹ ಹೊಸ ಆಯ್ಕೆ ಪ್ರಯತ್ನಿಸಲು ಇತ್ತೀಚಿಗೆ ನಟಿ ಶ್ರುತಿ ಹಾಸನ್ ಕಪ್ಪು ನೀರಿಗೆ ಶಿಫ್ಟ್ ಆಗಿದ್ದರು.

Latest Videos

click me!