ತಮ್ಮ ಮಾಜಿ ಪತ್ನಿ ಸುಸ್ಸಾನ್ ಖಾನ್ ಬಾಯ್‌ಫ್ರೆಂಡ್‌ ಜೊತೆ ಹೃತಿಕ್ ರೋಷನ್ ಪಾರ್ಟಿ!

Published : Jan 12, 2023, 05:34 PM IST

ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ (Hrithik Roshan) ಜನವರಿ 10 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 49ನೇ ವರ್ಷಕ್ಕೆ ಕಾಲಿಟ್ಟದ್ದಾರೆ ಹೃತಿಕ್‌. ನಟನ ಮಾಜಿ ಪತ್ನಿ ಸುಸ್ಸಾನೆ ಖಾನ್ (Sussanne Khan) ಬಾಯ್‌ಫ್ರೆಂಡ್‌ ಅರ್ಸ್ಲಾನ್ ಗೋನಿ (Arslan Goni) ಅವರು ಹೃತಿಕ್ ಅವರನ್ನು ಅಭಿನಂದಿಸಿದ್ದಾರೆ ಮತ್ತು ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದ ಪೋಸ್ಟ್ ಅನ್ನು ಮರು-ಶೇರ್ ಮಾಡುವಾಗ ಹೃತಿಕ್,'ಧನ್ಯವಾದ ಯಾರಾ (ಸ್ನೇಹಿತ)' ಎಂದು ಬರೆದಿದ್ದಾರೆ. ಹೃತಿಕ್ ಅವರ ಹುಟ್ಟುಹಬ್ಬದಂದು ಮಾಜಿ ಪತ್ನಿ ಸುಸಾನೆ ಮತ್ತು ಆಕೆಯ ಗೆಳತಿ ಸಾಬಾ ಆಜಾದ್ ಹೇಗೆ ಶುಭ ಹಾರೈಸಿದ್ದಾರೆ ಎಂಬುದನ್ನು ನೋಡಿ.

PREV
19
ತಮ್ಮ ಮಾಜಿ ಪತ್ನಿ ಸುಸ್ಸಾನ್ ಖಾನ್ ಬಾಯ್‌ಫ್ರೆಂಡ್‌ ಜೊತೆ  ಹೃತಿಕ್ ರೋಷನ್ ಪಾರ್ಟಿ!
Hrithik Roshan

 ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸ್ಸಾನ್ ಖಾನ್ ಅವರ ಬಾಯ್‌ ಫ್ರೆಂಡ್‌  ಅರ್ಸ್ಲಾನ್ ಗೋನಿ ಕೂಡ ನಟನಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪಾರ್ಟಿಯೊಂದರಲ್ಲಿ ತನ್ನ ಮತ್ತು ಹೃತಿಕ್ ಒಟ್ಟಿಗೆ ಪೋಸ್ ಮಾಡುತ್ತಿರುವ ಸೆಲ್ಫಿಯನ್ನು ಅರ್ಸ್ಲಾನ್ ಹಂಚಿಕೊಂಡಿದ್ದಾರೆ. ಅವರು 'ಹುಟ್ಟುಹಬ್ಬದ ಶುಭಾಶಯಗಳು, ಹೃತಿಕ್ ರೋಶನ್' ಎಂದು ಬರೆದಿದ್ದಾರೆ.

29

ಈ ಸಮಯದಲ್ಲಿ, ಇಬ್ಬರೂ ಒಂದೇ ರೀತಿಯ ಮುಖ  ಮಾಡಿದ್ದಾರೆ. ಫೋಟೋದಲ್ಲಿ, ಹೃತಿಕ್ ಕಂದು ಬಣ್ಣದ ಟಿ-ಶರ್ಟ್ ಧರಿಸಿದ್ದರು ಮತ್ತು ಥಂಬ್ಸ್-ಅಪ್ ಮಾಡಿ ಇಬ್ಬರೂ ಒಂದೇ ರೀತಿಯ ಎಕ್ಸ್‌ಪ್ರೆಶನ್‌ ನೀಡಿದ್ದಾರೆ. ಅರ್ಸ್ಲಾನ್ ಬಿಳಿ ಟಿ-ಶರ್ಟ್ ಧರಿಸಿದ್ದರು. ಹೃತಿಕ್ ರೋಷನ್ ಮತ್ತು ಅರ್ಸ್ಲಾನ್ ನಡುವಿನ  ಬಾಂಧವ್ಯವು ಫೋಟೋದಲ್ಲಿ ಗೋಚರಿಸುತ್ತದೆ.
 

39
Hrithik Roshan

ಜನವರಿ 10 ರಂದು ಹೃತಿಕ್ ರೋಷನ್ ತಮ್ಮ 49 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬಿ-ಟೌನ್‌ನ ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳು ಹೃತಿಕ್ ಅವರ ಜನ್ಮದಿನದಂದು ವಿಶ್ ಮಾಡಿದ್ದಾರೆ. ಬಹುತೇಕ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ.


 

49

ಈ ಹಿಂದೆ ಹೃತಿಕ್ ಹುಟ್ಟುಹಬ್ಬದಂದು ಸುಸ್ಸಾನೆ ಖಾನ್ ವಿಡಿಯೋ ಹಂಚಿಕೊಂಡಿದ್ದರು. ಇದರಲ್ಲಿ ಹೃತಿಕ್ ಅವರ ಇಬ್ಬರು ಮಕ್ಕಳಾದ ಹ್ರೇಹಾನ್ ರೋಷನ್ ಮತ್ತು ಹೃದಾನ್ ರೋಷನ್ ಅವರೊಂದಿಗೆ  ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಕುಟುಂಬದ ಇತರ ಸದಸ್ಯರು ಈ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ

59

'ಹುಟ್ಟುಹಬ್ಬದ ಶುಭಾಶಯಗಳು ರೈ (ಹೃತಿಕ್)… ನಿಮ್ಮ ಜೀವನದ ಅತ್ಯುತ್ತಮ ಮತ್ತು ಬಲವಾದ ಭಾಗ ನಿಮಗಾಗಿ ಕಾಯುತ್ತಿದೆ!! ದೇವರು ನಿಮ್ಮನ್ನು ಅಪಾರವಾಗಿ ಆಶೀರ್ವದಿಸಲಿ,' ಎಂದಿದ್ದಾರೆ. ಅರ್ಸ್ಲಾನ್ ಗೋನಿ ಮತ್ತು ಹೃತಿಕ್ ರೋಷನ್ ಅವರ ಗರ್ಲ್‌ಫ್ರೆಂಡ್‌ ಸಬಾ ಆಜಾದ್ ಕೂಡ ಸುಸ್ಸೇನ್ ಅವರ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಅರ್ಸ್ಲಾನ್, 'ಜನ್ಮದಿನದ ಶುಭಾಶಯಗಳು. ಹೃತಿಕ್ ರೋಷನ್ 'ಎಂದು ಬರೆದಿದ್ದಾರೆ.

69
Hrithik Roshan

ಹೃತಿಕ್ ಹುಟ್ಟುಹಬ್ಬದಂದು ಹೃತಿಕ್ ಅವರ ಗೆಳತಿ ಸಬಾ ಕೂಡ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ, ಸಖತ್‌ ಕ್ಯೂಟ್‌ ಬರ್ತ್‌ಡೇ  ಸಂದೇಶವನ್ನು ಬರೆದಿದ್ದಾರೆ.

79

ಹೃತಿಕ್ ಮತ್ತು ಸಬಾ ಮೊದಲ ಬಾರಿಗೆ 2022 ರ ಆರಂಭದಲ್ಲಿ ಮುಂಬೈನಲ್ಲಿ ಡಿನ್ನರ್ ಡೇಟ್‌ನಲ್ಲಿ ಕಾಣಿಸಿಕೊಂಡರು. ಅಂದಿನಿಂದ, ಸಬಾ ಹೃತಿಕ್ ಅವರೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ  ಕಾಣಿಸಿಕೊಂಡಿದ್ದಾರೆ.

89

ಮೇ ತಿಂಗಳಲ್ಲಿ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಹೃತಿಕ್ ಅವರ ಹುಟ್ಟುಹಬ್ಬದಂದು ಸಬಾ ಅವರು ತಮ್ಮ ಪ್ರವಾಸದ ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

99

ಹೃತಿಕ್ ಅವರ ಮೊದಲ ವಿವಾಹವು ಸುಸ್ಸೇನ್ ಖಾನ್ ಅವರೊಂದಿಗೆ ಆಗಿತ್ತು, ನಂತರ 2001 ರಲ್ಲಿ ಇಬ್ಬರು ಗಂಡು ಮಕ್ಕಳು ಜನಿಸಿದರು. ಡಿವೋರ್ಸ್‌ ನಂತರ ಇಬ್ಬರೂ ಮಕ್ಕಳ ಸಹ ಪೋಷಕರಾಗಿ ಮುಂದುವರೆದಿದ್ದಾರೆ.

Read more Photos on
click me!

Recommended Stories