ಲಿವ್-ಇನ್ ರಿಲೇಶನ್‌ಶಿಪ್‌ ನನ್ನ ಜೀವನವನ್ನೇ ನಾಶ ಮಾಡಿತು: ಅನು ಅಗರ್ವಾಲ್‌

First Published Jan 12, 2023, 5:23 PM IST

90 ರ ದಶಕದ ಜನಪ್ರಿಯ ನಟಿ ಅನು ಅಗರ್ವಾಲ್ (Anu Agarwal)  ಅವರು ಒಬ್ಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಅವರ ತಾಯಿ ಸಹ ಅವರೊಂದಿಗೆ ವಾಸಿಸುತ್ತಿದ್ದರು. ಇದು ಅವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಸಂಭಾಷಣೆಯ ಸಮಯದಲ್ಲಿ ಸ್ವತಃ ಅನು ಅಗರ್ವಾಲ್‌ ಅವರೇ ಒಪ್ಪಿಕೊಂಡಿದ್ದಾರೆ. ಲೀವ್‌ ಇನ್‌ ರಿಲೆಷನ್‌ಶಿಪ್‌ ಅವರ ಔದ್ಯೋಗಿಕ ಜೀವನವನ್ನೇ ಕಸಿದುಕೊಂಡಿತು, ಎಂದು ಆಶಿಕಿ ನಟಿ ನೋವು ತೋಡಿಕೊಂಡಿದ್ದಾರೆ.

ಆಶಿಕಿ ಖ್ಯಾತಿಯ ನಟಿ ಅನು ಅಗರ್ವಾಲ್ ಅವರು 90ರ ದಶಕದಲ್ಲಿ ಲಿವ್-ಇನ್-ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ಬಹಿರಂಗಪಡಿಸಿದರು, ಇದು ಅವರ ವೈಯಕ್ತಿಕ ಜೀವನವನ್ನು ನಾಶಪಡಿಸಿತು ಎಂದು ಇತ್ತೀಚಿಗಿನ ಮಾತುಕಥೆಯಲ್ಲಿ ಹೇಳಿಕೊಂಡಿದ್ದಾರೆ.

'ನಾನು ನಿಜವಾಗಿಯೂ ನನ್ನ ಕಾಲಕ್ಕಿಂತಲೂ ಮುಂದೆ ನಡೆದಿದ್ದೆ. 90ರ ದಶಕದಲ್ಲಿ ನಾನು ಕೇನ್ಸ್‌ಗೆ ತಲುಪಿದಾಗ, ಜನರು ಈ ಕೇನ್ಸ್ ಏನೆಂದು ಕೇಳುತ್ತಿದ್ದರು. ನಾನು ಮುಂದೆ ನೋಡುವ ಹುಡುಗಿ ಮತ್ತು ಸಮಾಜವು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು  ನಾನು ನಂಬುವವಳು. ಎಷ್ಟು ಒಳ್ಳೆಯದಾಗುತ್ತದೆಯೋ ಅಷ್ಟೇ   ಕೆಟ್ಟದು ಕೂಡ. ನಾನು ಚಲನಚಿತ್ರಗಳನ್ನು ಮಾಡುವ ಸಂಪೂರ್ಣವಾಗಿ ವಿಭಿನ್ನ ಹುಡುಗಿಯಾಗಬಹುದಿತ್ತು, ಆದರೆ ನನ್ನ ವೈಯಕ್ತಿಕ ಸಂಬಂಧಗಳ ನೆಗಟಿವಿಟಿ ನನ್ನನ್ನು ಕತ್ತಲೆಗೆ ತಳ್ಳಿತು' ಎಂದು 54 ವರ್ಷದ ಅನು ಅಗರ್ವಾಲ್, ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ. 

'ನಾನು ನಿಜವಾದ ಹೊಡೆತ ತಿಂದಿದ್ದೇನೆ. ಆ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದೆ (ಹೆಸರು ಬಹಿರಂಗಪಡಿಸಲಾಗಿಲ್ಲ) ಮತ್ತು ಅದು ಸ್ವೀಕಾರಾರ್ಹವಾಗಿರಲಿಲ್ಲ. ಅವನ ತಾಯಿ ಕೂಡ ನಮ್ಮೊಂದಿಗೆ ವಾಸಿಸುತ್ತಿದ್ದರು. ಅವರು ತುಂಬಾ ಮುಕ್ತ ಮನಸ್ಸಿನವರಾಗಿದ್ದರು. ಅವರು ನನ್ನನ್ನು ಒಪ್ಪಿಕೊಳ್ಳುವುದು ಕಷ್ಟವಾಗಲಿಲ್ಲ,' ಎಂದು ತನ್ನ ವೈಯಕ್ತಿಕ ಜೀವನದ ಬಗ್ಗೆ ಅನು ಹೇಳುತ್ತಾರೆ.

'ಆದರೆ ನಂತರ ಅವರ ಸ್ನೇಹಿತರು ನನ್ನ ವಿರುದ್ಧವೇ ದೂರತೊಡಗಿದರು. ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ನನ್ನ ಬಗ್ಗೆ ಬಹಳಷ್ಟು ಬರೆದರು. ಜನರು ಅದನ್ನು ನಂಬಿದ್ದರು. ನನ್ನನ್ನು ಸಮರ್ಥಿಸಿಕೊಳ್ಳುವ ಶಕ್ತಿ ನನ್ನಲ್ಲಿ ಇರಲಿಲ್ಲ. ಆಗ ಸೋಶಿಯಲ್ ಮೀಡಿಯಾ ಇರಲಿಲ್ಲ.ನನಗೆ ಧ್ವನಿ ಇರಲಿಲ್ಲ.ಅದು ನನ್ನ ವೈಯಕ್ತಿಕ ಬದುಕನ್ನು ಹಾಳು ಮಾಡಿತು. ಆದರೆ ನನ್ನ ವೃತ್ತಿಪರ ಜೀವನಕ್ಕೆ ಬಂದಾಗ ಅದು ಅರಳಿತು,' ಎಂದು ಅನು ಆಗರ್ವಾಲ್‌ ಸಂದರ್ಶನದಲ್ಲಿ ಇನ್ನಷ್ಷೂ ಹೇಳಿದ್ದಾರೆ.

1988 ರ  ಟಿವಿ ಧಾರಾವಾಹಿ 'ಇಸಿ ಬಹಾನೆ' ನಲ್ಲಿ  ಅನು ಅಗರ್ವಾಲ್ ಕಾಣಿಸಿಕೊಂಡರು. ನಂತರ  ಅವರು 1990 ರ ಮ್ಯೂಸಿಕಲ್ ಹಿಟ್ 'ಆಶಿಕಿ' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಚಿತ್ರದಲ್ಲಿ ರಾಹುಲ್ ರಾಯ್ ಪ್ರಮುಖ ಪಾತ್ರದಲ್ಲಿದ್ದರು ಮತ್ತು ದೀಪಕ್ ತಿಜೋರಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

click me!