ಹೆಂಡತಿ ಸ್ನೇಹಿತೆಯನ್ನೇ ಪ್ರೀತಿಸಿ ಮದ್ವೆಯಾದ ಬಾಲಿವುಡ್ ಗಾಯಕ

Published : Jul 23, 2022, 05:18 PM IST

ಬಾಲಿವುಡ್ ಗಾಯಕ ಮತ್ತು ಸಂಯೋಜಕ ಹಿಮೇಶ್ ರೇಶಮಿಯಾ (Himesh Reshammiya) ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜುಲೈ 23, 1973 ರಲ್ಲಿ ಮಹುವದಲ್ಲಿ ಜನಿಸಿದ ಹಿಮೇಶ್ ರೇಶಮಿಯಾ ತಮ್ಮ ವಿಭಿನ್ನ ಧ್ವನಿ ಮತ್ತು ಸಂಗೀತದಿಂದ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ತಮ್ಮ ವೃತ್ತಿಪರ ಜೀವನo ಜೊತೆ ಅವರ ವೈಯಕ್ತಿಕ ಜೀವನವೂ ಸಖತ್‌ ಸುದ್ದಿಯಲ್ಲಿದೆ. ಮದುವೆಯಾದ ಹಿಮೇಶ್ ಅವರ ಹೆಂಡತಿಯ ಸ್ನೇಹಿತೆಗೇ ಮನ ಸೋತವರು. ನಂತರ ಆತ ತನ್ನ ಹೆಂಡತಿ ಮತ್ತು ಮಗುವನ್ನು ಬಿಟ್ಟು ಪತ್ನಿಯ ಸ್ನೇಹಿತೆಯನ್ನೇ ಮದುವೆಯಾದರು. 

PREV
17
ಹೆಂಡತಿ ಸ್ನೇಹಿತೆಯನ್ನೇ ಪ್ರೀತಿಸಿ ಮದ್ವೆಯಾದ ಬಾಲಿವುಡ್ ಗಾಯಕ

ಹಿಮೇಶ್ ರೇಶಮಿಯಾ ಅವರು 1995 ರಲ್ಲಿ ಕೋಮಲ್ ಎಂಬ ಹುಡುಗಿಯನ್ನು ವಿವಾಹವಾದರು. ಆದರೆ ನಂತರ ಕೋಮಲ್ ಸ್ನೇಹಿತೆ ಸೋನಿಯಾ ಕಪೂರ್‌ಗೂ ತಮ್ಮ ಹೃದಯದಲ್ಲಿ ಜಾಗ ಕೊಟ್ಟರು. 
 

27

ಹಿಮೇಶ್ ರೇಶಮಿಯಾ ವಿವಾಹಿತ ಮತ್ತು ಮಗನ ತಂದೆ, ಆದರೂ ಸೋನಿಯಾ ಕಪೂರ್ ಅವರೊಂದಿಗಿನ ಅವರ ನಿಕಟತೆ ಹೆಚ್ಚಾಯಿತು. ಪತ್ನಿ ಕೋಮಲ್ ಅವರನ್ನು ಭೇಟಿಯಾಗಲು ಸೋನಿಯಾ ಆಗಾಗ ಮನೆಗೆ ಬರುತ್ತಿದ್ದರಂತೆ.

37

ಸೋನಿಯಾ ಕಪೂರ್ ಹಿಮೇಶ್ ಅವರ ಮನೆಗೆ ಆಗಾಗ್ಗೆ ಭೇಟಿ ನೀಡಿದಾಗ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. ಆದರೆ, ತಕ್ಷಣವೇ ಈ ವಿಷಯ ಅವರ ಪತ್ನಿಗೂ ತಿಳಿಯಿತು, ಆದರೆ ಕೋಮಲ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

47

ಹಿಮೇಶ್ ರೇಶಮಿಯಾ ಅವರು ತಮ್ಮ ಪತ್ನಿ ಕೋಮಲ್ ಅವರಿಗೆ ವಿಚ್ಛೇದನ ನೀಡಿದರು. ಅಂತಿಮವಾಗಿ ಸೋನಿಯಾ ಕಪೂರ್ ಅವರನ್ನು ವಿವಾಹವಾದರು. ಇಬ್ಬರೂ ಸುಮಾರು 10 ವರ್ಷಗಳಿಂದ ಸಂಬಂಧದಲ್ಲಿದ್ದರೂ ಯಾರಿಗೂ ತಿಳಿದಿರಲಿಲ್ಲ. 
 

57

ಸೋನಿಯಾ ಕಪೂರ್ ಅವರನ್ನು ಮದುವೆಯಾದ ನಂತರ ಹಿಮೇಶ್ ರೇಶಮಿಯಾ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಆಗ ತಾವು ಮತ್ತು ಕೋಮಲ್ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದೇವೆ. ಅವರ ನಿರ್ಧಾರಕ್ಕೆ ಕುಟುಂಬಸ್ಥರಿಗೂ ಅಭ್ಯಂತರ ಇರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದರು. 

67

ಹಿಮೇಶ್ ರೇಶಮಿಯಾ ಅವರ ಕೆಲಸದ ವಿಷಯಕ್ಕೆ ಬಂದರೆ ಅವರ ಮೊದಲ ಆಲ್ಬಂ ಆಪ್ಕಾ ಸುರೂರ್ ದೊಡ್ಡ ಹಿಟ್ ಆಗಿತ್ತು. ಆಲ್ಬಮ್ ಯಶಸ್ವಿಯಾದ ನಂತರ, ಅವರು ಹಾಡಲು ಪ್ರಯತ್ನಿಸಿದರು. ಅನೇಕ ಚಲನಚಿತ್ರಗಳಲ್ಲಿ ಹಾಡುಗಳನ್ನೂ ಹಾಡಿದರು. ಸಂಗೀತವನ್ನೂ ನೀಡಿದರು. ಹಿಮೇಶ್ ಸಲ್ಮಾನ್ ಖಾನ್ ಅವರ ತೇರೆ ನಾಮ್ ಚಿತ್ರದಲ್ಲಿ ಸಂಗೀತ ನೀಡುವ ಮೂಲಕ ಬ್ರೇಕ್‌ ಪಡೆದರು.

77

ಹಿಮೇಶ್ ರೇಶಮಿಯಾ, ಹಲೋ ಬ್ರದರ್, ದುಲ್ಹನ್ ಹಮ್ ಲೆ ಜಾಯೇಂಗೆ, ಮೇನೆ ಪ್ಯಾರ್ ಕ್ಯೂ ಕಿಯಾ, ಆಶಿಕ್ ಬನಾಯಾ ಆಪ್ನೆ, ಪ್ಯಾರ್ ಕಿಯಾ ತೋ ಡರ್ನಾ ಕ್ಯಾ, ಸಮನ್ ತೇರಿ ಕಸಮ್, ಪ್ರೇಮ್ ರತನ್ ಧನ್ ಪಾಯೋ, ಆಕ್ಸನ್ ಜಾಕ್ಸನ್, ಕಿಕ್, ಸ್ಪೆಷಲ್ 26, ಬೋಲ್‌ ಬಚ್ಚನ್ ಮುಂತಾದ ಚಿತ್ರಗಳಲ್ಲಿ ಸಂಗೀತ ನೀಡಿದ್ದಾರೆ.

Read more Photos on
click me!

Recommended Stories