ಕಾರಲ್ಲಿ ಏನ್ಮಾಡಿದ್ರಿ? ಶರ್ಟ್ ಬಟನ್ ಹಾಕ್ತಾ ಮಲೈಕಾ ಜೊತೆ ಕಾರಿಳಿದ ಅರ್ಜುನ್ ಹಿಗ್ಗಾಮುಗ್ಗ ಟ್ರೋಲ್

Published : Jul 23, 2022, 11:15 AM IST

ಅರ್ಜುನ್ ಪಾಪರಾಜಿಗಳ ಮುಂದೆ ಬಂದು ಶರ್ಟ್ ಬಟನ್ ಹಾಕಿಕೊಂಡಿದ್ದಾರೆ. ಅರ್ಜುನ್ ಅವತಾರ ಕಂಡು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಕಾರಿನಲ್ಲಿ ಏನ್ಮಾಡ್ರಿ ಅರ್ಜುನ್ ಬಾಬಾ, ಆಂಟಿ ಲವರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.     

PREV
17
ಕಾರಲ್ಲಿ ಏನ್ಮಾಡಿದ್ರಿ? ಶರ್ಟ್ ಬಟನ್ ಹಾಕ್ತಾ ಮಲೈಕಾ ಜೊತೆ ಕಾರಿಳಿದ ಅರ್ಜುನ್ ಹಿಗ್ಗಾಮುಗ್ಗ ಟ್ರೋಲ್

ಬಾಲಿವುಡ್ ನಟಿ, ಡಾನ್ಸರ್ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವೇಂಜರ್ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಒಟ್ಟಿಗೆ ಹಾಜರಾಗಿದ್ದ ಮಲೈಕಾ ಮತ್ತು ಅರ್ಜುನ್ ಜೋಡಿ ಮತ್ತೆ ಟ್ರೋಲಿಗೆ ಗುರಿಯಾಗಿದ್ದಾರೆ. 
 

27

ಅವೇಂಜರ್ ಸಿನಿಮಾ ವಿಕ್ಷೀಸಲು ಬಂದಿದ್ದ ಮಲೈಕಾ ಮತ್ತು ಅರ್ಜುನ್ ಕಪೂರ್ ಒಟ್ಟಿಗೆ ಒಂದೇ ಕಾರಿನಲ್ಲಿ ಎಂಟ್ರಿ ಕೊಟ್ಟಿದ್ದರು. ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದರಲ್ಲಿ ಏನು ವಿಶೇಷ ಇದೆ, ಸದಾ ಒಟ್ಟಿಗೆ ಎಂಟ್ರಿ ಕೊಡ್ತಾರಲ್ಲಾ ಅಂತೀರಾ. ಕಾರಿನಿಂದ ಇಳಿದು ಹೊರಬಂದ ಅರ್ಜುನ್ ಶರ್ಟ್ ಬಟನ್ ಹಾಕಿಕೊಳ್ಳುತ್ತಾ ಬಂದಿದ್ದಾರೆ. 

37

ಅರ್ಜುನ್ ಪಾಪರಾಜಿಗಳ ಮುಂದೆ ಬಂದು ಶರ್ಟ್ ಬಟನ್ ಹಾಕಿಕೊಂಡಿದ್ದಾರೆ. ಅರ್ಜುನ್ ಅವತಾರ ಕಂಡು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಕಾರಿನಲ್ಲಿ ಏನ್ಮಾಡ್ರಿ ಅರ್ಜುನ್ ಬಾಬಾ, ಆಂಟಿ ಲವರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.  

47

ಅರ್ಜುನ್ ಕಪೂರ್ ಶರ್ಟ್ ಬಟನ್ ಹಾಕಿಕೊಂಡು ಮಲೈಕಾ ಜೊತೆ ಪೋಸ್ ಕೊಡಲು ಸಹ ಹಿಂದೇಟು ಹಾಕುತ್ತಿದ್ದರು.  ಆದರೆ ಮಲೈಕಾ ಎಂದಿನಂತೆ ಪಾಪರಾಜಿಗಳ ಕ್ಯಾಮರಾಗೆ ಖುಷಿ ಖುಷಿಯಾಗಿಯೇ ಪೋಸ್ ಕೊಟ್ಟಿದ್ದಾರೆ. ಬಳಿಕ ಅಲ್ಲಿಂದ ಸಿನಿಮಾ ನೋಡಲು ಹೊರಟು ಹೋಗಿದ್ದಾರೆ. 

57

ಅರ್ಜುನ್ ಕಪೂರ್ ಟ್ರೋಲ್ ಆಗುತ್ತಿರುವುದು ಇದೇ ಮೊದಲಲ್ಲ. ಮಲೈಕಾ ಜೊತೆ ಕಾಣಿಸಿಕೊಂಡಾಗಲೆಲ್ಲಾ ಟ್ರೋಲ್ ಗೆ ಗುರಿಯಾಗುತ್ತಿರುತ್ತಾರೆ. ಅರ್ಜುನ್ ಕಪೂರ್ ಕೊಂಚ ದಪ್ಪ ಆಗಿದ್ದಾರೆ. ಹಾಗಾಗಿ ನೆಟ್ಟಿಗರು ಆಂಟಿ ಸಿಕ್ಕಿದ ಮೇಲೆ ಅರ್ಜುನ್ ಕಪೂರ್ ದಪ್ಪ ಆಗಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ. 
 

67

ಇನ್ನು ಇತ್ತೀಚಿಗಷ್ಟೆ ಮಲೈಕಾ ಮತ್ತು ಅರ್ಜುನ್ ಕಪೂರ್ ಜೋಡಿ ಒಂದೇ ರೀತಿಯ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಕಾಮ್ಯರಾಗೆ ತರಹೇವಾರಿ ಪೋಸ್ ನೀಡಿದ್ದರು.  ಮಲೈಕಾ ಮಿರಮಿರ ಮಿಂಚುತ್ತಿರುವ ನೀಲಿ ಬಣ್ಣದ ಪ್ಯಾಂಟ್‌ ಸೂಟ್‌ ಧರಿಸಿ ಕುತ್ತಿಗೆಗೆ ಸ್ಕಾರ್ಫ್‌ ಹಾಕಿದ್ದರು. ಅರ್ಜುನ್, ಕೂಡ ನೀಲಿ ಕೋಟ್ ಮತ್ತು ಪ್ಯಾಂಟ್‌ನಲ್ಲಿ ಪೋಸ್ ನೀಡಿದ್ದರು. 
 

77

ಮಲೈಕಾ ಅರೋರಾ ಸದಾ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಲೈಕಾ ಬಿಕಿನಿ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಸಿಕ್ಕಾಪಟ್ಟೆ ವರ್ಕೌಟ್ ಮಾಡುವ ನಟಿ ಮಲೈಕಾ ಸದಾ ಜಿಮ್ ನಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಜಿಮ್ ಸೂಟ್ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories