ಆಮೀರ್‌ ಖಾನ್‌ ಮಗಳು-ಆಳಿಯರ ನೆಟ್‌ವರ್ಥ್, ಯಾರ ಶ್ರೀಮಂತಿಕೆಗೂ ಕಮ್ಮಿ ಇಲ್ಲ ಈ ಜೋಡಿ!

Published : Jan 06, 2024, 05:58 PM IST

ಆಮೀರ್ ಖಾನ್ (Aamir Khan) ಅವರ ಮಗಳು ಇರಾ ಖಾನ್ (Ira Khan)  ಅವರ ಬಾಯ್‌ಫ್ರೆಂಡ್‌ ನೂಪುರ್ ಶಿಖರೆ (Nupur Shekhare) ಅವರನ್ನು ವಿವಾಹವಾಗುವುದರೊಂದಿಗೆ 2024 ಬಾಲಿವುಡ್‌ನಲ್ಲಿ ಮದುವೆಯ ಸಂಭ್ರಮ ಪ್ರಾರಂಭಿಸಿದ್ದಾರೆ. ಜನವರಿ 3, 2024 ರಂದು, ಇರಾ ಖಾನ್‌ ಮತ್ತು ನೂಒರ್‌ ಶಿಖರೆ ಮುಂಬೈನಲ್ಲಿ ನಿಕಟ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ  ಮದುವೆಯಾದರು. ಅವರ ವಿಶೇಷ ದಿನದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್‌ ಆಗಿವೆ .ಈ ನಡುವೆ ಅಭಿಮಾನಿಗಳಲ್ಲಿ ಈ ಜೋಡಿಗಳ ಬಗ್ಗೆ  ಕುತೂಹಲವನ್ನು ಹುಟಿಟದ್ದು  ನವವಿವಾಹಿತರ  ಒಟ್ಟು ನಿವ್ವಳ ಮೌಲ್ಯದ ವಿವರಗಳು ಇಂಟರ್‌ನೆಟ್‌ನಲ್ಲಿ ಚರ್ಚೆಯಾಗುತ್ತಿವೆ. ಇರಾ ಖಾನ್ ಮತ್ತು ನೂಪುರ್ ಶಿಖರೆ ಅವರ ನಿವ್ವಳ ಮೌಲ್ಯದ ವಿವರ ಇಲ್ಲಿದೆ.

PREV
110
ಆಮೀರ್‌ ಖಾನ್‌ ಮಗಳು-ಆಳಿಯರ ನೆಟ್‌ವರ್ಥ್, ಯಾರ ಶ್ರೀಮಂತಿಕೆಗೂ ಕಮ್ಮಿ ಇಲ್ಲ ಈ ಜೋಡಿ!

ನ್ಯೂಸ್ 18 ಪ್ರಕಾರ, ಇರಾ ಖಾನ್ ಸುಮಾರು 4.9 ಕೋಟಿ ರೂ.ನೆಟ್‌ವರ್ತ್‌ ಹೊಂದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಅಂದಾಜಿಸಿದಂತೆ ಆಮೀರ್ ಖಾನ್ ಅವರ 1862 ಕೋಟಿ ರೂಪಾಯಿಗಳ ಬೃಹತ್ ಸಂಪತ್ತಿನ ಒಂದು ಭಾಗವನ್ನು ಅವರು ಇರಾ ಖಾನ್‌ ಸಹೋದರರಾದ ಜುನೈದ್ ಖಾನ್ ಮತ್ತು ಆಜಾದ್ ರಾವ್ ಖಾನ್ ಜೊತೆಗೆ ಪಡೆದುಕೊಳ್ಳುತ್ತಾರೆ. 

210

ಮತ್ತೊಂದೆಡೆ, ನೂಪುರ್ ಶಿಖರೆ ಅವರ ಅಂದಾಜು ನಿವ್ವಳ ಮೌಲ್ಯ ಸುಮಾರು 8.2 ಕೋಟಿ ರೂ. ಈ ಮೂಲಕ ದಂಪತಿ ಒಟ್ಟು ನಿವ್ವಳ ಮೌಲ್ಯವು ಇದೀಗ 13.1 ಕೋಟಿ ರೂ ಎಂದು ವರದಿಗಳು ಹೇಳುತ್ತಿವೆ

310

ಆಮೀರ್‌ ಖಾನ್‌ ಪುತ್ರಿ  ಇರಾ ಖಾನ್, ಹೆಚ್ಚಿನ ಸ್ಟಾರ್ ಮಕ್ಕಳಂತೆ, ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದಿದ್ದಾರೆ  ಮತ್ತು ಉನ್ನತ ವ್ಯಾಸಂಗವನ್ನು ನೆದರ್‌ಲ್ಯಾಂಡ್ಸ್‌ನ ಉಟ್ರೆಕ್ಟ್ ವಿಶ್ವವಿದ್ಯಾಲಯದಲ್ಲಿ ಮಾಡಿದರು. ಆದರೆ, ಇರಾ ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿಲ್ಲ.

410

ಇರಾ ಖಾನ್ ಮಾನಸಿಕ ಆರೋಗ್ಯದ ಪ್ರತಿಪಾದಕರಾಗಿದ್ದಾರೆ ಮತ್ತು ಖಿನ್ನತೆ (Depression) ಮತ್ತು ಆತಂಕದೊಂದಿಗಿನ ತಮ್ಮದೇ ಆದ ಹೋರಾಟದ ಬಗ್ಗೆಯೂ ಹಂಚಿಕೊಂಡಿದ್ದಾರೆ . ಇರಾ 2021ರಲ್ಲಿ ಮಾನಸಿಕ ಆರೋಗ್ಯ (Metnal Health) ಬೆಂಬಲ ಸಂಸ್ಥೆಯಾದ ಅಗಸ್ತು ಫೌಂಡೇಶನ್ ಅನ್ನು ಸ್ಥಾಪಿಸಿದರು ಮತ್ತು ಸಲಹಾ ಮಂಡಳಿಯಲ್ಲಿ ಆಮೀರ್ ಖಾನ್ ಮತ್ತು ರೀನಾ ದತ್ತಾ ಅವರೊಂದಿಗೆ ಅದರ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


 


 

510

ಪುಣೆಯಲ್ಲಿ ಜನಿಸಿದ  ನೂಪುರ್ ಶಿಖರೆ ಮುಂಬೈನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಶಿಖರೆ ಅವರು ವೃತ್ತಿಯಲ್ಲಿ ಫಿಟ್‌ನೆಸ್ ತರಬೇತುದಾರರಾಗಿದ್ದು, ಅವರ ಈಗ ಮಾವ ಆಮೀರ್ ಖಾನ್ ಮತ್ತು ಸುಶ್ಮಿತಾ ಸೇನ್ ಅವರಿಗೆ ಪ್ರಸಿದ್ಧ ತರಬೇತುದಾರರಾಗಿದ್ದಾರೆ.

610

ಕೋವಿಡ್‌ ಸಮಯದಲ್ಲಿ, ಆಮೀರ್‌ ಖಾನ್‌ಗೆ  ತರಬೇತಿ ನೀಡುತ್ತಿರುವಾಗ ತಂದೆಯೊಂದಿಗೆ ಇರಾರನ್ನು ನೂಪುರ್ ಶಿಖರೆ ಭೇಟಿಯಾದರು. ಸ್ನೇಹ ಪ್ರೀತಿಗೆ ತಿರುಗಲು ಹೆಚ್ಚು ದಿನ ಹಿಡಿಯಲಿಲ್ಲ.

710

ನೂಪುರ್ ಮ್ಯಾರಥಾನ್‌ಗಳು ಮತ್ತು ಐರನ್‌ಮ್ಯಾನ್ ಟ್ರಯಥ್ಲಾನ್‌ಗಳಲ್ಲಿ ಭಾಗವಹಿಸುತ್ತಾರೆ,  2022 ರಲ್ಲಿ ಐರನ್‌ಮ್ಯಾನ್ ಇಟಲಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅವರು ಇರಾ ಖಾನ್‌ಗೆ ಪ್ರಪೋಸ್‌ ಮಾಡಿದರು.  

810

ವರದಿಗಳ ಪ್ರಕಾರ  ನೂಪುರ್ ಶಿಖರೆ ಅವರ ತಾಯಿ ಪ್ರೀತಮ್ ಶಿಖರೆ, ಕಥಕ್ ನರ್ತಕಿ, ಅವರು  ಸುಶ್ಮಿತಾ ಸೇನ್‌ ಅವರ ಮಗಳು ರೆನೀ ಸೇನ್ ಅವರಿಗೆ ತರಬೇತಿ ನೀಡಿದ್ದಾರೆ  

910

ಸೂಪರ್‌ಸ್ಟಾರ್‌ ಪುತ್ರಿ ಇರಾ ಖಾನ್ ಅವರು ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್‌  ಮತ್ತು ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ಜನವರಿ 3 ರಂದು ವಿವಾಹವಾದರು. ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಬಂಧದಲ್ಲಿ ದಂಪತಿಗಳು ಅಧಿಕೃತ ಪತ್ರಗಳಿಗೆ ಸಹಿ ಹಾಕಿದರು.


 

1010

ಇರಾ ಮತ್ತು ನೂಪುರ್ ಜನವರಿ 8 ರಿಂದ 10 ರವರೆಗೆ ಉದಯಪುರದಲ್ಲಿ ನಿಗದಿಪಡಿಸಿದ ವಿವಾಹದ ಶಾಸ್ತ್ರಗಳನ್ನು ಆಚರಿಸಲು ಸಿದ್ಧರಾಗಿದ್ದಾರೆ. ವರದಿಗಳ ಪ್ರಕಾರ ಸಾಂಪ್ರದಾಯಿಕ ಮರಾಠಿ ಸಮಾರಂಭದಲ್ಲಿ ನೂಪುರ್ ಮತ್ತು ಇರಾ ಸಪ್ತಪದಿ ತುಳಿದಿದ್ದಾರೆ.

Read more Photos on
click me!

Recommended Stories