ಎಆರ್ ರೆಹಮಾನ್ ವೃತ್ತಿಪರವಾಗಿ ಪಿಯಾನೋ ನುಡಿಸುವ ಮೂಲಕ ಮನೆಯ ಖರ್ಚನ್ನು ನಿಭಾಯಿಸುತ್ತಿದ್ದರು. ಶಾಲೆಯನ್ನು ತೊರೆದ ಕೆಲವು ವರ್ಷಗಳ ನಂತರ, ಅವರು ಕಾಲೇಜಿನಲ್ಲಿ ಪ್ರವೇಶ ಪಡೆದರು, ಆದರೆ ನಂತರ ಅವರು ಸಂಗೀತ ವೃತ್ತಿಜೀವನವನ್ನು ಮುಂದುವರಿಸಲು ಕಾಲೇಜಿನಿಂದ ಹೊರಗುಳಿದರು. ಕಾಲೇಜಿನಿಂದ ಹೊರಗುಳಿದ ನಂತರ, ಅವರು ತಮ್ಮದೇ ಆದ ಬ್ಯಾಂಡ್ ಅನ್ನು ಹುಟ್ಟು ಹಾಕಿ ತಂಡ ಕಟ್ಟಿದರು ಮತ್ತು ನಂತರ ಅನೇಕ ಜಾಹೀರಾತುಗಳಿಗೆ ಜಿಂಗಲ್ಸ್ ಬರೆದರು. ಮಾಧ್ಯಮ ವರದಿಗಳ ಪ್ರಕಾರ, ಎಆರ್ ರೆಹಮಾನ್ ಸುಮಾರು 300 ಜಾಹೀರಾತುಗಳಿಗೆ ಜಿಂಗಲ್ಸ್ ಬರೆದಿದ್ದಾರೆ.