ಸೌತ್ ಸ್ಟಾರ್ ಮಹೇಶ್ ಬಾಬು ಈ ಬಾಲಿವುಡ್ ನಟಿಯನ್ನು ಮದುವೆಯಾಗಲು ಇಟ್ಟ ಷರತ್ತಿದು!
First Published | Aug 9, 2022, 5:21 PM ISTಸೌತ್ ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಇಂದು ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಆಗಸ್ಟ್ 9 ರಂದು, 1975 ರಲ್ಲಿ ಚೆನ್ನೈನಲ್ಲಿ ಜನಿಸಿದ ಮಹೇಶ್ ಕೇವಲ ನಾಲ್ಕನೇ ವಯಸ್ಸಿನಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರು 1979 ರಲ್ಲಿ ನೀಡಾ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಕೆಲಸ ಮಾಡಿದರು. 8 ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ಕೆಲಸ ಮಾಡಿದ ನಂತರ, 1999ರಲ್ಲಿ ರಾಜಕುಮಾರೋಡು ಚಿತ್ರದ ಮೂಲಕ ನಾಯಕ ನಟನಾಗಿ ವೃತಿ ಪ್ರಾರಂಭಿಸಿದರು. ತಮ್ಮ ಕೆರಿಯರ್‌ನಲ್ಲಿ ಹಲವು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಮಹೇಶ್ ಬಾಬು ಅವರ ಪ್ರೇಮಕಥೆಯೂ ತುಂಬಾ ಆಸಕ್ತಿದಾಯಕವಾಗಿದೆ. 2000ರಲ್ಲಿ, ಅವರು ವಂಶಿ ಚಿತ್ರದ ಸೆಟ್‌ನಲ್ಲಿ ನಮ್ರತಾ ಶಿರೋಡ್ಕರ್ ಅವರನ್ನು ಭೇಟಿಯಾದರು ಮತ್ತು ಇಲ್ಲಿಂದ ಅವರ ಪ್ರೇಮಕಥೆ ಪ್ರಾರಂಭವಾಯಿತು. ನಮ್ರತಾ 1993ರಲ್ಲಿ ಮಿಸ್ ಇಂಡಿಯಾ ಆಗಿದ್ದಾರೆ ಮತ್ತು ಅವರು ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ (Namrata Shirodkar) ಅವರ ಪ್ರೀತಿ ಹೇಗೆ ಅರಳಿತು ಮತ್ತು ಸೌತ್ ಸ್ಟಾರ್ ಅವರ ಪತ್ನಿ ಯಾವ ಷರತ್ತುಗಳನ್ನು ಪೂರೈಸಿದರು ಎಂಬ ವಿವರ ಇಲ್ಲಿದೆ.