ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವುದನ್ನೇ ಅನುರಾಗ್ ಕಶ್ಯಪ್ ಕಾಯುತ್ತಿದ್ದರು. ಅವರ ಚಿತ್ರ ಬ್ಲ್ಯಾಕ್ ಫ್ರೈಡೇಗಾಗಿ ಕೇವಲ ಶಾಮ್ ಅವರ ಡೇಟ್ ಪಡೆಯಲು ಉತ್ಸುಕರಾಗಿದ್ದರು, ಎಂದು ಶಾಮ್ ಕೌಶಲ್ ಹೇಳಿದ್ದರು. ಆಸ್ಪತ್ರೆಯಲ್ಲಿ 50 ದಿನಗಳನ್ನು ಕಳೆದ ನಂತರ, ಶಾಮ್ ಗುಣಮುಖರಾದರು. ಕೆಲಸ ಪುನರಾರಂಭಿಸಿದರು. ವಿಕ್ಕಿ ಕೌಶಲ್ ಅವರ ತಂದೆ, ಶಾಮ್ ಕೌಶಲ್, 1990ರ ದಶಕದ ಅತ್ಯಂತ ಪ್ರಸಿದ್ಧ ಆ್ಯಕ್ಷನ್ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು. ಶಾಮ್ ಅವರು ಖಿಲಾಡಿ, ಗ್ಯಾಂಗ್ಸ್ ಆಫ್ ವಾಸೇಪುರ್ ಮತ್ತು ಓಂ ಶಾಂತಿ ಓಂನಂತಹ ಕೆಲವು ದೊಡ್ಡ ಬಾಲಿವುಡ್ ಹಿಟ್‌ಗಳನ್ನು ನೀಡಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಂತಹ ಹಲವಾರು ಪ್ರಸಿದ್ಧ ವ್ಯಕ್ತಿಗಳಿಗೂ ಅಸಿಸ್ಟ್ ಮಾಡಿದ್ದಾರೆ.