ಮಹೇಶ್ ಬಾಬು-ರಶ್ಮಿಕಾ ಮಂದಣ್ಣ: ಸೌತ್ ಸೆಲೆಬ್ರಿಟಿಗಳು ಕ್ರಿಸ್‌ಮಸ್ ಆಚರಿಸಿದ್ದು ಹೀಗೆ!

Published : Dec 26, 2022, 04:30 PM IST

ಡಿಸೆಂಬರ್‌ 25 ರಂದು ದೇಶಾದ್ಯಂತ ಕ್ರಿಸ್‌ಮಸ್ (Christmas) ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಕ್ರಿಸ್‌ಮಸ್ ಸಂದರ್ಭದಲ್ಲಿ ಟಾಲಿವುಡ್ ತಾರೆಗಳು ತಮ್ಮ ಮನೆಯನ್ನು ಬಲೂನ್‌ಗಳು, ಕ್ರಿಸ್ಮಸ್ ಟ್ರೀಗಳು ಮತ್ತು ಹೂವುಗಳಿಂದ ಅಲಂಕರಿಸಿದ್ದಾರೆ. ಸೌತ್ ಸ್ಟಾರ್ಸ್ ಕ್ರಿಸ್‌ಮಸ್ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಮತ್ತು ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್ವಾಲ್ ಅವರು ಕ್ರಿಸ್ಮಸ್ ಅನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಇದರ ಜೊತೆಗೆ ಬಾಲಿವುಡ್‌ ಸೆಲೆಬ್ರೆಟಿಗಳ ಸೆಲೆಬ್ರೆಷನ್‌ನ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿವೆ.

PREV
115
ಮಹೇಶ್ ಬಾಬು-ರಶ್ಮಿಕಾ ಮಂದಣ್ಣ: ಸೌತ್ ಸೆಲೆಬ್ರಿಟಿಗಳು ಕ್ರಿಸ್‌ಮಸ್ ಆಚರಿಸಿದ್ದು ಹೀಗೆ!

ಟಾಲಿವುಡ್‌ ಸೂರ್‌ ಸ್ಟಾರ್‌ ಮಹೇಶ್ ಬಾಬು ಮಗಳು ಸಿತಾರಾ ಕೈಯಲ್ಲಿ ಗಿಫ್ಟ್ ಹಿಡಿದು ಸಿಲ್ವರ್ ಕಲರ್ ಫ್ರಾಕ್ ನಲ್ಲಿ ಪೋಸ್ ಕೊಟ್ಟಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ

215

ಕ್ರಿಸ್‌ಮಸ್ ಸಂದರ್ಭದಲ್ಲಿ ಸೌತ್ ನಟಿ ಕಾಜಲ್ ಅಗರ್‌ವಾಲ್ ವಿದೇಶದಲ್ಲಿದ್ದಾರೆ. ಅವರು ಮಗ ನೀಲ್ ಅವರೊಂದಿಗೆ ಇಲ್ಲಿ ಕ್ರಿಸ್ಮಸ್ ಆಚರಿಸಿದರು. ತಾಯಿ ಮತ್ತು ಮಗನ ಅದ್ಭುತ ಫೋಟೋವೊಂದು ಮುನ್ನೆಲೆಗೆ ಬಂದಿದೆ.


 

315

ಕೆಜಿಎಫ್ ಸೂಪರ್‌ಸ್ಟಾರ್‌ ಯಶ್ ಮನೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಯಶ್ ಅವರ ಮಕ್ಕಳು ಫೋಟೋಗಳಲ್ಲಿ  ಮನೆಯಲ್ಲಿ ಕುಕ್ಕೀಸ್ ಮಾಡುತ್ತಿರುವುದು ಕಂಡುಬಂದಿದೆ.

415

ಸೂಪರ್‌ಸ್ಟಾರ್ ರಾಮ್ ಚರಣ್ ಕೂಡ ಕ್ರಿಸ್‌ಮಸ್ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಅದ್ಧೂರಿ ಆಚರಣೆ ಮತ್ತು ಪಾರ್ಟಿಯನ್ನು ಆಯೋಜಿಸಿದ್ದಾರೆ. ಅವರ ಮನೆಯಲ್ಲಿ ನಡೆದ ಸಂಭ್ರಮಾಚರಣೆಯ ಫೋಟೋಗಳು  ವೈರಲ್‌ ಆಗಿವೆ.

515

ಇತ್ತೀಚೆಗಷ್ಟೇ ಮದುವೆಯಾದ ಹನ್ಸಿಕಾ ಮೋಟ್ವಾನಿ ಕ್ರಿಸ್ಮಸ್ ಆಚರಿಸಿದ್ದಾರೆ. ಅವರು ಸಾಂತಾ ಜೊತೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಮತ್ತೊಂದೆಡೆ, ದಕ್ಷಿಣದ ಇನ್ನೊರ್ವ ನಟಿ ರಾಯ್ ಲಕ್ಷ್ಮಿ ಕೂಡ ಮನೆಯಲ್ಲಿ ಹಬ್ಬದ ಸಂಭ್ರಮಾಚರಣೆ ಮಾಡುತ್ತಿರುವುದು ಕಂಡುಬಂದಿದೆ.

615

ಸೌತ್ ನಟಿ ಶ್ರುತಿ ಹಾಸನ್ ಗೆಳೆಯ ಶಂತನು ಹಜಾರಿಕಾ ಜೊತೆ ಕ್ರಿಸ್ಮಸ್ ಆಚರಿಸಿದ್ದಾರೆ. ಹೊರಬಿದ್ದಿರುವ ಫೋಟೋದಲ್ಲಿ ಶ್ರುತಿ ತುಂಬಾ ಖುಷಿಯಲ್ಲಿ ಕಾಣುತ್ತಿದ್ದಾರೆ.
 

715

ಐಶ್ವರ್ಯಾ ರೈ ಬಚ್ಚನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗೆ ಮಗಳು ಆರಾಧ್ಯ ಅವರೊಂದಿಗಿನ ಫೋಟೋವನ್ನು ಕೊಂಡು  ಅವರ ಅಭಿಮಾನಿಗಳಿಗೆ ಶುಭ ಹಾರೈಸಿದರು. 'ಮೆರ್ರಿ ಕ್ರಿಸ್ಮಸ್ ಮತ್ತು ಹೆಚ್ಚು ಪ್ರೀತಿ, ಶಾಂತಿ, ಉತ್ತಮ ಆರೋಗ್ಯ ಮತ್ತು ಸಂತೋಷ ದೇವರು ಆಶೀರ್ವದಿಸಲಿ'ಎಂದು ಅವರು ಬರೆದಿದ್ದಾರೆ.

815

ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ದಂಪತಿ ತಮ್ಮ ಸಾಕು ನಾಯಿಗಳೊಂದಿಗೆ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಿದರು.

915

ಕರಿಷ್ಮಾ ಕಪೂರ್ ಕೆಂಪು ನೈಟ್‌ಸೂಟ್ ಮತ್ತು ಸಾಂಟಾ ಟೋಪಿಯಲ್ಲಿ, ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಶುಭಾಶಯ ಕೋರಿದರು.'ಕ್ರಿಸ್‌ಮಸ್ ಕುಕೀಸ್ ಮತ್ತು ಕಾಫಿ ನಿಮಗೆಲ್ಲರಿಗೂ ಶಾಂತಿ, ಸಂತೋಷ ಮತ್ತು ಸಕಾರಾತ್ಮಕತೆಯಿಂದ ತುಂಬಿದ ಮೆರ್ರಿ ಕ್ರಿಸ್‌ಮಸ್‌ನ ಶುಭಾಶಯಗಳು'  ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

1015

ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತನ್ನ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರ ಮೊದಲ ಕ್ರಿಸ್ಮಸ್ ಆಚರಣೆಗಾಗಿ ಬೇರೆ ಸ್ಥಳಕ್ಕೆ ತೆರಳಿದರು. ಅವರು  Instagram ಸ್ಟೋರಿಯಲ್ಲಿ  ವೀಡಿಯೊವನ್ನು ಹಂಚಿಕೊಂಡಿದ್ದಾರೆ. 

1115

ಬಾಲಿವುಡ್‌ನ ನ್ಯೂ ಮಾಮ್‌ ಆಲಿಯಾ ಭಟ್  ತನ್ನ ತಾಯಿ ಸೋನಿ ರಜ್ದಾನ್ ಮತ್ತು ಸಹೋದರಿ ಶಾಹೀನ್ ಭಟ್ ಅವರೊಂದಿಗಿನ  ಫೋಟೋಗಳನ್ನು Instagramಲ್ಲಿ ಶೇರ್‌ ಮಾಡಿದ್ದಾರೆ.

1215

ಬಾಲಿವುಡ್‌ನ ಅತ್ಯಂತ ನೆಚ್ಚಿನ ಜೋಡಿಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಫ್ಯಾಮಿಲಿ ಜೊತೆ ಕ್ರಿಸ್‌ಮಸ್‌ ಸಮಯದಲ್ಲಿ ಪೋಸ್ ನೀಡಿದರು. ದಂಪತಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಬ್ಬದ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1315

ಕ್ಲೋಸ್‌ ಫ್ರೆಂಡ್ಸ್‌ ಆದ ಮೌನಿ ರಾಯ್ ಮತ್ತು ಮಂದಿರಾ ಬೇಡಿ ತಮ್ಮ ಸ್ನೇಹಿತರೊಂದಿಗೆ ಕ್ರಿಸ್ಮಸ್ ಆಚರಿಸಿದರು. ಮಂದಿರಾ ಈ ಸಮಯದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

1415

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿ ತಮ್ಮ ಸೆಲ್ಫಿ ಹಂಚಿಕೊಂಡರು ಮತ್ತು ಅವರ ಅಭಿಮಾನಿಗಳಿಗೆ ಕ್ರಿಸ್‌ಮಸ್‌ ಹಬ್ಬದ ಶುಭಾಶಯ ಕೋರಿದರು.

1515

ರಶ್ಮಿಕಾ ಮಂದಣ್ಣ ಡಿಸೆಂಬರ್ 25 ರಂದು ಪೋಸ್ಟ್ ಮಾಡುವ ಸಲುವಾಗಿ ಮೊದಲೇ ತೆಗೆದಕೊಂಡ ಕ್ರಿಸ್‌ಮಸ್ ಟ್ರೀ ಜೊತೆಗಿರುವ  ಥ್ರೋಬ್ಯಾಕ್ ಫೋಟೋವನ್ನು  ಹಂಚಿಕೊಂಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories