ಸರ್ಕಸ್ ಸೋಲಿನ ಬಳಿಕ ಮುಂಬೈ ಬಿಟ್ಟ ರಣ್ವೀರ್ ಸಿಂಗ್; ದೀಪಿಕಾ ಕೈ ಹಿಡಿದು ಹೊರಟ ಫೋಟೋ ವೈರಲ್

Published : Dec 26, 2022, 11:22 AM IST

ಸರ್ಕಸ್ ಸೋಲಿನ ಬಳಿಕ ನಟ ರಣ್ವೀರ್ ಸಿಂಗ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ದೀಪಿಕಾ ಜೊತೆ ಮುಂಬೈ ತೊರೆದಿದ್ದಾರೆ. 

PREV
16
ಸರ್ಕಸ್ ಸೋಲಿನ ಬಳಿಕ ಮುಂಬೈ ಬಿಟ್ಟ ರಣ್ವೀರ್ ಸಿಂಗ್; ದೀಪಿಕಾ ಕೈ ಹಿಡಿದು ಹೊರಟ ಫೋಟೋ ವೈರಲ್

ರಣ್ವೀರ್ ಸಿಂಗ್ ಇತ್ತೀಚಿಗಷ್ಟೆ ಸರ್ಕಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದೆ. ಈ ಬಾರಿಯೂ ಅಭಿಮಾನಿಗಳನ್ನು ಮೋಡಿ ಮಾಡಲು ರಣ್ವೀರ್ ಸಿಂಗ್ ವಿಫಲವಾಗಿದ್ದಾರೆ. ಸರ್ಕಸ್ ಸೋಲಿನಿಂದ ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. 
 

26

ಸರ್ಕಸ್ ಸೋಲಿನ ಬಳಿಕ ರಣ್ವೀರ್ ಸಿಂಗ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮೊದಲ ಬಾರಿಗೆ ಕಾಣಿಸಿಕೊಂಡಿರುವ ರಣ್ವೀರ್ ಪತ್ನಿ ದೀಪಿಕಾ ಜೊತೆ ಮುಂಬೈ ತೊರೆದಿದ್ದಾರೆ. ಇಬ್ಬರೂ ಗೇಟ್‌ವೇ ಆಫ್ ಇಂಡಿಯಾ ಬಳಿ ಬೋಟ್‌ ಹತ್ತಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 

36

ಅಂದಹಾಗೆ ರಣ್ವೀರ್ ಮತ್ತು ದೀಪಿಕಾ ಜೋಡಿ ಅಲಿಬಾಗ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಕ್ರಿಸ್ಮಸ್ ಆಚರಣೆ ಮಾಡಲು ಇಬ್ಬರೂ ಮುಂಬೈ ತೊರೆದು ಅಲಿಬಾಗ್ ಹೋಗಿದ್ದಾರೆ. ರಣ್ವೀರ್ ಸಿಂಗ್ ಕಪ್ಪು ಬಣ್ಣದ ಟೀ ಶರ್ಟ್ ಮತ್ತು ಕ್ಯಾಪ್ ಧರಿಸಿದ್ರೆ ದೀಪಿಕಾ ಪಡುಕೋಣೆ ಸಂಪೂರ್ಣ ಬಳಿ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. 
 

46

ಸರ್ಕಸ್ ಸಿನಿಮಾ ಮೂಲಕ ಅಭಿಮಾನಿಗಳ ಬಂದ ರಣ್ವೀರ್‌ಗೆ ಭಾರಿ ನಿರಾಸೆ ಮೂಡಿಸಿದೆ. ರೋಹಿತ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿಯೇ ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾಗಳಲ್ಲಿ ಅತ್ಯಂತ ಕಡಿಮೆ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ. 

56

ಅಂದಹಾಗೆ ಸರ್ಕಸ್ ಸಿನಿಮಾದಲ್ಲಿ ದೀಪಿಕಾ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪತಿ-ಪತ್ನಿ ಇಬ್ಬರೂ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದ್ದಾರೆ. ಅಂದಹಾಗೆ ದೀಪಿಕಾ ಪಠಾಣ್ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. 

66
Deepika Padukone

ಇತ್ತೀಚಿಗಷ್ಟೆ ಪಠಾಣ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದೀಪಿಕಾ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಸಂಪೂರ್ಣವಾಗಿ ದೀಪಿಕಾ ಸ್ವಿಮ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories