ಬಾಲನಟಿಯಾಗಿ ಹಿಂದಿ ಚಿತ್ರರಂಗದಲ್ಲಿ ವೃತ್ತಿ ಜೀವನ ಆರಂಭಿಸಿದ ತುನಿಷಾ ಶರ್ಮಾ ಡಿಸೆಂಬರ್ 24ರಂದು ಶೂಟಿಂಗ್ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೇಕಪ್ ರೂಂಗೆ ತೆರಳಿದ ತುನಿಷಾ ಕೆಲ ಹೊತ್ತಾದರೂ ವಾಪಸ್ ಬರಲಿಲ್ಲ. ಇದರಿಂದ ಅನುಮಾನಗೊಂಡ ಸಹ ಕಲಾವಿದರು ಮೇಕಪ್ ರೂಂಗೆ ತೆರಳಿದ್ದಾರೆ.
ಈ ವೇಳೆ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ತಕ್ಷಣ ನೇಣು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಕ್ಕೂ ಮೊದಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಭಾರತ್ ಕಾ ವೀರ್ ಪುತ್ರ, ಮಹಾರಾಣಾ ಪತ್ರಾಪ್, ಚಕ್ರವರ್ತಿ ಸಾಮ್ರಾಟ್, ಗಬ್ಬಾರ್ ಪೂಂಚವಾಲ, ಶೇರ್ ಇ ಪಂಜಾಬ್, ಮಹಾರಾಜ ರಂಜಿತ್ ಸಿಂಗ್, ಇಂರ್ಟನೆಟ್ ವಾಲಾ, ಇಶ್ಕ್ ಶುಬಾನ್ ಅಲ್ಲಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ದಾಸ್ತಾನ್ ಇ ಕಾಬೂಲ್‌ನಲ್ಲಿ ಅತ್ಯುತ್ತಮ ಪಾತ್ರದ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಕೆಲವೇ ವರ್ಷಗಳಲ್ಲಿ ಮುಂಬೈ ಸ್ಮಾಲ್ ಸ್ಕ್ರೀನ್‌ನಲ್ಲಿ ಅತೀ ದೊಡ್ಡ ಹೆಸರು ಮಾಡಿದ್ದರು.
ಧಾರವಾಹಿ ಮಾತ್ರವಲ್ಲ, ಮರಾಠಿ, ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಿತೂರ್, ಬಾರ್ ಬಾರ್ ದೇಖೋ ಕಹಾನಿ 2, ದುರ್ಗಾ ರಾಣಿ ಸಿಂಗ್, ದಬಾಂಗ್ 3 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಾರ್ ಬಾರ್ ದೇಖೋ ಚಿತ್ರದಲ್ಲಿ ಕತ್ರಿನಾ ಕೈಫ್ ಬಾಲ್ಯದ ಪಾತ್ರ ಹಾಕಿದ್ದರು. ಇನ್ನು ದುರ್ಗಾ ರಾಣಿ ಸಿಂಗ್ ಚಿತ್ರದಲ್ಲಿ ವಿದ್ಯಾಬಾಲನ್ ಪುತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.