Biggest Flop Movies: ಪ್ರತಿ ವರ್ಷ ಅನೇಕ ಚಿತ್ರಗಳು ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗುತ್ತವೆ. ಕೆಲವು 100 ಕೋಟಿ ಗಡಿ ದಾಟಿದ ತಕ್ಷಣ ಹಿಟ್ ಆಗುತ್ತವೆ, ಆದರೆ ಇಂದು ನಾವು 100 ಕೋಟಿ ರೂಪಾಯಿ ಗಳಿಸಿದರೂ ಸಿನಿಮಾದ ಬಜೆಟ್ ಹತ್ತಿರವೂ ಬಾರದೆ ನೆಲಕಚ್ಚಿಕೊಂಡ ಸಿನಿಮಾಗಳ ಲಿಸ್ಟ್ ಇಲ್ಲಿದೆ.
₹100 ಕೋಟಿ ಗಳಿಸಿದ ಅನೇಕ ಚಲನಚಿತ್ರಗಳನ್ನು ಹಿಟ್ ಎಂದು ಪರಿಗಣಿಸಲಾಗುತ್ತದೆ, ಆದರೆ ₹100 ಕೋಟಿ ಗಳಿಸಿದ ನಂತರವೂ ಸೋತ ಹಲವು ಚಿತ್ರಗಳಿವೆ. ಇಲ್ಲಿ ಸಲ್ಮಾನ್ ಖಾನ್ ನಿಂದ ಅಮೀರ್ ಖಾನ್ ವರೆಗೂ ಹಲವಾರು ನಾಯಕರ ಸಿನಿಮಾಗಳ ಪಟ್ಟಿ ಇದೆ. ಈ ಸಿನಿಮಾಗಳು 100 ಕೋಟಿ ಗಳಿಸಿದ್ರೂ ಸಹ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ ಸಿನಿಮಾಗಳು.
28
83 ಚಿತ್ರ
ರಣವೀರ್ ಸಿಂಗ್ ಅಭಿನಯದ ‘83’ ಚಿತ್ರ ಕೂಡ ಭಾರಿ ಸದ್ದು ಮಾಡಿದ್ದು ನಿಜಾ, ಆದರೆ ಬಾಕ್ಸ್ ಆಫೀಸ್‌ನಲ್ಲಿ ₹109 ಕೋಟಿ ಗಳಿಸಿದ ಈ ಚಿತ್ರ, ಭಾರಿ ಯಶಸ್ಸು ಕಂಡುಕೊಳ್ಳುವಲ್ಲಿ ವಿಫಲವಾಯಿತು. ಈ ಚಿತ್ರವನ್ನು 260 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.
38
ಆದಿಪುರುಷ್
ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ 'ಆದಿಪುರುಷ್' ಚಿತ್ರ ಬರೋಬ್ಬರಿ 700 ಕೋಟಿ ವೆಚ್ಚದಲ್ಲಿ ನಿರ್ಮಾಣವಾದಂತಹ ಸಿನಿಮಾ, ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದು ಮಾತ್ರ ಕೇವಲ ₹250 ಕೋಟಿ. 'ಆದಿಪುರುಷ್' ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸೋಲು ಕಂಡಿತು.
ಸಲ್ಮಾನ್ ಖಾನ್ ಅವರ ಚಿತ್ರ ‘ಟ್ಯೂಬ್‌ಲೈಟ್’ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ₹200 ಕೋಟಿಗೂ ಹೆಚ್ಚು ಗಳಿಸಿತು. ಆದರೆ ಆ ಚಿತ್ರ ಕೂಡ ಯಶಸ್ಸನ್ನು ಕಾಣಲಿಲ್ಲ. ಈ ಚಿತ್ರ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣಲೇ ಇಲ್ಲ.
58
ವಾರ್ 2
ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಭಾರಿ ಕುತೂಹಲ ಹುಟ್ಟಿಸಿದ ಸುಮಾರು 400 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ‘ವಾರ್ 2 ‘ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ಈ ಚಿತ್ರವು ₹200 ಕೋಟಿಗೂ ಹೆಚ್ಚು ಗಳಿಸಿತ್ತು.
68
ಥಗ್ಸ್ ಆಫ್ ಹಿಂದೂಸ್ತಾನ್
ಆಮೀರ್ ಖಾನ್ ಅವರ ಚಿತ್ರ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರ ₹140 ಕೋಟಿ ಗಳಿಸಿತು, ಆದರೆ ಅದು ಕೂಡ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ. ಈ ಚಿತ್ರದ ಬಜೆಟ್ 300 ಕೋಟಿ. ಆದರೆ ಸಿನಿಮಾ ಬಜೆಟ್ ನ ಅರ್ಧದಷ್ಟು ಕೂಡ ಲಾಭ ಮಾಡಲಿಲ್ಲ.
78
ಕಿಸಿ ಕಾ ಭಾಯ್ ಕಿಸಿ ಕಿ ಜಾನ್
ಸಲ್ಮಾನ್ ಖಾನ್ ಅವರ ‘ಕಿಸಿ ಕಾ ಭಾಯ್, ಕಿಸಿ ಕಿ ಜಾನ್’ ಚಿತ್ರ ₹100 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು, ಆದರೆ ಸಿನಿಮಾ ಮಾತ್ರ ಸದ್ದು ಮಾಡಲೇ ಇಲ್ಲ. ಈ ಚಿತ್ರದ ಬಜೆಟ್ 225 ಕೋಟಿಯಾಗಿತ್ತು.
88
ಸಿಕಂದರ್
ಸಲ್ಮಾನ್ ಖಾನ್ ಅವರ ‘ಸಿಕಂದರ್’ ಚಿತ್ರ ಕೂಡ ಈ ಲಿಸ್ಟ್ ನಲ್ಲಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ₹100 ಕೋಟಿಗೂ ಹೆಚ್ಚು ಗಳಿಸಿತು. ಆದರೆ ಸಿನಿಮಾ ಬಜೆಟ್ 200 ಕೋಟಿಗೂ ಅಧಿಕವಾಗಿದ್ದುದರಿಂದ ಸಿನಿಮಾ ಫ್ಲಾಪ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.