Published : Jan 12, 2026, 10:02 PM ISTUpdated : Jan 12, 2026, 11:03 PM IST
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ 8 ಗಂಟೆ ಆತನ ಜೊತೆಗಿದ್ದೆ , ಅನಾಮಿಕನ ಜೊತೆ ಪರಿಚಯ, ಕಾಫಿ , ಮೂವಿ ಸೇರಿದಂತೆ ಮೊದಲ ಆ್ಯಪ್ ಡೇಟಿಂಗ್ ಅನುಭವವನ್ನು ಮಿಲನ ನಟಿ ಪಾರ್ವತಿ ಬಿಚ್ಚಿಟ್ಟಿದ್ದಾರೆ.
ಮಿಲನ ಸಿನಿಮಾ ಖ್ಯಾತಿ ನಟ ಪಾರ್ವತಿ ತಿರುವೊತ್ತು ತಮ್ಮ ಮೊದಲ ಡೇಟಿಂಗ್ ಆ್ಯಪ್ ಅನುಭವ ಹಂಚಿಕೊಂಡಿದ್ದಾರೆ. ಇದೇ ವೇಳೆ ಹಲವು ರೋಚಕ ಹಾಗೂ ರಹಸ್ಯ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. 2021ರ ಬ್ರೇಕಪ್ ನಂತರ ತಾನು ಮೂರು ವರ್ಷಗಳ ಕಾಲ ಸಿಂಗಲ್ ಆಗಿದ್ದೆ ಎಂದು ಪಾರ್ವತಿ ಹೇಳಿದ್ದಾರೆ. ಲಾಸ್ ಎಂಜಲೀಸ್‌ನಲ್ಲಿದ್ದಾಗ,ಸ್ನೇಹಿತೆಯ ಸಲಹೆಯಂತೆ ಫೀಲ್ಡ್' ಎಂಬ ಡೇಟಿಂಗ್ ಆ್ಯಪ್ ಬಳಸಿದ್ದೆ. ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಚಾಟಿಂಗ್‌ನಲ್ಲಿ ಸಮಯ ವ್ಯರ್ಥ ಮಾಡದೆ ನೇರವಾಗಿ ಕಾಫಿಗೆ ಆಹ್ವಾನಿಸಿದ್ದೆ ಎಂದು ಪಾರ್ವತಿ ಹೇಳಿದ್ದಾರೆ.
28
ಒಬ್ಬ ವ್ಯಕ್ತಿಯ ಹುಡುಕಿ ಮೆಸೇಜ್ ಮಾಡಿದ್ದೆ
ನಾನು ಸಿಂಗಲ್ ಆಗಿದ್ದಾಗ ನನಗೆ ಗೆಳತಿ ಸಲಹೆ ನೀಡಿದ್ದರು. ಆಕೆಯೆ ಬಂಬಲ್, ರಾಯ ಮತ್ತು ಫೀಲ್ಡ್ ಎಂಬ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ ಕೊಟ್ಟಳು. ನಾನು ಕೆಲಸದ ನಿಮಿತ್ತ ಲಾಸ್ ಏಂಜಲೀಸ್‌ಗೆ ಹೋಗಿದ್ದೆ. ಆಗ ಫೀಲ್ಡ್ ಆ್ಯಪ್ ಟ್ರೈ ಮಾಡೋಣ ಅನಿಸಿತು ಎಂದು ಪಾರ್ವತಿ ಹೇಳಿದ್ದಾರೆ. ಹಾಗೆ ನಾನು ನೋಡಲು ನಾರ್ಮಲ್ ಆಗಿದ್ದ ಒಬ್ಬ ವ್ಯಕ್ತಿಯನ್ನು ಹುಡುಕಿ ಮೆಸೇಜ್ ಮಾಡಿದೆ. ಡೇಟಿಂಗ್ ಆ್ಯಪ್‌ನಲ್ಲಿ ಮಾತನಾಡಿ ನನಗೆ ಅಭ್ಯಾಸವಿಲ್ಲ. ನೇರವಾಗಿ 'ಕಾಫಿ ಕುಡಿಯೋಣವೇ?' ಎಂದು ಮೆಸೇಜ್ ಕಳುಹಿಸಿದೆ.
38
3 ದಿನದಲ್ಲಿ ಮರಳುತ್ತೇನೆ, ಬೇಗ ಹೇಳು ಎಂದು ಮೆಸೇಜ್
ಪಾರ್ವತಿ ಮೆಸೇಜ್ ನೋಡಿದ ಅನಾಮಿಕ ವ್ಯಕ್ತಿ, ಸಾಮಾನ್ಯವಾಗಿ ಜನರು ಕೆಲವು ದಿನಗಳ ಕಾಲ ಚಾಟ್ ಮಾಡುತ್ತಾರೆ ಬಳಿಕ ಭೇಟಿ ಎಂದು ಮೆಸೇಜ್ ಮಾಡಿದ್ದ. ನನಗೆ ಅಷ್ಟು ಸಮಯ ಇರಲಿಲ್ಲ. ಮೂರು ದಿನಗಳಲ್ಲಿ ವಾಪಸ್ ಹೋಗುತ್ತೇನೆ, ಭೇಟಿಯಾಗಬೇಕೋ ಬೇಡವೋ ನೀನೇ ಹೇಳು ಎಂದು ಮೆಸೇಜ್ ಕಳುಹಿಸಿದ್ದೆ ಎಂದು ತಮ್ಮ ಡೇಟಿಂಗ್ ಆ್ಯಪ್ ಅನುಭವ ಬಿಚ್ಚಿಟ್ಟಿದ್ದಾರೆ.
ಅವನು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಇಂಜಿನಿಯರ್ ಆಗಿದ್ದ, ಚಾಟಿಂಗ್‌ನಲ್ಲಿ ಫೋಟೋ ಕೇಳಿದ್ದ. ಹೀಗಾಗಿ ಆತನಿಗೆ ನನ್ನ ಫೋಟೋ ಕಳುಹಿಸಿದ್ದೆ. ಆತ ಅಮೆರಿಕನ್ ಆಗಿದ್ದ. ಕಾಫಿ ಡೇಟ್‌ಗೆ ಒಪ್ಪಿದ್ದ. ಆದರೆ ಖಾಸಗಿ ಸ್ಥಳಕ್ಕೆ ಹೋಗುವುದು ಬೇಡ ಎನಿಸಿತ್ತು. ಹೀಗಾಗಿ ಸಿನಿಮಾಗೆ ಹೋಗೋಣವೇ ಎಂದು ಕೇಳಿದ್ದೆ. ಅದರಂತೆ 'ಕೈಂಡ್ಸ್ ಆಫ್ ಕೈಂಡ್‌ನೆಸ್' ಎಂಬ ಸಿನಿಮಾ ನೋಡಲು ಹೋದೆವು. ಮೊದಲ ಡೇಟ್‌ನಲ್ಲಿ ನೋಡಲು ಇದಕ್ಕಿಂತ ವಿಚಿತ್ರವಾದ ಸಿನಿಮಾ ಇನ್ನೊಂದಿಲ್ಲ ಎಂದು ಪಾರ್ವತಿ ಅನುಭವಗಳನ್ನು ಹೇಳಿದ್ದಾರೆ.
58
ಅಂದು ನನಗೆ ಪಿರಿಯಡ್ಸ್ ಆಗಿತ್ತು
ಅಂದು ನನಗೆ ಪಿರಿಯಡ್ಸ್ ಆಗಿತ್ತು. ತುಂಬಾ ಸುಸ್ತಾಗಿತ್ತು. ಮಾಲ್‌ನಲ್ಲಿ ಅವನಿಗಾಗಿ ಕಾಯುತ್ತಿರುವಾಗ ನಾನೊಂದು ಹಾಟ್ ಚಾಕೊಲೇಟ್ ಆರ್ಡರ್ ಮಾಡಿದೆ. ಅವನು ನಡೆದು ಬರುವಾಗ ನಾನು ಕಣ್ಣಿನಿಂದ ಲೆನ್ಸ್ ತೆಗೆದು ಕನ್ನಡಕ ಹಾಕಿಕೊಳ್ಳುತ್ತಿದ್ದುದನ್ನು ನೋಡಿದ. ಅವನೂ ಕನ್ನಡಕ ಧರಿಸಿದ್ದ. ಅವನನ್ನು ನೋಡಲು 'ಫ್ರೆಂಡ್ಸ್' ಸೀರಿಸ್‌ನ ರಿಚರ್ಡ್‌ನಂತೆ ಇದ್ದ ಎಂದು ಅನಾಮಿಕ ವ್ಯಕ್ತಿಯ ವರ್ಣನೆ ಮಾಡಿದ್ದಾರೆ.
68
ಜೊತೆಯಾಗಿ ಎಂಟು ಗಂಟೆ ಕಳೆದೆ
ನನಗೆ ಸಮಯ ಕಡಿಮೆ ಇತ್ತು. ಹೀಗಾಗಿ ಡೇಟಿಂಗ್‌ನಲ್ಲಿ ಚಾಟಿಂಗ್ ಬದಲು ಮೀಟಿಂಗ್ ಆರಂಭಗೊಂಡಿತ್ತು. ನಾವು ಬೇಗನೆ ಮಾತನಾಡಲು ಶುರು ಮಾಡಿದೆವು. ಅದು ತುಂಬಾ ಒಳ್ಳೆಯ ಸಮಯವಾಗಿತ್ತು. ಎಂಟು ಗಂಟೆಗಳ ಕಾಲ ಒಟ್ಟಿಗೆ ಕಳೆದವು. ನಂತರ ನನ್ನನ್ನು ಹೋಟೆಲ್‌ಗೆ ಡ್ರಾಪ್ ಮಾಡಿದ. ಇದೇ ಮೊದಲ ಬಾರಿಗೆ ಯಾರೋ ಒಬ್ಬರು ನನ್ನನ್ನು ಡೇಟ್‌ಗೆ ಕರೆದೊಯ್ದಿದ್ದರು. ನಾನು ಎಂಜಾಯ್ ಮಾಡಿದೆ ಎಂದು ಹೌಟರ್‌ಫ್ಲೈಗೆ ನೀಡಿದ ಸಂದರ್ಶನದಲ್ಲಿ ಪಾರ್ವತಿ ಹೇಳಿದ್ದಾರೆ.
78
ಪಾರ್ವತಿ ಡೇಟಿಂಗ್ ಅನುಭವ ಮಿಶ್ರ ಪ್ರತಿಕ್ರಿಯೆ
ಪಾರ್ವತಿ ಇವತ್ತೂರ್ ಮೊದಲ ಡೇಟಿಂಗ್ ಅನುಭವಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬ್ರೇಕ್ ಅಪ್ ಪ್ರೀತಿಯಿಂದ ಹೊರಬರಲು ಈ ರೀತಿ ರಿಲೇಶನ್‌ಶಿಪ್ ಉತ್ತಮವಲ್ಲ ಎಂದು ಹಲವರು ಸಲಹೆ ನೀಡಿದ್ದಾರೆ. ಬ್ರೇಕ್ಅಪ್ ಮಾಡಿಕೊಂಡ ವ್ಯಕ್ತಿಗೆ ತಾನು ಖುಷಿಯಾಗಿದ್ದೇನೆ ಎಂದು ತೋರಿಸಲು ಮಾಡಿದ ನಾಟಕದಂತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಪಾರ್ವತಿ ಡೇಟಿಂಗ್ ಅನುಭವ ಮಿಶ್ರ ಪ್ರತಿಕ್ರಿಯೆ
88
ನಟಿಯ ಧೈರ್ಯಕ್ಕೆ ಭಾರಿ ಮೆಚ್ಚುಗೆ
ಇದೇ ವೇಳೆ ನಟಿಯ ಧೈರ್ಯಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಅಮೆರಿಕದಲ್ಲಿ ಅನಾಮಿಕ ವ್ಯಕ್ತಿಗೆ ಮೆಸೇಜ್ ಮಾಡಿ ಅಷ್ಟೇ ಬೇಗನೆ ಕಾಫಿ ಡೇಟ್, ಮೂವಿ ಡೇಟ್ ಮುಗಿಸಿದ ನಟಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಚಾಟಿಂಗ್, ಅಷ್ಟೇ ವೇಗದಲ್ಲಿ ಮೀಟಿಂಗ್, ಮೂವಿ ಸರಿಸುಮಾರು 8 ಗಂಟೆಗಳ ಸುತ್ತಾಟವೇ ಅದ್ಭುತ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ನಟಿಯ ಧೈರ್ಯಕ್ಕೆ ಭಾರಿ ಮೆಚ್ಚುಗೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.