ಮಗುವಿನ ಗೌಪ್ಯತೆ ಕಾಪಾಡಲು ನೋ ಫೋಟೋ ಪಾಲಿಸಿ ಆರಿಸಿಕೊಂಡ ಆಲಿಯಾ ಭಟ್‌

First Published | Nov 23, 2022, 4:50 PM IST

ಈ ದಿನಗಳಲ್ಲಿ ಬಾಲಿವುಡ್‌ನ ಕಪಲ್‌ ಆಲಿಯಾ ಭಟ್‌ (Alia Bhatt) ಮತ್ತು ರಣಬೀರ್‌ ಕಪೂರ್‌ (Ranbir Kapoor) ತಮ್ಮ ಮೊದಲ ಮಗುವಿನ ಆಗಮನದ ಸಂತಸದಲ್ಲಿದ್ದಾರೆ. ನವೆಂಬರ್‌ 6ರಂದು ತಮ್ಮ ಮಗಳನ್ನು ಸ್ವಾಗತಿಸಿದ ಈ ಜೋಡಿ ತಮ್ಮ ನವಜಾತ ಶಿಶುವಿನ ಗೌಪ್ಯತೆಯ ಬಗ್ಗೆ ಚಿಂತಿತರಾಗಿದ್ದಾರೆ. ಈ ಕಾರಣದಿಂದ ನಟಿ ಆಲಿಯಾ ಭಟ್ ಮಗುವಿಗಾಗಿ ನೋ ಫೋಟೋ ಪಾಲಿಸಿಯನ್ನು ಆರಿಸಿಕೊಂಡಿದ್ದಾರೆ. ನನ್ನ ಮಗುವಿನ ಜೀವನದಲ್ಲಿ ಹಸ್ತಕ್ಷೇಪವನ್ನು ಬಯಸುವುದಿಲ್ಲ ಎಂದು ಘೋಷಿಸಿದ್ದಾರೆ.
 

ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ತನ್ನ ಗಂಡನ ಬಗ್ಗೆ ಮಾತನಾಡಿದ್ದಾರೆ. ಅವರು ರಣಬೀರ್ ಹೊಂದಿರುವ ಹಲವಾರು ವೃತ್ತಿಪರ ಗುಣಲಕ್ಷಣಗಳನ್ನು  ನಿಜವಾಗಿಯೂ ಗೌರವಿಸುತ್ತಾರೆ ಮತ್ತು ಸಾರ್ವಜನಿಕರಿಂದ ತಪ್ಪಿಸಿ ತನ್ನ ಮಗುವನ್ನು ಬೆಳೆಸುವ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದರು.

ಮಗುವಿಗೆ ಜನ್ಮ ನೀಡುವ ಕೆಲವು ದಿನಗಳ ಮೊದಲು, ಆಲಿಯಾ ಸಂದರ್ಶನವೊಂದರಲ್ಲಿ ತನ್ನ ಮಗುವನ್ನು ಹೇಗೆ ಬೆಳೆಸಬೇಕು ಎಂದು ಚರ್ಚಿಸಿದ್ದಾರೆ. ಅದರ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಒಪ್ಪಿಕೊಂಡರು.

Tap to resize

ಆಲಿಯಾ ಫ್ರೆಂಚ್ ಜರ್ನಲ್ ಮೇರಿ ಕ್ಲೇರ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ತನ್ನ ನವಜಾತ ಶಿಶುವಿನ (Infant) ಗೌಪ್ಯತೆಯ ಬಗ್ಗೆ ತುಂಬಾ ಪ್ರೊಟೆಕ್ಟಿವ್‌ ಆಗಿದ್ದಾರೆ ಮತ್ತು ತನ್ನ ಮಗುವಿನ ಜೀವನದಲ್ಲಿ ಯಾವುದೇ ಹಸ್ತಕ್ಷೇಪವನ್ನು ಬಯಸುವುದಿಲ್ಲ ಎಂದು ಹೇಳಿದರು. 

ಬಹು ಮಾಧ್ಯಮ ಮೂಲಗಳ ಪ್ರಕಾರ, ನಟಿ ತನ್ನ ಪುಟ್ಟ ಮಗುವಿಗೆ 'ನೋ ಫೋಟೋ ಪಾಲಿಸಿ' ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ಮಗುವನ್ನು ಜನಮನದಿಂದ ರಕ್ಷಿಸಲು ಈ ಮಾರ್ಗ ಆಯ್ಕೆ ಮಾಡಿರುವ  ನಟಿಯರಲ್ಲಿ ಆಲಿಯಾ ಮೊದಲನೇ ಅವರೇನೂ ಅಲ್ಲ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಹ  ತಮ್ಮ ಮಗಳ ಫೋಟೋಗಳನ್ನು ತೆಗೆದುಕೊಳ್ಳದಂತೆ ಛಾಯಾಗ್ರಾಹಕರನ್ನು  ವಿನಂತಿಸಿದ್ದಾರೆ.

 ಆಲಿಯಾ ಮತ್ತು ರಣಬೀರ್ ರೊಮ್ಯಾನ್ಸ್‌ ಅವರ ಚಲನಚಿತ್ರ 'ಬ್ರಹ್ಮಾಸ್ತ್ರ' ಸೆಟ್‌ನಲ್ಲಿ ಪ್ರಾರಂಭವಾಯಿತು ಮತ್ತು ಹಲವಾರು ವರ್ಷಗಳ ಡೇಟಿಂಗ್ ನಂತರ, ಅವರು  ಏಪ್ರಿಲ್ 14, 2022 ರಂದು ವಿವಾಹವಾದರು.

ಈ ಜೋಡಿಯು ರಣಬೀರ್‌ ಕಪೂರ್‌ ಅವರ ಮನೆಯಲ್ಲೇ ತಮ್ಮ ಪ್ರೀತಿಪಾತ್ರರು ಮತ್ತು ಆಪ್ತ ಸ್ನೇಹಿತರ ಮುಂದೆ ಸಪ್ತಪದಿ ತುಳಿದರು ಮತ್ತು ಇದು ತುಂಬಾ ಕ್ಲೋಸ್‌ ಹಾಗೂ ಸಣ್ಣ ಪ್ರಮಾಣದ ವಿವಾಹವಾಗಿತ್ತು. 
 

Latest Videos

click me!