Published : Feb 15, 2023, 02:28 PM ISTUpdated : Feb 15, 2023, 03:01 PM IST
ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಮದುವೆಯಾಗಿ ಒಂದು ವಾರ ಕಳೆದಿದೆ. ಆದರೂ ಅವರ ಮದುವೆ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಫೋಟೋಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಡ್ರೆಂಡ್ ಆಗಿಯೇ ಉಳಿದಿವೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ, ದಂಪತಿಗಳು ತಮ್ಮ ವಿವಾಹಪೂರ್ವ ಕಾರ್ಯಕ್ರಮಗಳ ಕೆಲವು ಫೊಟೋಗಳನ್ನು ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಹೊಸ ಫೋಟೋಗಳನ್ನು ಹಂಚಿಕೊಂಡ ಸಿದ್ ಕಿಯಾರಾ ದಂಪತಿ 'ಪ್ರೀತಿಯ ಬಣ್ಣ ಏರಿದೆ' ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದರೊಂದಿಗೆ, ಅವರು ರೆಡ್ ಹಾರ್ಟ್‌ನ ಎಮೋಜಿ ಸಹ ಹಂಚಿಕೊಂಡಿದ್ದಾರೆ.
210
ಸಿಲ್ವರ್ ಬಣ್ಣದ ಲೆಹೆಂಗಾವನ್ನು ಧರಿಸಿರುವ ಕಿಯಾರಾ ತಮ್ಮ ಲುಕ್ ಪೂರ್ಣಗೊಳಿಸಲು, ಲೆಹೆಂಗಾದೊಂದಿಗೆ ಮಸ್ಟರ್ಡ್ ಕಲರ್ ದುಪ್ಪಟ್ಟಾವನ್ನು ಮ್ಯಾಚ್ ಮಾಡಿಕೊಂಡಿದ್ದಾರೆ ಮತ್ತು ಅವರು ಬಾರಿ ಆಭರಣಗಳನ್ನು ಧರಿಸಿದ್ದಾರೆ.
310
ಮತ್ತೊಂದೆಡೆ, ಸಿದ್ಧಾರ್ಥ್ ಮಲ್ಹೋತ್ರಾ ಮಸ್ಟರ್ಡ್ ಕಲರ್ ಬಣ್ಣದ ಕುರ್ತಾ ಧರಿಸಿದ್ದಾರೆ. ಸಿದ್ ಕುರ್ತಾ ಬಣ್ಣವನ್ನು ಕಿಯಾರಾರ ದುಪಟ್ಟಾ ಜೊತೆ ಮ್ಯಾಚ್ ಮಾಡಿಕೊಂಡಿದ್ದಾರೆ. ಈ ಲುಕ್‌ನಲ್ಲಿ ಸಿದ್ಧಾರ್ಥ್ ಸಖತ್ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ.
410
ಸಿದ್ಧಾರ್ಥ್ ಮತ್ತು ಕಿಯಾರಾ ರೊಮ್ಯಾಂಟಿಕ್ ಶೈಲಿಯಲ್ಲಿ ಪೋಸ್ ನೀಡಿದ್ದಾರೆ. ಫೋಟೋದಲ್ಲಿ, ದಂಪತಿ ಪರಸ್ಪರರ ಕಣ್ಣುಗಳಲ್ಲಿ ಕಳೆದು ಹೋಗಿರುವುದನ್ನು ಕಾಣಬಹುದು.
510
ಕಿಯಾರಾ ಅಡ್ವಾಣಿ ಅವರ ಸಹೋದರ ಮಿಶಾಲ್ ಅಡ್ವಾಣಿ ವ್ಯಾಲೆಂಟೆನ್ಸ್ ಡೇ ಸಂದರ್ಭದಲ್ಲಿ ಅಕ್ಕನ ಜೊತೆಯಿರುವ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
610
ಇದಕ್ಕೂ ಮೊದಲು, ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಮದುವೆಯ ದಿನದಂದು ಅಂದರೆ ಫೆಬ್ರವರಿ 7 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು.
710
ವೀಡಿಯೊದಲ್ಲಿ, ಕಿಯಾರಾ ಮಂಟಪದಲ್ಲಿ ಕಾಯುತ್ತಿರುವ ಸಿದ್ಧಾರ್ಥ್‌ಗಾಗಿ ಜೊತೆಯಾಗಿ ನಟಿಸಿದ ಶೇರ್ಶಾ ಚಿತ್ರದ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ, ಒಬ್ಬರಿಗೊಬ್ಬರು ಹೂಮಾಲೆ ಹಾಕಿ ಮತ್ತು ಲಿಪ್-ಟು-ಲಿಪ್ ಕಿಸ್ ಮಾಡಿರುವ ವೀಡಿಯೋ ಸಖತ್ ವೈರಲ್ ಆಗಿತ್ತು.
810
ಸಿದ್ಧಾರ್ಥ್ ಮತ್ತು ಕಿಯಾರಾ ಫೆಬ್ರವರಿ 7 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಐಷಾರಾಮಿ ಹೋಟೆಲ್ ಸೂರ್ಯಗಢ್ ಪ್ಯಾಲೇಸ್‌ನಲ್ಲಿ ವಿವಾಹವಾದರು. ದಂಪತಿಯ ಕುಟುಂಬ ಸದಸ್ಯರು, ಅಪ್ತ ಸಂಬಂಧಿಕರು ಮತ್ತು ಕರಣ್ ಜೋಹರ್, ಶಾಹಿದ್ ಕಪೂರ್ ಮುಂತಾದವರು ಈ ಮದುವೆಯಲ್ಲಿ ಭಾಗಿಯಾಗಿದ್ದರು.
910
ಮದುವೆಯ ನಂತರ ಸಿದ್ಧಾರ್ಥ್ ಮತ್ತು ಕಿಯಾರಾ ಎರಡು ಮದುವೆಯ ಆರತಕ್ಷತೆಗಳನ್ನು ಆಯೋಜಿಸಿದ್ದರು. ಫೆಬ್ರವರಿ 9 ರಂದು ನವದೆಹಲಿಯಲ್ಲಿ ನಡೆದಿದೆ. ಕಾರ್ಯಕ್ರಮದ ಯಾವುದೇ ಫೋಟೋಗಳು ಹೊರಬಿದ್ದಿಲ್ಲ. ಇದು ಸಿದ್ಧಾರ್ಥ್ ಅವರ ಸಂಬಂಧಿಕರು ಮತ್ತು ಸ್ಥಳೀಯ ಸ್ನೇಹಿತರಿಗೆ ಮಾತ್ರ ಸೀಮಿತವಾಗಿತ್ತು
1010
ಅದೇ ಸಮಯದಲ್ಲಿ, ಫೆಬ್ರವರಿ 12 ರಂದು ಮುಂಬೈನಲ್ಲಿ ಎರಡನೇ ಆರತಕ್ಷತೆ ನಡೆಯಿತು, ಇದರಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದು ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿವೆ.