ಮಲೈಕಾ ಅರೋರಾ-ಅರ್ಜನ್ ಕಪೂರ್, ಕರೀನಾ, ಅನುಷ್ಕಾ.. ಹೊಸ ವರ್ಷವನ್ನು ಸ್ವಾಗತಿಸಿದ್ದು ಹೀಗೆ

Published : Jan 01, 2023, 05:10 PM ISTUpdated : Jan 01, 2023, 05:43 PM IST

2022 ಮುಗಿದು2023ರ ಹೊಸ ವರ್ಷ ಆರಂಭವಾಗಿದೆ ಮತ್ತು ಬಾಲಿವುಡ್‌ನ ಸೆಲೆಬ್ರಿಟಿಗಳು ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಈ ಸಮಯದಲ್ಲಿ ಕೆಲವರು ಮುಂಬೈನಲ್ಲಿಯೇ ಪಾರ್ಟಿ ಮಾಡಿದರೆ ಇನ್ನು ಹೆಚ್ಚಿನವರು ಲಂಡನ್‌, ದುಬೈ ಮುಂತಾದ ಸ್ಥಳಗಳಿಗೆ ಹಾರಿದ್ದಾರೆ. ನಿಮ್ಮ ಮೆಚ್ಚಿನ ಸೆಲೆಬ್ರಿಟಿಗಳು 2022 ರ ಅಂತ್ಯವನ್ನು ಹೇಗೆ ಸೆಲೆಬ್ರೆಟ್‌ ಮಾಡಿದ್ದಾರೆ ಇಲ್ಲಿದೆ ನೋಡಿ.

PREV
112
ಮಲೈಕಾ ಅರೋರಾ-ಅರ್ಜನ್ ಕಪೂರ್, ಕರೀನಾ, ಅನುಷ್ಕಾ.. ಹೊಸ ವರ್ಷವನ್ನು ಸ್ವಾಗತಿಸಿದ್ದು ಹೀಗೆ

ಕರೀನಾ ಕಪೂರ್‌  ಪ್ರತಿ ವರ್ಷದಂತೆ, ಈ ಬಾರಿಯೂ ಪತಿ ಸೈಫ್ ಆಲಿ ಖಾನ್‌ ಮತ್ತು ಮಕ್ಕಳೊಂದಿಗೆ  ಸ್ವಿಸ್ ಆಲ್ಪ್ಸ್‌ನಲ್ಲಿದ್ದಾರೆ. ಅವರು  ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಅಲ್ಲಿನ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.  

212

ಬಾಲಿವುಡ್‌ನ ಹಾಟ್‌ ಜೋಡಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಸಹ ವರುಣ್‌ ದವನ್‌ ಜೊತೆ ಇದ್ದಾರೆ. ಇನ್ನು ಕೆಲವು ಸ್ನೇಹಿತರ ಜೊತೆಗೆ ರಾಜಸ್ಥಾನದ  ಅರಣ್ಯವನ್ನು ಎಂಜಾಯ್‌ ಮಾಡುತ್ತಿದ್ದಾರೆ ಈ ಕಪಲ್‌.

312

ಹೊಸ ವರ್ಷಕ್ಕೆ ವರುಣ್‌ ಧವನ್‌ ರಾಜಸ್ಥಾನದಲ್ಲಿರುವಂತೆ ತೋರುತ್ತಿದೆ. ಅವರು ಈ ಹಿಂದೆ ಜಂಗಲ್ ಸಫಾರಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಸ್ನೇಹಿತರ ಜೊತೆಯ ಇಯರ್‌ ಎಂಡಿಗ್‌ ಪಾರ್ಟಿ ಫೋಟೋವನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ  ಶೇರ್‌ ಮಾಡಿದ್ದಾರೆ.
 

412

ಕಾರ್ತಿಕ್ ಆರ್ಯನ್ ಪ್ಯಾರಿಸ್‌ನ ಕಲರ್‌ಫುಲ್‌ ಬೀದಿಯನ್ನು ಆನಂದಿಸುತ್ತಿದ್ದಾರೆ ಮತ್ತು ಅವರ ಸಾಮಾಜಿಕ ಮಾಧ್ಯಮದಲ್ಲಿನ ಫೋಟೋಗಳು ಇದಕ್ಕೆ ಸಾಕ್ಷಿ. ಕಾರ್ತಿಕ್ ಒಂದೆರಡು ದಿನಗಳ ಹಿಂದೆ ಪ್ಯಾರಿಸ್‌ಗೆ ಹಾರಿದರು.  

512

ಸ್ಟಾರ್ ಜೋಡಿ  ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್  ರಾಜಸ್ಥಾನದಲ್ಲಿದೆ. ಈ ಮೊದಲು ಇಬ್ಬರು ತಮ್ಮ ಪ್ರವಾಸದಿಂದ ಕೆಲವು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದರು. ಅದರ ಜೊತೆಗೆ ವಿಕ್ಕಿ ಹೊಸ ವರ್ಷಕ್ಕಾಗಿ ಈ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

612

ಭೂಮಿ ಪಡ್ನೇಕರ್ ಜರ್ಮನಿಯಲ್ಲಿರುವಂತೆ ತೋರುತ್ತಿದೆ. '2022 ರ ಕೊನೆಯ ಕಾಫಿ' ಎಂಬ ಶೀರ್ಷಿಕೆಯೊಂದಿಗೆ ಒಂದು ಕಪ್ ಕಾಫಿಯ ವೀಡಿಯೊವನ್ನು  ಭೂಮಿ Instagram ನಲ್ಲಿ ಹಂಚಿಕೊಂಡಿದ್ದಾರೆ. ಭೂಮಿ ಅವರು ಪೋಸ್ಟ್ ಮಾಡಿದ ಕೆಫೆ ಜರ್ಮನಿಯಲ್ಲಿದೆ. ಕೆಲವು ಗಂಟೆಗಳು ಹಿಂದೆ ಭೂಮಿ ಅಲ್ಲಿನ ಇನ್ನೂ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದಾರೆ.

712

ಹೊಸ ವರ್ಷದ ಸಮಯದಲ್ಲಿ ಅನನ್ಯಾ ಪಾಂಡೆ ಬೀಚ್‌ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ. ನಟಿ ಫುಕೆಟ್‌ನಲ್ಲಿದ್ದಾರೆ ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿನಿರಂತರವಾಗಿ ಫೋಟೋಗಳನ್ನು  ಪೋಸ್ಟ್ ಮಾಡುತ್ತಿದ್ದಾರೆ.
 

812

ಸೋನಾಕ್ಷಿ ಕೂಡ ಹಿಮಭರಿತ ರಜೆಯನ್ನು ಆನಂದಿಸುತ್ತಿದ್ದಾರೆ. 2023ರನ್ನು ಸ್ವಾಗತಿಸಲು ಪ್ರಸ್ತುತ  ಸೋನಾಕ್ಷಿ ಫಿನ್‌ಲ್ಯಾಂಡ್‌ನಲ್ಲಿದ್ದಾರೆ.  

912

ಹೊಸ ವರ್ಷದ ಆಚರಣೆಗಾಗಿ ಹೃತಿಕ್ ರೋಷನ್ ಗರ್ಲ್‌ಫ್ರೆಂಡ್‌ ಸಬಾ ಆಜಾದ್, ತಮ್ಮ ಮಕ್ಕಳು ಮತ್ತು ಸೋದರ ಸಂಬಂಧಿಗಳಾದ ಪಶ್ಮಿನಾ ರೋಷನ್ ಮತ್ತು ಎಶನ್ ರೋಷನ್ ಅವರೊಂದಿಗೆ ಹಿಮದಿಂದ ಆವೃತವಾದ ಫ್ರೆಂಚ್ ಆಲ್ಪ್ಸ್‌ಗೆ ಹಾರಿದ್ದಾರೆ.

1012

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಶನಿವಾರ ತಮ್ಮ ಸ್ನೇಹಿತರಿಗಾಗಿ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಹೊಸ ವರ್ಷದ ಪಾರ್ಟಿಯನ್ನು ಆಯೋಜಿಸಿದ್ದರು.ಇದರಲ್ಲಿ ಆದಿತ್ಯ ರಾಯ್ ಕಪೂರ್, ಅಯಾನ್ ಮುಖರ್ಜಿ, ಶಾಹೀನ್ ಭಟ್, ಲವ್ ರಂಜನ್ ಅವರ ಪತ್ನಿ ಅಲಿಶಾ ವೈದ್ ಮತ್ತು ರೋಹಿತ್ ಧವನ್ ಅವರ ಪತ್ನಿ ಜಾನ್ವಿ ದೇಸಾಯಿ ಅವರೊಂದಿಗೆ ಭಾಗವಹಿಸಿದ್ದರು.

1112

ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಹಾಗೂ ಮಗಳು ವಾಮಿಕಾ ಜೊತೆ ದುಬೈನಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ.  ಹೊಸ ವರ್ಷವನ್ನು ಪ್ರಾರಂಭಿಸಿದ ಅನುಷ್ಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. 

1212

ಸಾರಾ ಅಲಿ ಖಾನ್ ಆಕೆಯ ಸಹೋದರ ಇಬ್ರಾಹಿಂ ಅಲಿ ಖಾನ್ ಲಂಡನ್‌ನ ವಿಂಟರ್‌ ವಂಡರ್‌ಲ್ಯಾಂಡ್‌ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ.  ಸಾರಾ ಮತ್ತು ಇಬ್ರಾಹಿಂ ಸಾಮಾನ್ಯವಾಗಿ ಲಂಡನ್‌ಗೆ ಹೋಗುವುದನ್ನು ಇಷ್ಟಪಡುತ್ತಾರೆ ಮತ್ತು ವಿಶೇಷವಾಗಿ ಹೊಸ ವರ್ಷದ ಸಮಯದಲ್ಲಿ.

Read more Photos on
click me!

Recommended Stories