ರೊಮ್ಯಾಂಟಿಕ್ ಮೂಡ್‌ನಲ್ಲಿ ಮಲೈಕಾ; ಅರ್ಜುನ್ ಕಪೂರ್‌ಗೆ ಕಿಸ್ ಮಾಡಿ 2023 ಸ್ವಾಗತಿಸಿದ ಹಾಟ್ ನಟಿ

First Published | Jan 1, 2023, 4:57 PM IST

ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಹೊಸ ವರ್ಷವನ್ನು ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ 2023 ಸ್ವಾಗತಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಹೊಸ ವರ್ಷವನ್ನು ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ 2023 ಸ್ವಾಗತಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ಅರ್ಜುನ್ ಕಪೂರ್ ಜೊತೆಗಿನ ರೊಮ್ಯಾಂಟಿಕ್ ಹೊಸ ವರ್ಷದ ಫೋಟೋವನ್ನು ಸ್ವತಃ ಮಲೈಕಾ ಅರೋರಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್‌ಗೆ ಕಿಸ್ ಮಾಡುತ್ತಿರುವ ಫೋಟೋ ಹಂಚಿಕೊಂಡು 2023ಗೆ ಹಾಯ್ ಹೇಳಿದ್ದಾರೆ. 
 

Tap to resize

ಅರ್ಜುನ್ ಕಪೂರ್ ಕೆನ್ನೆಗೆ ಮುತ್ತಿಡುತ್ತಿರುವ ಫೋಟೋವನ್ನು ಮಲೈಕಾ ಶೇರ್ ಮಾಡಿ, 'ಹಲೋ 2023..ಪ್ರೀತಿ ಮತ್ತು ಬೆಳಕು' ಎಂದು ಕ್ಯಾಪ್ಷನ್ ನೀಡಿದ್ದಾರೆ. ಇಬ್ಬರ ಫೋಟೋಗೆ ಅಭಿಮಾನಿಗಳು ಲೈಕ್ಸ್ ಒತ್ತಿ ಕಾಮೆಂಟ್ ಮಾಡುತ್ತಿದ್ದಾರೆ. 

ಅಂದಹಾಗೆ ಮಲೈಕಾ ಮತ್ತು ಅರ್ಜುನ್ ಕಪೂರ್ ಪ್ರೀತಿ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಮದುವೆ ಕೂಡ ಆಗ್ತಾರೆ ಎನ್ನುವ ಸುದ್ದಿ ಕಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಇಬ್ಬರೂ ಮದುವೆಗೆ ಹೆಚ್ಚು ಆಸಕ್ತಿ ತೋರಿದ ಹಾಗೆ ಕಾಣಿಸುತ್ತಿಲ್ಲ. ಆದರೆ ಇಬ್ಬರೂ ಸದಾ ಜೊತೆಯಲ್ಲೇ ಇರುತ್ತಾರೆ. ಆಗಾಗ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿರುತ್ತಾರೆ. 

ಅಂದಹಾಗೆ ಮಲೈಕಾ ಮತ್ತು ಅರ್ಜುನ್ ಕಪೂರ್ ಜೊತೆ ಬಾಲಿವುಡ್‌ನ ಮತ್ತೊಂದು ಜೋಡಿ ವರುಣ್ ಧವನ್ ದಂಪತಿ ಕೂಡ ಹೊಸ ವರ್ಷ ಆಚರಿಸಿದ್ದಾರೆ. ಎಲ್ಲರೂ ಒಟ್ಟಿಗೆ 2023 ಸ್ವಾಗತ ಮಾಡಿದ ಫೋಟೋ ಸಹ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಅಂದಹಾಗೆ ಮಲೈಕಾ ಇತ್ತೀಚಿಗಷ್ಟೆ ತನ್ನ ಹೊಸ ರಿಯಾಲಿಟಿ ಶೋ 'ಮೂವಿಂಗ್ ಇನ್ ವಿತ್ ಮಲೈಕಾ'ದಲ್ಲಿ ಅರ್ಜುನ್ ಕಪೂರ್ ಬಗ್ಗೆ ಬಹಿರಂಗ ಪಡಿಸಿದ್ದರು. ನನಗೆ ಭವಿಷ್ಯ ಏನೆಂದು ನನ್ನ ಕೈಯಲ್ಲಿ ಇಲ್ಲ ಎಂದರು ಹೇಳಿದರು. ಎಲ್ಲಾ ವಿಚಾರಗಳ ಬಗ್ಗೆ ಆಗಲೇ ಅರ್ಜುನ್ ಕಪೂರ್ ಜೊತೆ ಮಾತನಾಡಿರುವುದಾಗಿಯೂ ಬಹಿರಂಗ ಪಡಿಸಿದ್ದರು. 
 

ಅರ್ಜುನ್ ಕಪೂರ್ ಬಗ್ಗೆ 'ಅವರು ತುಂಬಾ ಒಳ್ಳೆಯ ಪಾರ್ಟನರ್. ನನ್ನ ಸ್ನೇಹಿತ ಮತ್ತು ವಿಮರ್ಶಕ' ಎಂದು ಮಲೈಕಾ ವಿವರಸಿದರು. ನಾನು ಈಗಾಗಲೇ ಒಮ್ಮೆ ವಿಚ್ಛೇದನ ಪಡೆದಿದ್ದೀನಿ ಅಂತ ನನಗೆ ಅಭದ್ರತೆಯ ಭಯವಿಲ್ಲ. ನಾನು ಅನುಭವಿಸಲು ಬಹಳಷ್ಟು ಇದೆ ಮತ್ತು ನಾನು ಉತ್ತಮ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ಯಾವುದೇ ನಿರ್ಧಾರ ಅಥವಾ ಆಯ್ಕೆ ಮಾಡಿಕೊಂಡರೂ ಅದನ್ನೂ ನಾನು ಪರಿಪೂರ್ಣವಾಗಿ ಮಾಡಿದ್ದೇನೆ ಎಂದು ಹೇಳಿದ್ದರು.

Latest Videos

click me!