ಹಿಂದಿ ಕಿರುತೆರೆ ನಟಿ ಕಮ್ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ವಾರಕ್ಕೊಂದು ವಿಚಿತ್ರ ಡ್ರೆಸ್ ಧರಿಸಿ ಪ್ಯಾಪರಾಜಿಗಳ ಮುಂದೆ ನಿಂತು ಫ್ಯಾಷನ್ ಸ್ಟೇಟ್ಮೆಂಟ್.
ಈಗ ಸೋಷಿಯಲ್ ಮೀಡಿಯಾದಲ್ಲಿ ಉರ್ಫಿ ಹಂಚಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ. ಕಣ್ಣು ಕೆಳಗೆ ಗಾಯ ಅಗಿರುವುದು ಶಾಕಿಂಗ್...
'ನಿನ್ನೆ ನಾನು ಈ ರೀತಿ ಮೇಕಪ್ ಮಾಡಿಸಿಕೊಂಡೆ. ಇದರ ಬಗ್ಗೆ ನನಗೆ ತುಂಬಾನೇ ಹೆಮ್ಮೆ ಇದೆ. ನನಗೆ ಯಾರೂ ಹೊಡೆದಿಲ್ಲ. ಇದು ಕಣ್ಣು ಕೆಳೆಗೆ ಹಾಕಿರು ಫಿಲ್ಟರ್' ಎಂದು ಉರ್ಫಿ ಬರೆದುಕೊಂಡಿದ್ದಾರೆ.
ಅರೆಬತ್ತಲಾಗಿ ಊರೂರು ಓಡಾಡುವ ಉರ್ಫಿಗೆ ಯಾರೋ ಹೊಡೆದಿದ್ದಾರೆ ಎಂದು ಕಾಮೆಂಟ್‌ಗಳು ಹರಿದಾಡುತ್ತಿದೆ. ಆದರೆ ಇದು ಫಿಲ್ಟ್ ಎಂದು ತಿಳಿದ ಮೇಲೆ ಗರಂ ಆಗಿದ್ದಾರೆ.
ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿರುವ ಉರ್ಫಿ ಧರಿಸುವ ವಿಚಿತ್ರ ಉಡುಪುಗಳನ್ನು ತಾವೇ ಡಿಸೈನ್ ಮಾಡಿಕೊಳ್ಳುವುದಂತೆ. ಹೀಗಾಗಿ ನೆಟ್ಟಿಗರ ಕ್ಯೂರಿಯಾಸಿಟಿ ಹೆಚ್ಚಿದೆ.
ಉರ್ಫಿ ವಿರುದ್ಧ ಕೆಲವು ವಕೀಲರು ಎಫ್‌ಐಆರ್ ದಾಖಲು ಮಾಡಿದ್ದರು. ಇದೆಲ್ಲಾ ಸುಳ್ಳು ಜನರಿಗೆ ನನ್ನ ಯಶಸ್ಸು ಇಷ್ಟವಾಗುತ್ತಿಲ್ಲ ಹೀಗಾಗಿ ಸುಳ್ಳು ಸುದ್ದಿ ಮಾಡುತ್ತಿದ್ದಾರೆ ಎಂದಿದ್ದರು.