Happy Birthday Aishwarya Rai; ಮಾಜಿ ವಿಶ್ವ ಸುಂದರಿಯ ಅಪರೂಪದ ಫೋಟೋಗಳು ವೈರಲ್

Published : Nov 01, 2022, 11:41 AM IST

ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಇಂದು (ನವೆಂಬರ 1) ಹುಟ್ಟುಹಬ್ಬದ ಸಂಭ್ರಮ. ಐಶ್ವರ್ಯಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು, ಸಿನಿಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. 

PREV
110
Happy Birthday Aishwarya Rai; ಮಾಜಿ ವಿಶ್ವ ಸುಂದರಿಯ ಅಪರೂಪದ ಫೋಟೋಗಳು ವೈರಲ್

ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಇಂದು (ನವೆಂಬರ 1) ಹುಟ್ಟುಹಬ್ಬದ ಸಂಭ್ರಮ. ಐಶ್ವರ್ಯಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು, ಸಿನಿಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. 

210

49ನೇ ವರ್ಷಕ್ಕೆ ಕಾಲಿಟ್ಟ ನಟಿ ಐಶ್ವರ್ಯಾ ಇಂದಿಗೂ ಅದೇ ಬೇಡಿಕೆ, ಖ್ಯಾತಿ ಉಳಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊಜಲೇ ಜನಪ್ರಿಯತೆ ಪಡೆದಿದ್ದರು. ಸೌಂದರ್ಯ ಸ್ಪರ್ಧೆಯ ಜಗತ್ತನ್ನು ಆಳಿದ ನಟಿ ಐಶ್ವರ್ಯಾ. ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಐಶ್ವರ್ಯಾ ರೈ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 

310

1997ರಲ್ಲಿ ಐಶ್ವರ್ಯಾ ರೈ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ತಮಿಳು ಸಿನಿಮಾರಂಗದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಐಶ್ವರ್ಯಾ ಸಿನಿಮಾರಂಗದಲ್ಲೂ ಉತ್ತುಂಗಕ್ಕೆ ಏರಿದರು.  

410

ಭಾರತದ ಅತ್ಯಂತ ಯಶಸ್ವಿ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ಐಶ್ವರ್ಯಾ ರೈ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವದ ಅತ್ಯಂತ ಸುಂದರ ಮಹಿಳೆಯ ಹುಟ್ಟುಹಬ್ಬದ ಈ ಸಮಯದಲ್ಲಿ ಅವರ ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

510

ಐಶ್ವರ್ಯಾ ಅವರ ಹಳೆಯ ಪೋಟೋಗಳನ್ನು ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಐಶ್ವರ್ಯಾ ರೈ ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. 

610

ಸೌಂದರ್ಯ ಸ್ಪರ್ಧಿಯಲ್ಲಿ ಭಾಗಿಯಾಗುವ ಮೊದಲೇ ಅನೇಕ ಜಾಹೀರಾತುಗಳಲ್ಲಿ ಮಿಂಚಿದ್ದರು. 1994ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸುಶ್ಮಿತಾ ಸೇನ್ ಗೆದ್ದು ಬೀಗಿದ್ದರು. ಆದರೆ ಐಶ್ವರ್ಯಾ ರೈ ಮೊದಲ ರನ್ನರ್ ಅಪ್ ಆಗಿದ್ದರು. 

710

1994ರಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ಐಶ್ವರ್ಯಾ ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಬಳಿಕ ಅನೇಕ ಸಿನಿಮಾ ಆಫರ್‌ಗಳು ಬರಲಾರಂಭಿಸಿತು. 

810

1997ರಲ್ಲಿ ತಮಿಳಿನ ಇರುವರ್‌ನೊಂದಿಗೆ ಸಿನಿಮಾರಂಗಕ್ಕೆ ಜಿಗಿದರು. ಮಣಿರತ್ನಮ ನಿರ್ದೇಶನದ ಈ ಸಿನಿಮಾದಲ್ಲಿ ಐಶ್ವರ್ಯಾ ತೆರೆಮೇಲೆ ಮೊದಲ ಬಾರಿಗೆ ಮಿಂಚಿದರು. ಬಳಿಕ ಬಾಲಿವುಡ್‌ಗೆ ಹಾರಿದ ಐಶ್ವರ್ಯಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 

910

ಇದೀಗ ಐಶ್ವರ್ಯಾ ಅವರ ಹಳೆಯ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಐಶ್ವರ್ಯಾ ಸದ್ಯ ಬಚ್ಚನ್ ಕುಟುಂಬದ ಸೊಸೆ, ಅಭಿಷೇಕ್ ಬಚ್ಚನ್ ಪತ್ನಿ. ಆರಾಧ್ಯ ಎನ್ನುವ ಮಗಳಿದ್ದಾಳೆ. ಮದುವೆ, ಮಗು ಬಳಿಕ ಐಶ್ವರ್ಯಾ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

1010

ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ತನ್ನ ಮೊದಲ ನಿರ್ದೇಶಕ ಮಣಿರತ್ನಂ ಅವರ ಸಿನಿಮಾ ಮೂಲಕ ಮತ್ತೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ಮಿಂಚಿದ್ದಾರೆ. ದ್ವಿಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. 

Read more Photos on
click me!

Recommended Stories