3 ವರ್ಷದ ಬಳಿಕ ಮುಂಬೈಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ; ತವರಿಗೆ ಮರಳಿದ ಸಂತಸದ ಕ್ಷಣ ಹೀಗಿತ್ತು

Published : Nov 01, 2022, 10:44 AM IST

ಪ್ರಿಯಾಂಕಾ ಮುಂಬೈ ಏರ್ಪೋರ್ಟ್‌ಗೆ ಬಂದಿಳಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 3 ವರ್ಷಗಳ ಬಳಿಕ ತನ್ನ ಮನೆಗೆ ಬಂದ ಪ್ರಿಯಾಂಕಾ ಫುಲ್ ಖುಷ್ ಆಗಿದ್ದರು.

PREV
18
3 ವರ್ಷದ ಬಳಿಕ ಮುಂಬೈಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ; ತವರಿಗೆ ಮರಳಿದ ಸಂತಸದ ಕ್ಷಣ ಹೀಗಿತ್ತು

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪತಿ ನಿಕ್ ಜೋನಸ್ ಜೊತೆ ವಿದೇಶದಲ್ಲೇ ನೆಲೆಸಿರುವ ಪ್ರಿಯಾಂಕಾ ಭಾರತಕ್ಕೆ ಬರದೆ 3 ವರ್ಷಗಳಾಗಿತ್ತು. ಕೊರೊನಾ ಬಳಿಕ ಗ್ಲೋಬಲ್ ಸ್ಟಾರ್ ತನ್ನ ತವರಿನ ಕಡೆ ಮುಖ ಮಾಡಿರಲಿಲ್ಲ. ಆದರೀಗ 3 ವರ್ಷಗಳ ಬಳಿಕ ಪಿಗ್ಗಿ ಭಾರತಕ್ಕೆ ಮರಳಿದ್ದಾರೆ.

28

ತನ್ನ ತವರಿಗೆ ಮರಳುತ್ತಿರುವ ವಿಚಾರವನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಪ್ರಿಯಾಂಕಾ ಎಂಟ್ರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ನೆಚ್ಚಿನ ನಟಿಯನ್ನು ಮುಂಬೈ ನೋಡಿ ಫುಲ್ ಖುಷ್ ಆಗಿದ್ದಾರೆ. 

38

ಪ್ರಿಯಾಂಕಾ ಮುಂಬೈ ಏರ್ಪೋರ್ಟ್‌ಗೆ ಬಂದಿಳಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 3 ವರ್ಷಗಳ ಬಳಿಕ ತನ್ನ ಮನೆಗೆ ಬಂದ ಪ್ರಿಯಾಂಕಾ ಫುಲ್ ಖುಷ್ ಆಗಿದ್ದರು. ಪಾಪರಾಜಿಗಳ ಕಡೆ ಕೈ ಮಾಡುತ್ತಾ ಕಾರು ಹತ್ತಿ ಹೊರಟರು. 

48

ಮುಂಬೈಗೆ ಎಂಟ್ರಿ ಕೊಡುತ್ತಿದ್ದಂತೆ ಪ್ರಿಯಾಂಕಾ ವಿಮಾನದಲ್ಲೇ ಕುಳಿತು ಮುಂಬೈ ನಗರದ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ್ದರು. ಬಳಿಕ ತನ್ನ ಮನೆಗೆ ಹೊಗುವ ದಾರಿಯ ವಿಡಿಯೋವನ್ನು ಹೊಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ವಿಶೇಷ ಎಂದರೆ ಪ್ರಿಯಾಂಕಾ ಮನೆಗೆ ಬರುತ್ತಿದ್ದಂತೆ ಕಾಫಿ ವಿತ್ ಕರಣ್ ಶೋ ವೀಕ್ಷಿಸಿದ್ದಾರೆ. 
 

58

ಪ್ರಿಯಾಂಕಾ ಚೋಪ್ರಾ ನೀಲಿ ಬಣ್ಣದ ಡ್ರೆಸ್ ಮತ್ತು ವೈಟ್ ಶೋ ಧರಿಸಿದ್ದರು. ಏರ್ಪೋರ್ಟ್ ನಿಂದ ಹೊರಬರುತ್ತಿದ್ದಂತೆ ಕ್ಯಾಮರಾಗೆ ನಗು ಬೀರುತ್ತಾ ಬಂದ ಪ್ರಿಯಾಂಕಾ ಅಭಿಮಾನಿಗಳಿಗೆ ಹಾಯ್ ಹೇಳಿದರು. ಪ್ರಿಯಾಂಕಾ ನೋಡಲು ಅಭಿಮಾನಿಗಳು ಮುಗಿಬಿದ್ದರು. ಅನೇಕ ವರ್ಷಗಳ ಬಳಿಕ ಮುಂಬೈನೆಲದಲ್ಲಿ ಪ್ರಿಯಾಂಕಾರನ್ನು ನೋಡಿ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತ್ತು.

68

ಅಂದಹಾಗೆ ಪ್ರಿಯಾಂಕಾ ಒಬ್ಬರೆ ಭಾರತಕ್ಕೆ ಬಂದಿದ್ದಾರೆ. ಪತಿ ನಿಕ್ ಜೋನಸ್ ಕಾಣಿಸಿಕೊಂಡಿಲ್ಲ. ಅಲ್ಲದೇ ಮಗಳು ಕೂಡ ಕಾಣಿಸಿಲ್ಲ. ಮಗಳನ್ನು ಕರೆದುಕೊಂಡು ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಪ್ರಿಯಾಂಕಾ ಒಬ್ಬರೆ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. 

78

ನಟಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಈ ವರ್ಷದ ಪ್ರಾರಂಭದಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಸ್ವಾಗತಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ನಾಮಕರಣ ಮಾಡಿದ್ದಾರೆ. 

88
priyanka

ಸದ್ಯ ಪ್ರಿಯಾಂಕಾ ಸಿನಿಮಾಗಳ ಜೊತೆಗೆ ಮಗಳ ಆರೈಕೆಯಲ್ಲೂ ನಿರತರಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನೇಕ ಪ್ರಾಜೇಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಟ್ಸ್ ಆಲ್ ಕಮ್ಮಿಂಗ್ ಬ್ಯಾಕ್ ಟು ಮಿ, ಸಿಟಾಡೆಲ್ ಸಿನಿಮಾಗಳನ್ನು ಮುಗಿಸಿದ್ದಾರೆ. 

Read more Photos on
click me!

Recommended Stories