Ileana D'Cruz ಬ್ಯಾಕ್ ದಪ್ಪ ಸೊಂಟ ಸಣ್ಣ; ನೆಗೆಟಿವ್ ಕಾಮೆಂಟ್ ಮಾಡ್ರಿ ಉತ್ತರ ಕೊಡ್ತೀನಿ ಎಂದೇಳಿದ ನಟಿ

Published : Nov 01, 2022, 11:25 AM IST

36ರ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ನಟಿ  ಇಲಿಯಾನಾ ಡಿ ಕ್ರೂಸ್. ಪಾಸಿಟಿವ್‌ಗಿಂತ ನೆಗೆಟಿವ್ ಕಾಮೆಂಟ್ಸ್‌ ಹೆಚ್ಚಿಗೆ ಪಡೆದಿರುವ ಸುಂದರಿ...........

PREV
19
Ileana D'Cruz ಬ್ಯಾಕ್ ದಪ್ಪ ಸೊಂಟ ಸಣ್ಣ; ನೆಗೆಟಿವ್ ಕಾಮೆಂಟ್ ಮಾಡ್ರಿ ಉತ್ತರ ಕೊಡ್ತೀನಿ ಎಂದೇಳಿದ ನಟಿ

ತೆಲುಗು, ತಮಿಳು ಮತ್ತು ಹಿಂದಿ ಸಿನಿ ರಂಗದಲ್ಲಿ ಸಖತ್ ಬ್ಯುಸಿಯಾಗಿರುವ ಇಲಿಯಾನಾ ಡಿ ಕ್ರೂಸ್‌ ಇಂದು 36 ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ನೇಹಿತರು ಮತ್ತು ಅಭಿಮಾನಿಗಳಿಂದ ಮೆಸೇಜ್ ಹರಿದು ಬರುತ್ತಿದೆ. 

29

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಇಲಿಯಾನಾ ಪೋಸ್ಟ್‌ ಮಾಡುವುದು ಹಾಟ್ ಫೋಟೋಗಳು. ನಟಿಯನ್ನು ಪದೇ ಪದೇ ಬಿಕಿನಿಯಲ್ಲಿ ನೋಡಿ ನೆಟ್ಟಿಗರು ಪಾಸಿಟಿವ್‌ಗಿಂತ ನೆಗೆಟಿವ್ ಅಗಿ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.

39

ನಿಮ್ಮ ಬ್ಯಾಕ್ ತುಂಬಾನೇ ದಪ್ಪ, ಸೊಂಟ ಚಿಕ್ಕ, ನೀವು ಕಪ್ಪು ಹೀಗೆ ಬಾಡಿ ಶೇಮಿಂಗ್ ಮಾಡುವುದೇ ಹೆಚ್ಚಾಗಿದೆ. ಅದು ಸಣ್ಣ ಇದು ದಪ್ಪ ಎಂದು ಕಾಮೆಂಟ್ ಮಾಡುವರಿಗೆ ಅಲ್ಲಿಂದ ಅಲ್ಲೇ ಉತ್ತರ ಕೊಟ್ಟು ಕಳುಹಿಸುತ್ತಾರೆ, ಹೋಗಾಗಿ ಬೋಲ್ಡ್‌ ನಟಿ ಅನ್ನೋ ಪಟ್ಟ ಕೂಡ ಪಡೆದುಕೊಂಡಿದ್ದಾರೆ.

49

ಸ್ಲಿಂ ಫಿಗರ್ ಆಗಿದ್ದ ಇಲಿಯಾನಾ ಇದ್ದಕ್ಕಿದಂತೆ ದಪ್ಪ ಆಗಿರುವುದಕ್ಕೆ ಸಿನಿಮಾ ಆಫರ್‌ಗಳನ್ನು ರಿಜೆಕ್ಟ್‌ ಮಾಡುತ್ತಿದ್ದಾರೆ ಎಂದು ಚಿತ್ರರಂಗದಲ್ಲಿ ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಹೌದು! ಇಲಿಯಾನಾ ಸ್ವಲ್ಪ ದಪ್ಪ ಆಗಿದ್ದಾರೆ ಆದರೆ ದಪ್ಪಗಾಗಿರುವ ಕಾರಣಕ್ಕೆ ಸಿನಿಮಾ ಆಫರ್‌ ರಿಜೆಕ್ಟ್‌ ಮಾಡುತ್ತಿಲ್ಲ.

59

 'ನಾನು ಫಿಟ್ನೆಸ್ ಕಡೆ ಗಮನ ಕೊಡಬೇಕಿದೆ. ಹೆಚ್ಚಾಗಿ ನಾಯಕಿಯ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.ದಪ್ಪ ಇರುವೆ ಅಥವಾ ಸುಮ್ಮನೆ ಇರುವೆ ಎಂದು ನೆಗೆಟಿವ್ ಕತೆ ಒಪ್ಪಿಕೊಳ್ಳುವುದಿಲ್ಲ. ನಾನು ಶೀಘ್ರದಲ್ಲಿ ಕಮ್‌ಬ್ಯಾಕ್ ಮಾಡುವೆ' ಎಂದು ಹೇಳಿದ್ದಾರೆ.
 

69

ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ನಿಂದಾಗಿ ನಿನ್ನೆ ಮೊನ್ನೆಯವರೆಗೆ ಸುದ್ದಿಯಲ್ಲಿದ್ದ ಬಹುಭಾಷಾ ನಟಿ ಇಲಿಯಾನಾ ಡಿಸೋಜಾ ಇದೀಗ ತಮಗಿರುವ ಕಾಯಿಲೆಯನ್ನು ಬಹಿರಂಗಪಡಿಸಿ ಶಾಕ್ ನೀಡಿದ್ದಾರೆ. ನನಗೆ ನಿದ್ದೆಯಲ್ಲಿ ನಡೆಯುವ ಕಾಯಿಲೆ ಇದೆ. ಬೆಳಿಗ್ಗೆ ಎದ್ದು ನೋಡುವಾಗ ಕಾಲಿನ ಮೇಲೆಲ್ಲಾ ಗಾಯಗಳಾಗಿರುತ್ತವೆ ಎಂದಿದ್ದಾರೆ. 

79

33 ವರ್ಷದ ನಟಿ ಆಗಸ್ಟ್ 20, 2017 ರಂದು ಟ್ವಿಟರ್‌ನಲ್ಲಿ ಪಬ್ಲಿಕ್ ಫಿಗರ್ ಎಂಬ ಕಾರಣಕ್ಕೆ ಯಾವುದೇ ಪುರುಷನಿಗೆ ಕೆಟ್ಟದಾಗಿ ವರ್ತಿಸುವ ಹಕ್ಕನ್ನು ನೀಡಿರುವುದಿಲ್ಲ. ಅಂಥ ನಡವಳಿಕೆಯನ್ನು 'ಫ್ಯಾನ್ ಆಂಟಿಕ್ಸ್' ಎಂದು ಕನ್‌ಫ್ಯೂಸ್‌ ಮಾಡಬಾರದು ಎಂಬುದನ್ನು ಹೇಳಿಕೊಂಡಿದ್ದರು.

89

'ಇದು ನಾವು ವಾಸಿಸುವ ಸುಂದರವಾದ ಜಗತ್ತು. ನನಗೆ ನನ್ನದೇ ಆದ ಬದುಕಿದೆ. ಪ್ರೈವೇಸಿಯ ಅಗತ್ಯವಿದೆ. ಅದನ್ನು ಅಭಿಮಾನಿಗಳು ತಪ್ಪಾಗಿ ಅರ್ಥೈಸಿಕೊಳ್ಳಬಾರದು,ಅವರು ಕಿಟಕಿಯನ್ನು ಬಡಿಯುತ್ತಿದ್ದರು. ಕಾರಿನ ಮೇಲೆ ಬೀಳುತ್ತಿದ್ದರು, ಅವರಲ್ಲಿ ಒಬ್ಬರು ಬಾನೆಟ್‌ನ ಮೇಲ್ಭಾಗದಲ್ಲಿ ಮಲಗಿ ನಗುತ್ತಿದ್ದರು'

99

ನಾನು ಚಿಕ್ಕವಳಿದ್ದಾಗ ನಾನು ಈವ್-ಟೀಸ್‌ ಅನುಭವಿಸಿದ್ದೇನೆ, ಆದರೆ ಈ ವಯಸ್ಸಿನಲ್ಲಿ ಹುಡುಗರು ಈ ಮಟ್ಟಕ್ಕೆ ಕೆಟ್ಟದಾಗಿ ವರ್ತಿಸುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಎಂದು ಅವರ ಜೀವನದಲ್ಲಿ ನೆಡೆದ ಅಹಿತಕಾರಿ ಸನ್ನಿವೇಶದ ಅನುಭವ ನಟಿ ಹಚ್ಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories