4ನೇ ಮದುವೆಗೆ ರೆಡಿಯಾದ 43ರ ಬಿಗ್‌ಬಾಸ್‌ ಖ್ಯಾತಿಯ ನಟಿ: ಬಿಕಿನಿ ತೊಟ್ಟು ಮಂಡಯೂರಿ ಪ್ರಪೋಸ್

First Published | Oct 1, 2024, 3:37 PM IST

ಈಗಾಗಲೇ ಮೂರು ಮದುವೆಗಳಾಗಿರುವ ವನಿತಾ ವಿಜಯಕುಮಾರ್, ಬೀಚ್ ನಲ್ಲಿ ಬಿಕಿನಿ ತೊಟ್ಟು ಪ್ರಸಿದ್ಧ ವ್ಯಕ್ತಿಯೊಬ್ಬರಿಗೆ ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದ್ದು, 4 ನೇ ಮದುವೆಗೆ ಸಿದ್ಧರಾಗಿದ್ದಾರಾ ಎಂಬ ಅನುಮಾನ ಮೂಡಿದೆ.
 

ಮಂಜುಳಾ ಮತ್ತು ವಿಜಯಕುಮಾರ್ ಪುತ್ರಿ ವನಿತಾ

ಹಿರಿಯ ನಟ ವಿಜಯಕುಮಾರ್ ಮತ್ತು ಅವರ ಎರಡನೇ ಪತ್ನಿ ನಟಿ ಮಂಜುಳಾ ಅವರ ಹಿರಿಯ ಪುತ್ರಿ ವನಿತಾ ವಿಜಯಕುಮಾರ್. ತಮ್ಮ 15 ನೇ ವಯಸ್ಸಿನಲ್ಲಿಯೇ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದರು. ಆ ಸಾಲಿನಲ್ಲಿ ನಟ ವಿಜಯ್ ಜೊತೆಗೆ ವನಿತಾ ವಿಜಯಕುಮಾರ್ 1995 ರಲ್ಲಿ ನಟಿಸಿದ್ದ 'ಚಂದ್ರಲೇಖಾ' ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದು ಸೋಲು ಕಂಡಿತು. ಇದಾದ ಬಳಿಕ  'ಮಾಣಿಕ್ಯಂ' ಚಿತ್ರದಲ್ಲಿ ನಟಿಸಿದ ವನಿತಾ ವಿಜಯಕುಮಾರ್, ತೆಲುಗು ಮತ್ತು ಮಲಯಾಳಂನಲ್ಲಿ ತಲಾ ಒಂದು ಚಿತ್ರದಲ್ಲಿ ಮಾತ್ರ ನಟಿಸಿದ್ದಾರೆ.

ವನಿತಾ ವಿಜಯಕುಮಾರ್ ಜೀವನ

ಮೊದಲ ಪತಿಗೆ ವಿಚ್ಛೇದನ ನೀಡಿದ ಕೆಲವೇ ತಿಂಗಳಲ್ಲಿ ಆನಂದ್ ಜಯರಾಜನ್ ಎಂಬವರನ್ನು ಎರಡನೇ ಮದುವೆಯಾದರು ವನಿತಾ ವಿಜಯಕುಮಾರ್. ಎರಡನೇ ಪತಿಯ ಮೂಲಕ ಜಯನಿತಾ ಎಂಬ ಮಗಳು ವನಿತಾಗೆ ಜನಿಸಿದಳು. ಬಳಿಕ 2012 ರಲ್ಲಿ ಅವರಿಂದಲೂ ವಿಚ್ಛೇದನ ಪಡೆದರು. ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿ.. ಅವರೇ ನಿರ್ಮಾಪಕರಾಗಿ ಕಣಕ್ಕಿಳಿದು ಮತ್ತೆ ಕಮ್ ಬ್ಯಾಕ್ ಕೊಟ್ಟ ಚಿತ್ರ 'ಎಂಜಿಆರ್, ಶಿವಾಜಿ, ರಜನಿ, ಕಮಲ್'. ಈ ಚಿತ್ರವನ್ನು ನೃತ್ಯ ನಿರ್ದೇಶಕ ರಾಬರ್ಟ್ ಮಾಸ್ಟರ್ ನಿರ್ಮಿಸಿ ನಾಯಕನಾಗಿಯೂ ನಟಿಸಿದ್ದರು. ರಾಬರ್ಟ್‌ಗೆ ಜೋಡಿಯಾಗಿ ವನಿತಾ ನಟಿಸಿದ್ದರು.

Tap to resize

ವನಿತಾ ವಿಜಯಕುಮಾರ್

ಈ ಪ್ರೇಮ ವಿವಾದ ವನಿತಾ ಅವರ ಜೀವನದಲ್ಲಿ ಅಂತ್ಯಗೊಂಡ ನಂತರ, ನಿಜ ಜೀವನದಲ್ಲಿ.. ಅವರ ಕುಟುಂಬದಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆಸ್ತಿ ವಿಚಾರವಾಗಿ ನಡೆದ ಗಲಾಟೆ ವನಿತಾ ವಿಜಯಕುಮಾರ್ ಅವರನ್ನು ಕುಟುಂಬದಿಂದ ಸಂಪೂರ್ಣವಾಗಿ ದೂರ ಮಾಡಿತು. ಒಂದು ಹಂತದಲ್ಲಿ ಆರ್ಥಿಕವಾಗಿ ಹಲವು ಕಷ್ಟಗಳನ್ನು ಅನುಭವಿಸುತ್ತಿದ್ದ ವನಿತಾ ವಿಜಯಕುಮಾರ್ ಅವರಿಗೆ ಮತ್ತೆ ಬೆಳ್ಳಿತೆರೆಗೆ ಮರಳಲು ಅವಕಾಶ ಮಾಡಿಕೊಟ್ಟಿದ್ದು, ಬಿಗ್ ಬಾಸ್ ಕಾರ್ಯಕ್ರಮ.

ವನಿತಾ ಮದುವೆಗಳು

ಈ ಚಾನೆಲ್ ಸಂಬಂಧ ಪೀಟರ್ ಪಾಲ್ ಎಂಬುವವರೊಂದಿಗೆ ಸ್ನೇಹ ಬೆಳೆಸಿದ್ದು, ಇಬ್ಬರ ನಡುವೆ ಮೂಡಿದ ಪ್ರೇಮ 2020 ರಲ್ಲಿ ಮದುವೆಯಲ್ಲಿ ಕೊನೆಗೊಂಡಿತು. ಕ್ರಿಶ್ಚಿಯನ್ ಸಂಪ್ರದಾಯದಂತೆ ಮನೆಯಲ್ಲೇ ನಡೆದ ಈ ಮದುವೆ ಸರಿಯಾಗಿ ನೋಂದಣಿಯಾಗಲಿಲ್ಲ. ಇನ್ನು ಪೀಟರ್ ಪಾಲ್ ಅವರ ಕುಡಿತದ ಚಟದಿಂದಾಗಿ ಮೂರೇ ತಿಂಗಳಲ್ಲಿ ವನಿತಾ ವಿಜಯಕುಮಾರ್ ಅವರಿಂದ ದೂರವಾದರು. ಇದಾದ ಬಳಿಕ ತಮ್ಮ ಸಿನಿಮಾ ಜೀವನದತ್ತಲೇ ಗಮನ ಹರಿಸಿರುವ ವನಿತಾ, ಸತತವಾಗಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನಟನೆಯ 'ಅಂಧಗನ್' ಚಿತ್ರದಲ್ಲಿಯೂ ಅವರ ಅಭಿನಯ ಮೆಚ್ಚುಗೆ ಗಳಿಸಿತು.

ರಾಬರ್ಟ್ ಮಾಸ್ಟರ್ ಗೆ ವನಿತಾ ಪ್ರಪೋಸ್

ವಿವಾದಗಳಿಗೆ ಹೆಸರಾಗಿರುವ ವನಿತಾ ವಿಜಯಕುಮಾರ್, ಈಗ ನಾಲ್ಕನೇ ಮದುವೆಗೆ ಸಿದ್ಧರಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಅದೇನೆಂದರೆ 'ಎಂಜಿಆರ್ ಶಿವಾಜಿ ರಜನಿ ಕಮಲ್' ಚಿತ್ರದಲ್ಲಿ ನಟಿಸುವಾಗ ತಮ್ಮೊಂದಿಗೆ ಪ್ರೇಮ ಸುದ್ದಿಯಲ್ಲಿ ಸಿಲುಕಿಕೊಂಡಿದ್ದ ಬಿಗ್ ಬಾಸ್ ಸೆಲೆಬ್ರಿಟಿ ರಾಬರ್ಟ್ ಮಾಸ್ಟರ್‌ಗೆ.. ಬೀಚ್‌ನಲ್ಲಿ, ಬಿಕಿನಿ ತೊಟ್ಟು ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಇದೇ ವೇಳೆ ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 5 ರಂದು ಮಹತ್ವದ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ.

Latest Videos

click me!