ಸೆಕೆಂಡ್‌ ಹ್ಯಾಂಡ್‌ ಗಂಡನನ್ನ ಮದ್ವೆಯಾಗಿದ್ದ ಖ್ಯಾತ ನಟಿ, ಇದೀಗ ವಿದೇಶಿಗನ ಮಗುವಿನ ತಾಯಿ

First Published | Oct 1, 2024, 3:11 PM IST

ಚಿತ್ರರಂಗದಲ್ಲಿ ಪ್ರೀತಿ, ಪ್ರೇಮ, ಪ್ರಣಯ ಎಂಬುವುದು ಸಾಮಾನ್ಯ ವಿಷಯ. ಆದ್ರೆ ಹಲವರ ಪ್ರೀತಿ ದೀರ್ಘಕಾಲದವರೆಗೆ ಉಳಿಯಲ್ಲ. ಕರೀನಾ-ಸೈಫ್, ಅದಿತಿ-ಸಿದ್ಧಾರ್ಥ್, ಸೋನಾಕ್ಷಿ-ಜಹೀರ್ ಸದ್ಯ ಟ್ರೆಂಡಿಂಗ್ ಜೋಡಿಗಳಾಗಿವೆ.

40 ವರ್ಷದ ಈ ನಟಿ 2009ರಲ್ಲಿ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಸಿನಿಮಾದ ನಿರ್ದೇಶಕನಿಗೆ ತಮ್ಮ ಪ್ರೀತಿಯ ಹೃದಯವನ್ನು ನೀಡಿದ್ದರು. ಸಿನಿ ಜೀವನದ ಆರಂಭದಲ್ಲಿಯೇ ಪ್ರೀತಿಯಲ್ಲಿ ಸಿಲುಕಿ ಅದೇ ನಿರ್ದೇಶಕನ ಜೊತೆ ಮದುವೆಯಾದರು.

ನಾವು ಹೇಳುತ್ತಿರೊದು ನಟಿ ಕಲ್ಕಿ ಕೊಚ್ಲಿನ್ ಬಗ್ಗೆ. 2009ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ 'ದೇವ್ ಡಿ' ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದ್ದರು. ಎರಡು ವರ್ಷ ಅನುರಾಗ್ ಕಶ್ಯಪ್ ಜೊತೆ ಸುತ್ತಾಡಿ ಮದುವೆಯಾದರು. ಅನುರಾಗ್ ಕಶ್ಯಪ್‌ಗೆ ಇದು ಎರಡನೇ ಮದುವೆಯಾಗಿದ್ದು, ಕಲ್ಕಿಗಿಂತ 12 ವರ್ಷ ದೊಡ್ಡವರು. 

Tap to resize

2011ರಲ್ಲಿ ಅನುರಾಗ್ ಮತ್ತು ಕಲ್ಕಿ ಮದುವೆ ನಡೆದಿತ್ತು. ಮದುವೆಗೆ ಕೇವಲ ಅತ್ಯಾಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಎಂದಿಗೂ ಅನುರಾಗ್ ಕಶ್ಯಪ್ ಮತ್ತು ಕಲ್ಕಿ ತಮ್ಮ ಪ್ರೀತಿಯನ್ನು ಮರೆ ಮಾಡಿರಲಿಲ್ಲ. ಆದ್ರೆ 2015ರಲ್ಲಿ ಪರಸ್ಪರ ಒಪ್ಪಿಗೆ ಮೇರೆ ಡಿವೋರ್ಸ್ ಪಡೆದು ಪ್ರತ್ಯೇಕವಾದರು. ಅನುರಾಗ್ ಕಶ್ಯಪ್ 1997ರಲ್ಲಿ ಆರತಿ ಬಜಾಜ್ ಎಂಬವರನ್ನು ಮೊದಲು ಮದುವೆಯಾಗಿದ್ದರು.

ಅನುರಾಗ್ ಕಶ್ಯಪ್ ಅವರಿಂದ ದೂರವಾದ ಬಳಿಕ ಕಲ್ಕಿ ಹೃದಯದಲ್ಲಿ ಮತ್ತೊಮ್ಮೆ ಪ್ರೇಮದ ಹೂ ಅರಳಿದೆ. ಜೆರುಸೆಲಂನಲ್ಲಿರುವ ಹರ್ಷ್‌ಬರ್ಗ್ ಜೊತೆ ಕಲ್ಕಿಗೆ ಪ್ರೇಮಾಂಕುರವಾಗಿದ್ದು, ಜೋಡಿ ಲಾಂಗ್ ರಿಲೇಶನ್‌ಶಿಪ್‌ನಲ್ಲಿದೆ.

ಕಲ್ಕಿಗಾಗಿ ಭಾರತಕ್ಕೆ ಬಂದ ಹರ್ಷ್‌ಬರ್ಗ್‌ ಸದ್ಯ ಗೋವಾದಲ್ಲಿ ನೆಲೆಸಿದ್ದಾರೆ. ದಂಪತಿ 2021ರಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡರು. ಸದ್ಯ ಹರ್ಷ್‌ಬರ್ಗ್ ಮತ್ತು ಕಲ್ಕಿ ಗೋವಾದಲ್ಲಿ ವಾಸಿಸುತ್ತಿದ್ದಾರೆ. ಕಲ್ಕಿ ಕೊನೆಯ ಬಾರಿ 'ಕೋ ಗಯೆ ಹಮ್ ಕಹಾಂ' ಸಿನಿಮಾದಲ್ಲಿ ನಟಿಸಿದ್ದರು. ವೆಬ್ ಸಿರೀಸ್‌ ಗಳಲ್ಲಿಯೂ ಕಲ್ಕಿ ನಟಿಸಿದ್ದಾರೆ.

Latest Videos

click me!