ಭಾನುವಾರ ಕಪೂರ್ ಮತ್ತು ಭಟ್ ಕುಟುಂಬಗಳಿಗೆ ಸಂಭ್ರಮದ ದಿನವಾಗಿದೆ. ನಟರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಆಲಿಯಾ ಈ ವಿಷಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರ ಜೊತೆ ಶೇರ್ ಮಾಡಿದ್ದಾರೆ.
ಹೇಳಿಕೆಯಲ್ಲಿ ಯಾವುದೇ ಹೆಸರನ್ನು ಉಲ್ಲೇಖಿಸಲಾಗಿಲ್ಲವಾದ್ದರಿಂದ, ದಂಪತಿಗಳು ತಮ್ಮ ಪುಟ್ಟ ರಾಜಕುಮಾರಿಗಾಗಿ ಹೆಸರು ಆರಿಸಿಕೊಂಡಿದ್ದಾರೆಯೇ ಎಂಬುದು ಇನ್ನೂ ತಿಳಿದಿಲ್ಲ. ದಂಪತಿಗಳು ತಮ್ಮ ಪುಟ್ಟ ಮಗುವಿನ ಹೆಸರನ್ನು ಯಾವಾಗ ಅಧಿಕೃತವಾಗಿ ಘೋಷಿಸುತ್ತಾರೆ ಎಂಬುದು ತಿಳಿದಿಲ್ಲ.
ಆದರೆ ಆಲಿಯಾ ಭಟ್ ಒಮ್ಮೆ ರಿಯಾಲಿಟಿ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು ತಮ್ಮ ಮಗಳಿಗೆ ಇಡಲು ಬಯಸುವ ಹೆಸರನ್ನು ಚರ್ಚಿಸಿದರು. ಹಾಗಾದರೆ ಆಲಿಯಾ ಭಟ್ ಅವರ ಮಗಳ ಹೆಸರೇನು?
ಆ ಶೋನಲ್ಲಿ ಒಬ್ಬ ಚಿಕ್ಕ ಹುಡುಗ ಆಲಿಯಾರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದರು. ಆದರೆ ಅದನ್ನು ಕೇಳಿದ ಆಲಿಯಾ ಭಟ್ ತುಂಬಾ ಆಶ್ಚರ್ಯಚಕಿತರಾದರು ಮತ್ತು ಅವರು ತಮ್ಮ ಮಗುವಿಗೆ ಅದರ ಹೆಸರನ್ನು ಇಡಲು ಬಯಸುತ್ತಾರೆ ಎಂದು ತಮಾಷೆಯಾಗಿ ಒಪ್ಪಿಕೊಂಡರು.
ನೆಟ್‌ನಲ್ಲಿ ಲಭ್ಯವಿರುವ ಕ್ಲಿಪ್‌ನಲ್ಲಿ, ಹುಡುಗ ಆಲಿಯಾರ ಹೆಸರನ್ನು 'ಅಲ್ಮಾ' ಎಂದು ಉಚ್ಚರಿಸುತ್ತಿರುವುದನ್ನು ಕಾಣಬಹುದು. ಮಗುವಿನ ಮುಗ್ಧ ತಪ್ಪನ್ನು ನೋಡಿ ನಗುತ್ತಾ, 'ಅಲ್ಮಾ ಎಂಬುದು ಸುಂದರವಾದ ಹೆಸರು. ನಾನು ನನ್ನ ಮಗಳಿಗೆ ಅಲ್ಮಾ ಎಂದು ಹೆಸರಿಸುತ್ತೇನೆ' ಎಂದು ಆಲಿಯಾ ಹೇಳುತ್ತಾರೆ.
ಭಾನುವಾರ ಮುಂಜಾನೆ ಆಲಿಯಾ ಭಟ್ ಅವರನ್ನು ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಂಪತಿಗಳು ತಮ್ಮ ಕಾರನ್ನು ಆಸ್ಪತ್ರೆಯಿಂದ ಹೊರಹೋಗುವ ಫೋಟೋ ತೆಗೆದ ಕೆಲವೇ ಗಂಟೆಗಳ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹೆಣ್ಣು ಮಗುವಿನ ಜನನದ ಬಗ್ಗೆ ಹೇಳಿಕೆಯನ್ನು ನೀಡಿದರು
ಆನ್‌ಲೈನ್‌ನಲ್ಲಿ ಪ್ರಕಟಣೆ ಹೊರಬಿದ್ದ ತಕ್ಷಣ, ಕರೀನಾ ಕಪೂರ್ ಖಾನ್, ಮಲೈಕಾ ಅರೋರಾ, ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ, ಸೋನಮ್ ಕಪೂರ್, ಕಿಯಾರಾ ಅಡ್ವಾಣಿ, ದೀಪಿಕಾ ಪಡುಕೋಣೆ ಸೇರಿದಂತೆ ಕುಟುಂಬದ ಸದಸ್ಯರು, ಸ್ನೇಹಿತರು, ಅಭಿಮಾನಿಗಳು ಮತ್ತು ಇತರ ಸೆಲೆಬ್ರಿಟಿಗಳು ಆಭಿನಂದನೆಯ ಸುರಿಮಳೆ ಸುರಿಸಿದರು.