ಆಲಿಯಾನೇ ಮಗು ಅವಳಿಗೊಂದು ಮಗುವಾಗಿರುವುದು ಭಾವುಕ ಕ್ಷಣ: ಮಹೇಶ್ ಭಟ್
ಮೊಮ್ಮಗಳನ್ನು ಬರ ಮಾಡಿಕೊಂಡಿರುವ ಮಹೇಶ್ ಭಟ್ ಈ ಮೊದಲೇ ತಯಾರಿ ಮಾಡಿಕೊಂಡು ಸಿದ್ಧರಾಗಿದ್ದರಂತೆ....
'ಆಕೆ ಹುಟ್ಟಿದ್ದಾಳೆ' ಎಂದು ಸೋನಿ ಕರೆ ಮಾಡಿ ಹೇಳಿದ್ದಳು ಎಂದು ನಿರ್ದೇಶಕ ಮಹೇಶ್ ಭಟ್ ಮೊಮ್ಮಗಳನ್ನು ಬರ ಮಾಡಿಕೊಂಡ ಸಂಭ್ರಮದಲ್ಲಿದ್ದಾರೆ. ಭಟ್ ಕುಟುಂಬ ಮೊದಲ ಮೊಮ್ಮಗು ಇದಾಗಿರುವ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ. ಆಲಿಯಾ ಭಟ್ ನೋಡಲು ಸೆಲೆಬ್ರಿಟಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ.
'It is overwhelming to taste the ceaseless flow of life. ನಿನ್ನೆ ಮೊನ್ನೆ ಆಲಿಯಾ ಪುಟ್ಟ ಹುಡುಗಿ ರೀತಿ ನನ್ನ ಕೈಯಲ್ಲಿದ್ದಳು. ಈಗಲೂ ಆಕೆ ಹುಟ್ಟಿದ ಕ್ಷಣ ನೆನಪಿದೆ. ಈಗ ಹೆಣ್ಣು ಮಗುವಿಗೆ ಆಕೆ ತಾಯಿ. ಆಸ್ಪತ್ರೆಯಿಂದ ಸೋನಿ ನನಗೆ ಕರೆ ಮಾಡಿದ 'ಓ ಆಕೆ ಹುಟ್ಟಿದಾಳೆ' ಎಂದು ಹೇಳಿದ್ದರು. ಸೋನಿ ವರ್ಣಿಸಿದಾಗ ನನಗಾದ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ಆಕೆ ಧ್ವನಿಯಲ್ಲಿ ನೂರಾರು ಭಾವೆನಗಳು ಅಡಗಿತ್ತು. ಪುಟ್ಟ ಕಂದಮ್ಮಾಳಿಂದ ನಮ್ಮ ಮನೆ ದೊಡ್ಡದಾಗುತ್ತಿದೆ' ಎಂದು ಮಹೇಶ್ ಭಟ್ ಮಾತನಾಡಿದ್ದಾರೆ.
'ಪ್ರತಿಯೊಬ್ಬರು ಸಂತೋಷವಾಗಿದ್ದಾರೆ, ನೆಮ್ಮದಿಯಾಗಿದೆ ಜೀವನ ದಿನವೂ ಒಂದೊಂದು ಮಿರಾಕಲ್ ಆಗುತ್ತಿದೆ. ಈ ರೀತಿಯ ಕ್ಷಣಗಳನ್ನು ಮಾನವ ಸಂಸ್ಕೃತಿಯಲ್ಲಿ ವಾಟರ್‌ಶೆಡ್ ಎಂದು ಕರೆಯಲಾಗುತ್ತದೆ. ಈ ರೀತಿ ಕ್ಷಣಗಳು ಆಳವಾದ ಭಾವನೆಗಳನ್ನು ಬಿಡುತ್ತದೆ' ಎಂದು ಮಹೇಶ್ ಭಟ್ ಹೇಳಿದ್ದಾರೆ.
ಮುಂಬೈನಲ್ಲಿರುವ ರಿಲೈನ್ಸ್ ಆಸ್ಪತ್ರೆಯಲ್ಲಿ ನವೆಂಬರ್ 6ರಂದು ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಮಯದಲ್ಲಿ ಮಹೇಶ್ ಭಟ್ ಆಸ್ಪತ್ರೆಗೆ ಹೋಗದೇ ಮನೆಯಲ್ಲಿ ದೇವರ ಮುಂದೆ ಕುಳಿತುಕೊಂಡಿದ್ದರಂತೆ. 'ಶಾಹೀನ್ ಮತ್ತು ಸೋನಾ ಆಸ್ಪತ್ರೆಗೆ ತೆರಳಿದ್ದರು. ಅವರಿಬ್ಬರು ಕರೆ ಮಾಡಿ ಈ ಸಮಯಕ್ಕೆ ಬರುವಂತೆ ಹೇಳುವ ಪ್ಲ್ಯಾನ್ ಮಾಡಿದ್ದರು ಆದರೆ ಅಂದುಕೊಂಡ ಸಮಯಕ್ಕಿಂತ ಬೇಗ ನಡೆಯಿತ್ತು ಹೀಗಾಗಿ ಈಗ ನಾನು ಆಲಿಯಾ ಮತ್ತು ಮೊಮ್ಮಗಳನ್ನು ಭೇಟಿ ಮಾಡಲು ಕಾಯುತ್ತಿರುವೆ' ಎಂದಿದ್ದಾರೆ ಮಹೇಶ್ ಭಟ್.
Alia Bhatt 10 ವರ್ಷದ ಸಿನಿ ಜರ್ನಿ, ಬಿ-ಟೌನ್ ನಿರ್ಮಾಪಕಿಯರ ಜೀವನ ತುಂಬಾ ಕಷ್ಟ: ಆಲಿಯಾ ಭಟ್
ಆಲಿಯಾ-ರಣಬೀರ್ ಹೊಸ ಜೀವನ:
'ಜೀವನ ಪಡೆಯುತ್ತಿರುವ ಅನಿರೀಕ್ಷಿತ ತಿರುವುಗಳ ಬಗ್ಗೆ ಅವರಿಗೆ ಖುಷಿ ಇದೆ. ಆಲಿಯಾ ಮತ್ತು ರಣಬೀರ್ ತುಂಬಾನೇ ಧೈರ್ಯವಂತರು ಮತ್ತು ಯೂನಿಕ್ ಮಕ್ಕಳು. ತಮ್ಮ ಸಿನಿ ವೃತ್ತಿಯನ್ನು ಮ್ಯಾನೇಜ್ ಮಾಡುತ್ತಿರುವ ರೀತಿ, ರಿಯಲ್ ಲೈಫ್‌ನಲ್ಲಿ ಇನ್ನಿತ್ತರ ಕೆಲಸಗಳು ಮ್ಯಾನೇಜ್ ಮಾಡುತ್ತಿರುವ ರೀತಿ ಸೂಪರ್ ಆಗಿತ್ತು. ಇದೀಗ ಮಗು ಹುಟ್ಟಿದೆ ಮತ್ತೊಂದು ಫೇಸ್ ಶುರುವಾಗುತ್ತಿದೆ. ನಮ್ಮ ಬ್ಯಾಕ್‌ಯಾರ್ಡ್‌ನಲ್ಲಿ ವಾಲ್ಕೆನೊ ಎರ್ಪಟ್ ಆಗುತ್ತಿ. ಮಗು ಬಂದ ಮೇಲೆ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ, ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾ ಬದಲಾಗುತ್ತಾರೆ. ಇಬ್ಬರೂ ಬದಲಾವಣೆಯನ್ನು ಖುಷಿಯಿಂದ ಸ್ವೀಕರಿಸುತ್ತಾರೆ ಏಕೆಂದರೆ ಜೀವನ ಅಂದ್ರೆ ಏನು ಬದಲಾವಣೆ ಅಂದ್ರೆ ಏನು ಎಂದು ಹೇಳಿಕೊಟ್ಟಿರುವೆ.'ಎಂದು ಹೇಳಿದ್ದಾರೆ.
'ಈಗ ನಾನು ತಾತ ಆಗಿರುವ ಸೋನಿ ಅಜ್ಜಿ ಆಗಿದ್ದಾಳೆ. ಈಗ ಅಜ್ಜಿ-ತಾತ ರೂಲ್ ಪ್ಲೇ ಮಾಡುವಾಗ ನಮಗೆ ವಿಭಿನ್ನ ಧ್ವನಿ ಇರುತ್ತದೆ. ನಮ್ಮ ಮೊಮ್ಮಗಳು ನಮ್ಮ ಮುಂದಿನ ಭವಿಷ್ಯ ಹೀಗಾಗಿ ಬೆಳವಣಿ ಚೆನ್ನಾಗಿ ಮಾಡಬೇಕು. ಆಲಿಯಾ ಮತ್ತು ರಣಬೀರ್ ತಮ್ಮ ಲೈಫ್ ಜರ್ನಿ ಬಗ್ಗೆ ತುಂಬಾನೇ ನ್ಯಾಚುರಲ್ ಅಗಿದ್ದಾರೆ. ಲವ್ ಸ್ಟೋರಿ, ಮದುವೆ ಜರ್ನಿ, ಸಿನಿ ಜರ್ನಿ ಪ್ರತಿಯೊಂದನ್ನು ಎಂಜಾಯ್ ಮಾಡಿದ್ದಾರೆ ಗನತೆ ಗೌರವದಿಂದ ಮ್ಯಾನೇಜ್ ಮಾಡಿದ್ದಾರೆ. ಹುಟ್ಟಿರುವ ಕಂದಮ್ಮ ಅವರಿಬ್ಬರನ್ನು ಕ್ಲೋಸ್ ಮಾಡುತ್ತದೆ ಈಗಿನಿಂದ ಅವರ ಜೀವನ ಬದಲಾಗುತ್ತದೆ' ಎಂದಿದ್ದಾರೆ ಮಹೇಶ್ ಭಟ್.