Ex ಜೊತೆ ಸಂಬಂಧ: ಸಲ್ಮಾನ್ ಖಾನ್ ಮುಂದು, ಉಳಿದವರೇನೂ ಉಳಿದಿಲ್ಲ ಹಿಂದೆ!

Published : Jan 10, 2023, 05:07 PM IST

ಒಂದು ಕಾಲದಲ್ಲಿ ಸಂಬಂಧದಲ್ಲಿದ್ದ ಜೋಡಿಗಳ ನಡುವೆ ಬ್ರೇಕಪ್‌ ಆದ ನಂತರ ಒಳ್ಳೆಯ ಭಾಂದವ್ಯವಿರುವುದು ಸ್ಪಲ್ಪ ವಿರಳ. ಆದರೆ  ಮಾಜಿಗಳು  ಪ್ರೇಮಿಗಳು ಸ್ನೇಹಿತರಾಗಿ ಇರಲು ಸಾಧ್ಯವಿಲ್ಲ ಎಂದೂ ಹೇಳಲಾಗುವುದಿಲ್ಲ.   ಇದನ್ನು ಸಾಬೀತುಪಡಿಸಲು ಬಾಲಿವುಡ್‌ನಲ್ಲಿ ಅನೇಕ ಉದಾಹರಣೆಗಳಿವೆ.

PREV
17
Ex ಜೊತೆ ಸಂಬಂಧ: ಸಲ್ಮಾನ್ ಖಾನ್ ಮುಂದು, ಉಳಿದವರೇನೂ ಉಳಿದಿಲ್ಲ ಹಿಂದೆ!
ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ:

ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ ಸುದೀರ್ಘ ಕಾಲದ ರಿಲೆಷನ್‌ಶಿಪ್‌ನಲ್ಲಿದ್ದರು. ಈ ಜೋಡಿ ಬಹುತೇಕ ಮದುವೆಯಾಗಲು ಹೊರಟಿದ್ದರು. ಆದರೆ ಅವರು ಬೇರೆಯಾದರು. ಆದಾಗ್ಯೂ, ಇಂದಿಗೂ ಅವರು ಉತ್ತಮ ಸ್ನೇಹಿತರಾಗಿಯೇ ಇದ್ದಾರೆ

27
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್:

 ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಬಹಳ ಕಾಲ ಸಂಬಂಧದಲ್ಲಿದ್ದರು. ಆದರೆ ನಂತರ ಕತ್ರಿನಾ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡಿದರು ಮತ್ತು ಅವರು ಈಗ ವಿಕ್ಕಿ ಕೌಶಲ್ ಅವರನ್ನು ವಿವಾಹವಾಗಿದ್ದಾರೆ. ಆದಾಗ್ಯೂ, ಅವರು ಇನ್ನೂ ಸಲ್ಮಾನ್ ಖಾನ್ ಅವರೊಂದಿಗೆ ಉತ್ತಮ ಸ್ನೇಹವನ್ನು ಹಂಚಿಕೊಂಡಿದ್ದಾರೆ.  
 

37
ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್:

ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಡಿಸೆಂಬರ್ 2021 ರಲ್ಲಿ ತಮ್ಮ ಬ್ರೇಕಪ್‌ ಘೋಷಿಸಿದರು. ಆದರೆ ಅವರು ಉತ್ತಮ ಸ್ನೇಹಿತರಾಗಿಯೇ ಉಳಿದಿದ್ದಾರೆ. ವಾಸ್ತವವಾಗಿ, ಇತ್ತೀಚಿನ ಫೋಟೋಗಳಲ್ಲಿ, ರೋಹ್ಮನ್ ಸುಶ್ಮಿತಾ ಸೇನ್ ಅವರ ಕುಟುಂಬ ಸದಸ್ಯರೊಂದಿಗೆ ಕಾಣಬಹುದು.


 

47
ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ:

ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಒಂದು ಕಾಲದಲ್ಲಿ ಬಾಲಿವುಡ್‌ನ ಸಖತ್‌ ಫೇಮಸ್‌ ಕಪಲ್‌. ಆದರೆ ಭಿನ್ನಾಭಿಪ್ರಾಯದ ನಂತರ ಅವರು ಬೇರೆಯಾದರು. ಆದಾಗ್ಯೂ,  ಅವರು ಇಂದಿಗೂ  ಉತ್ತಮ ಸ್ನೇಹಿತರಾಗಿದ್ದಾರೆ.

57
ಹೃತಿಕ್ ರೋಷನ್ ಮತ್ತು ಸುಸಾನೆ ಖಾನ್:

2000ರಲ್ಲಿ ವಿವಾಹವಾದ .ಹೃತಿಕ್ ರೋಷನ್ ಮತ್ತು ಸುಸ್ಸಾನೆ ಖಾನ್  2014ರಲ್ಲಿ ವಿಚ್ಛೇದನ ಪಡೆದರು. ಆದರೆ ಈ ದಂಪತಿ ಪುತ್ರರಾದ ಹ್ರೇಹಾನ್ ಮತ್ತು ಹೃದಯಾನ್‌ ಅವರ  ಸಹ-ಪೋಷಕರಾಗಿ ಮುಂದುವರಿದ್ದಾರೆ

67
ಆಮೀರ್ ಖಾನ್ ಮತ್ತು ರೀನಾ ದತ್ತಾ:

ಆಮೀರ್ ಖಾನ್ ಮೊದಲು ಮದುವೆಯಾಗಿದ್ದು ರೀನಾ ದತ್ತಾ ಅವರನ್ನು. ಡಿವೋರ್ಸ್‌ ನಂತರವೂ ಇವರಿಬ್ಬರೂ  ಆತ್ಮೀಯ ಸಂಬಂಧವನ್ನು ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ ರೀನಾ ದತ್‌  ಅವರು ಆಮೀರ್‌ ಎರಡನೇ ಪತ್ನಿ ಕಿರಣ್ ರಾವ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಸಹ ಹಂಚಿಕೊಂಡಿದ್ದಾರೆ.

77
ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ:

18 ವರ್ಷಗಳ ದಾಂಪತ್ಯದ ನಂತರ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಬೇರೆಯಾಗಿದ್ದಾರೆ. ಆದರೆ ಇಂದಿಗೂ ಈ ಜೋಡಿ  ಪರಸ್ಪರ ಒಳ್ಳೆಯ ಸ್ನೇಹಿತರು ಮತ್ತು ಮಗನ ಸಹ ಪೋಷಕರಾಗಿ ಮುಂದುವರೆದಿದ್ದಾರೆ. 

Read more Photos on
click me!

Recommended Stories