ಪ್ರಭಾಸ್ ಆದ್ಮೇಲೆ ಮದ್ವೆ ಆಗ್ತೀನಿ ಅಂತೇಳಿ ವಿದೇಶಿ ಹುಡುಗಿಯನ್ನು ವರಿಸಲು ಮುಂದಾದ ಶರ್ವಾನಂದ್

First Published Jan 10, 2023, 4:29 PM IST

ಸೈಲೆಂಟ್ ಆಗಿ ಹುಡುಗಿ ಹುಡುಕಿಕೊಂಡ್ರಾ ಶರ್ವಾನಂದ್? ಪ್ರಭಾಸ್‌ ಮಾತ್ರ ಮದುವೆ ಆಗೋಲ್ಲ ಬಿಡಿ ಎಂದು ಕಾಲೆಳೆದ ನೆಟ್ಟಿಗರು....

ತೆಲುಗು ಚಿತ್ರರಂಗದ ದಿ ಮೋಸ್ಟ್‌ ಎಲಿಜಿಬಲ್ ಬ್ಯಾಚುಲರ್‌ ಆಗಿದ್ದ ಶರ್ವಾನಂದ್ ಸದ್ಯ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಚಾರ ವೈರಲ್ ಆಗುತ್ತಿದೆ.
 

ಇಷ್ಟು ದಿನ ಪ್ರಭಾಸ್ ಮದುವೆ ಮಾಡಿಕೊಂಡ ನಂತರ ನನ್ನ ಮದುವೆ ಎನ್ನುತ್ತಿದ್ದ ಶರ್ವಾನಂದ್ ವಿದೇಶಿ ಹುಡುಗಿಯನ್ನು ವರಿಸುತ್ತಿರುವುದಕ್ಕೆ ಎಲ್ಲರು ಶಾಕ್ ಆಗಿದ್ದಾರೆ. 38 ವರ್ಷದ ಶರ್ವಾನಂದ್ ಈ ವಿಚಾರದ ಬಗ್ಗೆ ರಿಯಾಕ್ಟ್‌ ಮಾಡಿಲ್ಲ....

2023ರಲ್ಲಿ ಎನ್‌ಆರ್‌ಐ ಹುಡುಯನ್ನು ಮದುವೆ ಆಗುತ್ತಾರೆ ಎನ್ನುವ ವಿಚಾರ ಕೇಳಿ ಬರುತ್ತಿದೆ. ಮದುವೆ ದಿನಾಂಕ ಮತ್ತು ಸ್ಥಳ ನಿಧಿಯಾಗಿದೆ ಎನ್ನುವ ಮಾತುಗಳು ಇದೆ. ಅಫೀಶಿಯಲ್ ಆಗಿ ಅನೌನ್ಸ್‌ ಮಾಡುವ ಮೂಲಕ ದಿನಾಂಕವನ್ನು ರಿವೀಲ್ ಮಾಡಲಿದ್ದಾರೆ. 
 

 ಈ ಹಿಂದೆ ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ 'ಮೊದಲು ಪ್ರಭಾಸ್ ಮದುವೆ ಆಗಲಿ, ಆಮೇಲೆ ನಾನು ಆಗುವೆ' ಎಂದು ಹೇಳಿದ್ದರು. 43 ವರ್ಷ ಪ್ರಭಾಸ್ ಮದುವೆ ಆಗುವ ಭರವಸೆ ಅಭಿಮಾನಿಗಳಿಗಿಲ್ಲ.


ಶರ್ವಾನಂದ್ ಮಾತು ಕೇಳಿ ಅಲ್ಲೇ ಇದ್ದ ಪ್ರಭಾಸ್ 'ನಾನು ಸಲ್ಮಾನ್ ಖಾನ್‌ ಹೆಸರು ಹೇಳಿಕೊಂಡು ಓಡಾಡುತ್ತಿದ್ದೇನೆ ಇವರು ನನ್ನ ಹೆಸರು ಹೇಳುತ್ತಿದ್ದಾರೆ' ಎಂದಿದ್ದಾರೆ.

2022ರಲ್ಲಿ ಒಕೆ ಓಕಾ ಜೀವಿತಂ ಸಿನಿಮಾ ಬಿಡುಗಡೆ ಆಗಿತ್ತು, ಬ್ಲಾಕ್‌ ಬಸ್ಟರ್‌ ಹಿಟ್‌ ಕೂಡ ಕಂಡಿತ್ತು. ಈ ಚಿತ್ರದಲ್ಲಿ ಶರ್ವಾನಂದ್ ಸ್ನೇಹಿತರಾಗಿ ಪ್ರಭಾಸ್, ರಾಮ್‌ ಚರಣ್, ದಗ್ಗುಬಾಟಿ ಕಾಣಿಸಿಕೊಂಡಿದ್ದರು. 

click me!