ಬಾಲಿವುಡ್‌ನ ಗ್ರೀಕ್ ಗಾಡ್ ಫೇಮ್‌ನ ನಟ ಹೃತಿಕ್ ರೋಷನ್ (Hrithik Roshan) ಅವರಿಗೆ 49 ವರ್ಷಗಳ ಸಂಭ್ರಮ. 10 ಜನವರಿ 1974 ರಂದು ಮುಂಬೈನಲ್ಲಿ ರಾಕೇಶ್ ರೋಷನ್ ಮತ್ತು ಪಿಂಕಿ ರೋಷನ್ ದಂಪತಿಗೆ ಜನಿಸಿದ ಹೃತಿಕ್ ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರು. ಹೃತಿಕ್ ಸೂಪರ್‌ಸ್ಟಾರ್ ಮಾತ್ರವಲ್ಲ ಒಬ್ಬ ಒಳ್ಳೆಯ ತಂದೆ ಸಹ ಹೌದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಸಾಕ್ಷಿ ಅವರ ಸೋಶಿಯಲ್ ಮೀಡಿಯಾ ಫೋಟೋಗಳು.
ಹೃತಿಕ್ ರೋಷನ್ ಅವರು ಅಸಾಧಾರಣ ನಟನ ಹೊರತಾಗಿ ಪ್ರೀತಿಯ ತಂದೆ ಮತ್ತು ಒಬ್ಬ ಪರ್ಫೇಕ್ಟ್ ಫ್ಯಾಮಿಲಿ ಮ್ಯಾನ್ ಎಂದು ಸಾಬೀತುಪಡಿಸುವ ಫೋಟೋಗಳು ಮತ್ತು ಕ್ಷಣಗಳು ಇಲ್ಲಿವೆ.
27
ಸುಸ್ಸಾನ್ ಖಾನ್ ಜೊತೆ 2000ರಲ್ಲಿ ವಿವಾಹವಾದ ಹೃತಿಕ್ ರೋಷನ್ 2014ರಲ್ಲಿ ವಿಚ್ಛೇದನ ಪಡೆದರು.ಆದರೆ ಈ ದಂಪತಿ ಪುತ್ರರಾದ ಹ್ರೇಹಾನ್ ಮತ್ತು ಹೃದಯಾನ್ ಅವರ ಸಹ-ಪೋಷಕರಾಗಿ ಮುಂದುವರಿದ್ದಾರೆ.
37
'ಕಹೋ ನಾ ಪ್ಯಾರ್ ಹೈ' ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ ಹೃತಿಕ್ ಸಿನಿಮಾ ಸೂಪರ್ ಹಿಟ್ ಆಗಿ ರಾತ್ರೋರಾತ್ರಿ ಸ್ಟಾರ್ ಆಗಿ ಉದಯಿಸಿದರು.
47
ಮೊದಲ ಸಿನಿಮಾ ಕಹೋ ನಾ ಪ್ಯಾರ್ ಹೈ' ನಿಂದ 'ಅವರ ಇತ್ತಿಚೀನ ಬಿಡುಗಡೆ ವಿಕ್ರಮ್ ವೇದಾ' ವರೆಗೆ ಹೃತಿಕ್ ಸುಮಾರು 28 ಚಿತ್ರಗಳಲ್ಲಿ ನಾಯಕ ನಟನಾಗಿ ಕೆಲಸ ಮಾಡಿದ್ದಾರೆ.
57
ಹೃತಿಕ್ ರೋಷನ್ ತಮ್ಮ ಮಕ್ಕಳನ್ನು ವಂಡರ್ ವುಮನ್ 1984 ಸ್ಕ್ರೀನಿಂಗ್ ಎಂಜಾಯ್ ಮಾಡುತ್ತಿರುವ ಫೋಟೋ ಇದಾಗಿದೆ. ಇದು ಎರಡನೇ ಕೋವಿಡ್ ಲಾಕ್‌ಡೌನ್ ನಂತರ ಚಿತ್ರಮಂದಿರಗಳು ತೆರೆದ ಸಮಯ.
67
ಈ ಕ್ಷಣವು ಹೃತಿಕ್ ರೋಷನ್ ಡಾಟಿಂಗ್ ಫಾದರ್ ಎಂದು ಸಾಬೀತುಪಡಿಸುವ ಮತ್ತೊಂದು ಉದಾಹರಣೆಯಾಗಿದೆ. ಈ ರೀತಿ ನಟ ತಮ್ಮ ಮಕ್ಕಳು ಮತ್ತು ಫ್ಯಾಮಿಲಿ ಜೊತೆ ಸಮಯ ಕಳೆಯುವ ಸಾಕಷ್ಟು ಪೋಟೋಗಳು ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ನೋಡಬಹುದು.
77
ಹೃತಿಕ್ ರೋಷನ್ ಫೈಟರ್ ಮತ್ತು ಕ್ರಿಶ್ 4 ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತ್ನಿಗೆ ವಿಚ್ಛೇದನ ನೀಡು ಏಳು ವರ್ಷಗಳಾದರೂ ಒಂಟಿಯಾಗಿಯೇ ಇದ್ದ ಈ ನಟ, ಇದೀಗ ಗರ್ಲ್ ಫ್ರೆಂಡ್ ಹುಡುಕಿಕೊಂಡಿದ್ದು, ಅಲ್ಲಲ್ಲಿ ಆಕೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.