ಬಾಲಿವುಡ್‌ನಲ್ಲಿ ಈಗ ದೀಪಾವಳಿ ಪಾರ್ಟಿ ಶುರುವಾಗಿದೆ. ನಿನ್ನೆ ರಾತ್ರಿ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರ ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಯಲ್ಲಿ 70ರ ಹರೆಯದ ರೇಖಾ ಎಂದಿನಂತೆ ನವವಧುವಿನಂತೆ ಸಿಂಗರಿಸಿಕೊಂಡು ಬಂದಿದ್ದರು. ಕೇಸರಿ ಬಣ್ಣದ ಬನಾರಸಿ ಸೀರೆ, ನೆತ್ತಿಬೊಟ್ಟು, ಭಾರವಾದ ಕಿವಿಯೋಲೆಗಳು ಮತ್ತು ಕೈ ತುಂಬಾ ಬಳೆಗಳನ್ನು ಧರಿಸಿದ್ದ ರೇಖಾ ಅಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.