ರಿಲೀಸ್‌ಗೂ ಮುನ್ನ 1000 ಕೋಟಿ ಬಾಚಿಕೊಂಡ ಪುಷ್ಪ 2: ವಿಶ್ವಾದ್ಯಂತ ಭಾರೀ ಕ್ರೆಜ್‌ ಹುಟ್ಟಿಸಿದ ಅಲ್ಲು ಅರ್ಜುನ್!

First Published | Oct 23, 2024, 9:34 AM IST

ತೆಲುಗು ಚಿತ್ರಂಗದ ಖ್ಯಾತ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಆಕ್ಷನ್ ಪುಷ್ಪ 2 - ದಿ ರೂಲ್ ಬಿಡುಗಡೆಗೆ ಮುನ್ನವೇ 1000 ಕೋಟಿ ಕ್ಲಬ್‌ ಸೇರಿದೆ. ಹೌದು, ಸುಕುಮಾರ್ ನಿರ್ದೇಶನದ ಈ ಚಿತ್ರ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಪುಷ್ಪ 2 ಚಿತ್ರ ಬಿಡುಗಡೆಗೂ ಮುನ್ನೇ 1000 ಕೋಟಿಗೂ ಅಧಿಕ ವ್ಯವಹಾರ ಮಾಡಿದ ಭಾರತದ ಮೊದಲ ಚಿತ್ರವಾಗಿದೆ. 

ಪುಷ್ಪ 2 ಬಿಡುಗಡೆಯಗೂ ಮುನ್ನ ಭಾರತ ಹಾಗೂ ವಿಶ್ವಾದ್ಯಂತ ಭರ್ಜರಿ ಬಿಸಿನೆಸ್‌ ಮಾಡಿದೆ. ಹೀಗಾಗಿಯೇ ಚಿತ್ರ ರಿಲೀಸ್‌ ಆಗೋ ಮುನ್ನವೇ 1000 ಕೋಟಿ ಅಧಿಕ ವ್ಯವಹಾರ ಮಾಡಿದೆ ಎಂದು ವರದಿಯಾಗಿದೆ. ಇತ್ತೀಚಿನ ಟ್ರೇಡ್ ವರದಿಗಳ ಪ್ರಕಾರ, ಚಿತ್ರದ ಥಿಯೇಟ್ರಿಕಲ್ ರೈಟ್ಸ್ ಸುಮಾರು 600 ಕೋಟಿಗೆ ಖರೀದಿಯಾಗಿದೆಯಂತೆ.

ತೆಲುಗು ರಾಜ್ಯಗಳಾದ (ಆಂಧ್ರಪ್ರದೇಶ ಮತ್ತು ತೆಲಂಗಾಣ) ಮತ್ತು ಉತ್ತರ ಭಾರತದಲ್ಲಿ, ಥಿಯೇಟ್ರಿಕಲ್ ಹಕ್ಕುಗಳು 375-400 ಕೋಟಿಗೆ ಮಾರಾಟವಾಗಿವೆ. ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ 100 ಕೋಟಿ ಹಾಗೂ ಸಾಗರೋತ್ತರ ಹಕ್ಕುಗಳ ವ್ಯಾಪಾರವು ಸರಿಸುಮಾರು 125 ಕೋಟಿ ತಲುಪಿದೆ. ಹೀಗೆ ಒಟ್ಟು ವಿಶ್ವಾದ್ಯಂತ 600+ ಕೋಟಿಗಳಷ್ಟು ಪ್ರೀ-ರಿಲೀಸ್ ಥಿಯೇಟ್ರಿಕಲ್ ವ್ಯಾಪಾರವಾಗಿದೆ.

Tap to resize

ಪುಷ್ಪ 2 ಡಿಜಿಟಲ್‌ ಹಕ್ಕನ್ನು ನೆಟ್‌ಫ್ಲಿಕ್ಸ್‌ಗೆ ದಾಖಲೆಯ 275 ಕೋಟಿಗೆ ಮಾರಾಟವಾಗಿದೆ. ಇನ್ನು ಆಡಿಯೋ ಹಕ್ಕು 65 ಕೋಟಿ ಮತ್ತು ಸ್ಯಾಟಲೈಟ್‌ ಹಕ್ಕು 85 ಕೋಟಿಗಳಿಗೆ ಮಾರಾಟವಾಗಿವೆ. 

ಪುಷ್ಪ 2 - ದಿ ರೂಲ್‌ನ ಒಟ್ಟು ಪ್ರೀ-ರಿಲೀಸ್ ಥಿಯೇಟ್ರಿಕಲ್ ಮತ್ತು ನಾನ್-ಥಿಯೇಟ್ರಿಕಲ್ ವ್ಯವಹಾರವು 1025+ ಕೋಟಿಗಳಾಗಿದ್ದು, ಇದು ಭಾರತೀಯ ಚಲನಚಿತ್ರವೊಂದಕ್ಕೆ ಸಾರ್ವಕಾಲಿಕ ಅತ್ಯಧಿಕವಾಗಿದೆ. ಚಿತ್ರವು ಬಹು ಭಾಷೆಗಳಲ್ಲಿ ಡಿಸೆಂಬರ್ 6 ರಂದು ಬಿಡುಗಡೆಯಾಗಲಿದೆ.
 

Latest Videos

click me!