Aamir Khan ಪುತ್ರಿ Ira Khan ಈದ್ ಪಾರ್ಟಿಯಲ್ಲಿ ಈತನನ್ನು ನೋಡಿ ಫ್ಯಾನ್ಸ್ ಆಶ್ಚರ್ಯ!
First Published | May 4, 2022, 5:44 PM ISTಅನೇಕ ಸೆಲೆಬ್ರಿಟಿಗಳ ಈದ್ ಆಚರಣೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದೇ ಸಮಯದಲ್ಲಿ, ಆಮೀರ್ ಖಾನ್ (Aamir Khan) ಅವರ ಪುತ್ರಿ ಇರಾ ಖಾನ್ (Ira Khan) ಕೂಡ ಈದ್ ಅನ್ನು ಬಾಯ್‌ಫ್ರೆಂಡ್ ಮತ್ತು ಸ್ನೇಹಿತರೊಂದಿಗೆ ಆಚರಿಸಿದರು. ಅವರು ಇನ್ಸ್ಟಾಗ್ರಾಮ್‌ನಲ್ಲಿ ಆಚರಣೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಆಮೀರ್ ಅವರ ಸೋದರಳಿಯ ಇಮ್ರಾನ್ ಖಾನ್ ( Imran Khan) ಕೂಡ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ ಮತ್ತು ಅವರು ಇಲ್ಲಿಯವರೆಗೆ ಎಲ್ಲಿದ್ದರು ಎಂದು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು.