ಮಾಧುರಿ ದೀಕ್ಷಿತ್ ತೆಳ್ಳಗಿರದಿದ್ರೂ ಸುಂದರವಾಗಿದ್ರು; ದಿಶಾ ಪಟಾನಿ ಹಿಗ್ಗಾಮುಗ್ಗಾ ಟ್ರೋಲ್

First Published | Jul 10, 2022, 5:42 PM IST

ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ ಸದ್ಯ ಏಕ್ ವಿಲನ್ -2 ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾತಂಡ ಪ್ರಚಾರಕ್ಕೆಂದು ಮಾಧ್ಯಮದ ಮುಂದೆ ಹಾಜರಾಗಿತ್ತು. ನಟಿ ದಿಶಾ ಪಟಾನಿ ಸಿಕ್ಕಾಪಟ್ಟೆ ಹಾಟ್ ಆಗಿ ಈವೆಂಟ್ ನಲ್ಲಿ ಕಾಣಿಸಿಕೊಂಡಿದ್ದರು. 

ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ ಸದ್ಯ ಏಕ್ ವಿಲನ್ -2 ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾತಂಡ ಪ್ರಚಾರಕ್ಕೆಂದು ಮಾಧ್ಯಮದ ಮುಂದೆ ಹಾಜರಾಗಿತ್ತು. ನಟಿ ದಿಶಾ ಪಟಾನಿ ಸಿಕ್ಕಾಪಟ್ಟೆ ಹಾಟ್ ಆಗಿ ಈವೆಂಟ್ ನಲ್ಲಿ ಕಾಣಿಸಿಕೊಂಡಿದ್ದರು. ದಿಶಾ ಲುಕ್ ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. 

ದಿಶಾ ಏಕ್ ವಿಲನ್ -2 ಸಿನಿಮಾ ಪ್ರಚಾರಕ್ಕಾಗಿ ಹಳದಿ ಬಣ್ಣದ ಟಾಪ್ ಮತ್ತು ಡೆನಿಮ್ ನಲ್ಲಿ ಕಾಣಿಸಿಕೊಂಡಿದ್ದರು. ಸಹ ನಟ ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಕೂಡ ಜೊತೆಯಲ್ಲಿದ್ದರು. 

Tap to resize

ಪ್ರಚಾರವೇಳೆ ದಿಶಾ ಧರಿಸಿದ್ದ ಬಟ್ಟೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ದಿಶಾ ಪಟಾನಿ ಗುರುತು ಅಂದರೆ ಟೈಗರ್ ಶ್ರಾಫ್ ಗರ್ಲ್ ಫ್ರೆಂಡ್ ಮತ್ತು ಮೈಕಾಣುವ ಬಟ್ಟೆ ಧರಿಸುವುದು ಅಷ್ಟೆ ಎಂದು ಟ್ರೋಲ್ ಮಾಡಲಾಗುತ್ತಿದೆ. 

ಫಿಟ್ನೆಸ್ ಫ್ರೀಕ್ ದಿಶಾ ಅವರನ್ನು ನೆಟ್ಟಿಗರು ಅಪೌಷ್ಠಿಕತೆಯ ಕೊರತೆ ಇದೆ, ಫ್ಲಾಟ್ ಎಂದು ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ನಟಿ ಮಾಧುರಿ ದೀಕ್ಷಿತ್ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಮಾಧುರಿ ದೀಕ್ಷಿತ್ ಈ ಪರಿ ತೆಳ್ಳಗೆ ಇರಲಿಲ್ಲ. ಆದರೆ ತುಂಬಾ ಸುಂದರವಾಗಿದ್ದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಇನ್ನು ಕೆಲವರು ದಿಶಾ ಪಟಾನಿ ಮೂಗು ಮತ್ತು ತುಟಿಯ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಸದಾ ವರ್ಕೌಟ್ ನ ಮಾಡುವ ದಿಶಾ ಮತ್ತಷ್ಟು ತೆಳ್ಳಗಾಗಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.   
 

ಆದರೆ ಯಾವುಜಕ್ಕೂ ತಲೆಕೆಡಿಸಿಕೊಳ್ಳದ ದಿಶಾ ತಾವಾಯಿತು ತಮ್ಮ ಕೆಲಸ ಎಂದು ಬ್ಯುಸಿಯಾಗಿದ್ದಾರೆ. ದಿಶಾ ಸದ್ಯ ಏಕ್ ವಿಲನ್ -2 ರಲೀಸ್ ಗೆ ಎದುರು ನೋಡುತ್ತಿದ್ದಾರೆ. ಭರ್ಜರಿ ಪ್ರಮೋಷನ ಕಾರ್ಯ ನಡೆಯುತ್ತಿದ್ದು ಈವೆಂಟ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ. 

ವಿಲನ್ -2 ಸಿನಿಮಾ ಜೊತೆಗೆ ಪ್ರಭಾಸ್ ನಟನೆಯ ಹೊಸ ಸಿನಿಮಾದಲ್ಲಿ ದಿಶಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ದಿಶಾ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ.  

Latest Videos

click me!