Maldivesನಲ್ಲಿ ದಿಶಾ ಪಟಾನಿ ಟೈಗರ್‌ ಶ್ರಾಫ್‌: ಫೋಟೋ ವೈರಲ್‌!

Published : Dec 31, 2021, 07:52 PM IST

ಬಾಲಿವುಡ್ ಜೋಡಿಗಳಲ್ಲಿ ದಿಶಾ ಪಟಾನಿ (Disha Patani) ಮತ್ತು ಟೈಗರ್ ಶ್ರಾಫ್ (Tiger Shroff) ಹೆಸರು ಕೂಡ ಸೇರಿದೆ. ಇಬ್ಬರೂ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ದಿನಗಳಲ್ಲಿ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಮಾಲ್ಡೀವ್ಸ್‌ನಲ್ಲಿ  ಸಮಯವನ್ನು ಕಳೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇವರ ಹಾಲಿಡೇ ಫೋಟೊಗಳು ಸಖತ್‌ ವೈರಲ್‌ ಆಗಿವೆ.  

PREV
17
Maldivesನಲ್ಲಿ ದಿಶಾ ಪಟಾನಿ ಟೈಗರ್‌ ಶ್ರಾಫ್‌: ಫೋಟೋ ವೈರಲ್‌!

ನ್ಯೂ ಇಯರ್‌ ಸೆಲೆಬ್ರೆಷನ್‌ಗಾಗಿ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಮಾಲ್ಡೀವ್ಸ್‌ನಲ್ಲಿದ್ದಾರೆ. ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಕಪಲ್‌  ಪರಸ್ಪರ ಜೊತೆಯಾಗಿರುವ ಫೋಟೋವನ್ನು ಮಾತ್ರ ಹಂಚಿಕೊಂಡಿಲ್ಲ.
 

27

ಹಳೆ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಈ ಜೋಡಿ ಮಾಲ್ಡೀವ್ಸ್‌ನಲ್ಲಿದೆ. ಇಬ್ಬರೂ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಳ್ಳದಿದ್ದರೂ, ಅವರು ಒಟ್ಟಿಗೆ ಇದ್ದಾರೆ ಎಂದು ತೋರುತ್ತದೆ. 

37

ದಿಶಾ ಪಟಾನಿ ತಮ್ಮ ಇನ್ಸ್ಟಾಗ್ರಾಮ್‌ ಫೇಜ್‌ನಲ್ಲಿ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಪಿಂಕ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ, ದಿಶಾ ಪಟಾನಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಾಣಬಹುದು.


 


 

 


 

47

ಟೈಗರ್ ಶ್ರಾಫ್ ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶ್ರಾಫ್‌ ಸಹ ಸಮುದ್ರ ತೀರದಲ್ಲಿ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ. ಫೋಟೋಗಳು ವೈರಲ್ ಆಗಿವೆ ಮತ್ತು ಫ್ಯಾನ್ಸ್‌ ಇಬ್ಬರೂ ಜೊತೆಯಾಗಿದ್ದಾರೆ ಎಂದು ಗೆಸ್‌ ಮಾಡುತ್ತಿದ್ದಾರೆ.

57

ದಿಶಾ ಪಟಾನಿ ಈ ಫೋಟೋಗಳಲ್ಲಿ ತುಂಬಾ ಬೋಲ್ಡ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಫೋಟೊದಲ್ಲಿ ನಟಿ ಬಿಕಿನಿಯೊಂದಿಗೆ ದೊಡ್ಡ ಸೈಜ್‌ನ ಶರ್ಟ್ ಧರಿಸಿದ್ದಾರೆ ಮತ್ತು ಒದ್ದೆಯಾದ ಕೂದಲಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಕುತ್ತಿಗೆಗೆ ತೆಳುವಾದ ಶಿಲುಬೆಯೊಂದಿಗೆ ಸರವನ್ನು ಧರಿಸಿದ್ದಾರೆ. 

67

 'ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ದಿಶಾ, 'ಬಾಘಿ 2', 'ಮಲಂಗ್', 'ಭಾರತ್' ಮತ್ತು ಇತ್ತೀಚೆಗೆ ಬಿಡುಗಡೆಯಾದ 'ರಾಧೆ' ಸಿನಿಮಾಗಳಲ್ಲಿ ಕಾಣಿಸಿಕೊಂಡರು.

77

ಟೈಗರ್ ಶ್ರಾಫ್ ಅವರು ಹೀರೋಪಂತಿ 2, ಬಾಘಿ 4 ಮತ್ತು ಗನ್‌ಪತ್‌ ಸಿನಿಮಾಗಳಲ್ಲಿ ಸ್ಟ್ರಾಂಗ್‌ ಆಕ್ಷನ್ ಮತ್ತು ರೊಮ್ಯಾನ್ಸ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories