ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಒಬ್ಬ ನಟಿಗಾಗಿ ಪದೇ ಪದೇ ಹಾಡುಗಳನ್ನು ನೋಡುತ್ತಾರಂತೆ. ಆ ನಟಿ ಯಾರು? ಆ ಹಾಡುಗಳು ಯಾವುವು? ಅಸಲಿಗೆ ರಾಜಮೌಳಿ ಏನು ಹೇಳಿದರು? ಈ ಬಗ್ಗೆ ಇಲ್ಲಿದೆ ಮಾಹಿತಿ.
ವಿಕ್ರಮಾರ್ಕುಡು, ಬಾಹುಬಲಿ 1, ಬಾಹುಬಲಿ 2 ಚಿತ್ರಗಳಲ್ಲಿ ಅನುಷ್ಕಾ ನಟಿಸಿದ್ದು ಗೊತ್ತೇ ಇದೆ. ರಾಜಮೌಳಿ ಮೆಚ್ಚುವ ನಟಿಯರಲ್ಲಿ ಹಳೆ ತಲೆಮಾರಿನ ಮಹಾನಟಿ ಸಾವಿತ್ರಿ ಕೂಡ ಒಬ್ಬರು. ಈ ಜನರೇಷನ್‌ನ ಕಾಜಲ್, ತಮನ್ನಾ, ಪ್ರಿಯಾಮಣಿ, ಜೆನಿಲಿಯಾ ರಾಜಮೌಳಿ ಚಿತ್ರಗಳಲ್ಲಿ ನಟಿಸಿದ್ದಾರೆ.
25
ಒಂದು ಸಿನಿಮಾ ಕೂಡ ಮಾಡಿಲ್ಲ
ಒಂದು ಇಂಟರ್‌ವ್ಯೂನಲ್ಲಿ ರಾಜಮೌಳಿ ತಾನು ಪದೇ ಪದೇ ನೋಡುವ ನಟಿಯ ಹಾಡುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಆ ನಟಿಯ ಜೊತೆ ರಾಜಮೌಳಿ ಒಂದೇ ಒಂದು ಸಿನಿಮಾ ಕೂಡ ಮಾಡಿಲ್ಲ. ಆ ನಟಿ ಬೇರಾರೂ ಅಲ್ಲ, ಶ್ರುತಿ ಹಾಸನ್.
35
ರಿಪೀಟ್ ಮೋಡ್‌ನಲ್ಲಿ ಶ್ರುತಿ ಹಾಸನ್ ಹಾಡುಗಳು
ಶ್ರುತಿ ಹಾಸನ್ ಡ್ಯಾನ್ಸಿಂಗ್ ಸ್ಟೈಲ್ ಅಂದ್ರೆ ನನಗೆ ಹುಚ್ಚು. 'ರೇಸುಗುರ್ರಂ' ಚಿತ್ರದ ಪಾರ್ಟಿ ಸಾಂಗ್ ಮತ್ತು 'ಶ್ರೀಮಂತುಡು' ಚಿತ್ರದ ಚಾರುಶೀಲ ಹಾಡನ್ನು ಯಾವಾಗಲೂ ರಿಪೀಟ್ ಮೋಡ್‌ನಲ್ಲಿ ನೋಡುತ್ತೇನೆ. ಕೇವಲ ಶ್ರುತಿ ಹಾಸನ್ ಡ್ಯಾನ್ಸ್‌ಗಾಗಿಯೇ ಆ ಹಾಡುಗಳನ್ನು ನೋಡುತ್ತೇನೆ ಎಂದು ರಾಜಮೌಳಿ ಹೇಳಿದ್ದಾರೆ.
ಶ್ರುತಿ ಹಾಸನ್, ಕಮಲ್ ಹಾಸನ್ ಮಗಳಾಗಿ ಇಂಡಸ್ಟ್ರಿಗೆ ಕಾಲಿಟ್ಟರು. ಕೆರಿಯರ್ ಆರಂಭದಲ್ಲಿ ಸತತ ಸೋಲುಗಳನ್ನು ಕಂಡರು. ಇದರಿಂದಾಗಿ ಅವರಿಗೆ 'ಐರನ್ ಲೆಗ್' ಎಂಬ ಹಣೆಪಟ್ಟಿ ಬಂತು. ಆದರೆ 'ಗಬ್ಬರ್ ಸಿಂಗ್' ಚಿತ್ರದ ಬ್ಲಾಕ್‌ಬಸ್ಟರ್ ಹಿಟ್ ಮೂಲಕ ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದರು.
55
ಶ್ರುತಿ ಹಾಸನ್ ಸೂಪರ್ ಹಿಟ್ ಚಿತ್ರಗಳು
ಶ್ರುತಿ ಹಾಸನ್ ಖಾತೆಯಲ್ಲಿ ಗಬ್ಬರ್ ಸಿಂಗ್, ರೇಸುಗುರ್ರಂ, ಯೆವಡು, ಶ್ರೀಮಂತುಡು, ಸಲಾರ್, ವಾಲ್ತೇರು ವೀರಯ್ಯ, ಬಲುಪು, ವೀರ ಸಿಂಹ ರೆಡ್ಡಿಯಂತಹ ಸೂಪರ್‌ಹಿಟ್ ಚಿತ್ರಗಳಿವೆ. ಸದ್ಯ ಶ್ರುತಿ ಸಿಂಗಲ್ ಆಗಿದ್ದಾರೆ.