ಜಾನ್ ಅಬ್ರಹಾಂ ಬಹಳಷ್ಟು ಚಿತ್ರ ಮಾಡಿದ್ದರೂ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಕೆಲವೇ ಕೆಲವು

Published : Feb 03, 2023, 05:10 PM IST

ನಟ ಜಾನ್‌ ಅಬ್ರಹಾಂ (John Abraham) ಈ ದಿನಗಳಲ್ಲಿ ಪಠಾಣ್‌ (Pathaan) ಚಿತ್ರದ ಯಶ್ಸಸ್ಸನ್ನು ಎಂಜಾಯ್‌ ಮಾಡುತ್ತಿದ್ದಾರೆ. ಜಾನ್ ಅಬ್ರಹಾಂ ಬಹಳಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದು, ಕೆಲವೇ ಸಿನಿಮಾಗಳು ಮಾತ್ರ. ಇತ್ತಿಚಿಗೆ ಬಿಡುಗಡೆಯಾದ ಶಾರುಖ್‌ ಖಾನ್‌ ಜೊತೆ ಆಭಿನಯಸಿರುವ ಪಠಾಣ್‌ ಚಿತ್ರ ಜಾನ್‌ ಕೆರಿಯರ್‌ನ ಅತಿ ದೊಡ್ಡ ಹಿಟ್‌ ಆಗಿದೆ. ಜಾನ್‌ ಲೈಫ್‌ನ ಕೆಲವು ಮಾಹಿತಿಗಳು ಇಲ್ಲಿವೆ.

PREV
17
 ಜಾನ್ ಅಬ್ರಹಾಂ ಬಹಳಷ್ಟು ಚಿತ್ರ ಮಾಡಿದ್ದರೂ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಕೆಲವೇ ಕೆಲವು

ಪಠಾಣ್‌ನಲ್ಲಿನ  ಅತ್ಯುತ್ತಮ ಅಭಿನಯದ ನಂತರ  ಜಾನ್ ಅಬ್ರಹಾಂ ಪ್ರಸ್ತುತ ಬಿ ಟೌನ್‌ನಲ್ಲಿ ಚರ್ಚೆಯಲ್ಲಿದ್ದಾರೆ. ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿರುವ ಪಠಾಣ್‌ ಸಿನಿಮಾದಲ್ಲಿ  ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ವಿರುದ್ಧ ಜಾನ್ ಖಳನಾಯಕನ ಪಾತ್ರವನ್ನು ಮಾಡಿದ್ದಾರೆ.

27

ಮಾಡೆಲಿಂಗ್‌ ಕ್ಷೇತ್ರದ ಮೂಲಕ ತನ್ನ ಕೆರಿಯರ್‌ ಪ್ರಾರಂಭಿಸಿದ  ಜಾನ್‌ರ ಮೊದಲ ಚಿತ್ರ 2003 ರಲ್ಲಿ ಜಿಸ್ಮ್,  ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಮಾಡಿದ್ದರು.

37
John Abraham

ಧೂಮ್‌,  ಗರಂ ಮಸಾಲಾ, ದೋಸ್ತಾನಾ, ಕಾಬೂಲ್ ಎಕ್ಸ್‌ಪ್ರೆಸ್, ನ್ಯೂಯಾರ್ಕ್, ಹೌಸ್‌ಫುಲ್ 2 , ರೇಸ್ 2 , ವೆಲ್‌ಕಮ್ ಬ್ಯಾಕ್ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 

47

ಕಳೆದ ಎರಡು ದಶಕಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಜಾನ್‌ ಅವರ ಬಹಳಷ್ಷಟು ಸಿನಿಮಾಗಳಲ್ಲಿ ನಟಿಸಿದ್ದರೂ ಬಾಕ್ಸ್ ಆಫೀಸ್‌ ಅನ್ನು ಲುಟಿ ಮಾಡಿದ್ದು ಕೆಲವೇ ಸಿನಿಮಾಗಳು.

57

ಬಾಲಿವುಡ್‌ನ ಮೋಸ್ಟ್‌ ಹಾಟ್‌, ಹ್ಯಾಂಡ್ಸಮ್‌ ನಟರಲ್ಲಿ ಒಬ್ಬರಾದ ಜಾನ್‌ ಫಿಟ್‌ನೆಸ್‌ಫ್ರೀಕ್‌ ಜೊತೆಗೆ ಸಖತ್‌ ಲ್ಯಾವಿಶ್‌ ಜೀವನಕ್ಕೂ ಫೇಮಸ್‌.

67

ಜಾನ್ ಅಬ್ರಹಾಂ ಅವರ ಸೂಪರ್ ಫಾಸ್ಟ್ ಕಾರುಗಳು ಮತ್ತು ಬೈಕ್‌ಗಳ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿದೆ. ಜಾನ್‌ ಅವರ ಗ್ಯಾರೇಜ್‌ನಲ್ಲಿ ದುಬಾರಿ ಬೈಕ್‌ ಮತ್ತು ಕಾರುಗಳ ಸಂಗ್ರಹವಿದೆ. ಬಾಲಿವುಡ್ ಹಾಟ್ ನಟಿ ಬಿಪಾಷಾ ಬಸು ಜೊತೆ ಹಲವು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ದರು ಇವರು.

77

ಈ ದಿನಗಳಲ್ಲಿ ಜಾನ್‌  ಶಾಲಾ ದಿನಗಳ ಗ್ರೂಪ್‌ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಜಾನ್‌ ಹಾಗೂ ಹೃತಿಕ್‌ ರೋಷನ್‌ ಇದ್ದಾರೆ. ಇಬ್ಬರೂ ನಟರು ಬಾಂಬೆ ಸ್ಕಾಟಿಷ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. 

Read more Photos on
click me!

Recommended Stories