ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಯದ್ರಾ? ಇಂಟರ್‌ನೆಟ್‌ನಲ್ಲಿ ಫೋಟೋ ವೈರಲ್

First Published Nov 22, 2022, 2:31 PM IST

ದಕ್ಷಿಣ ಭಾರತದ ಸಿನಿಮಾ ಸೆನ್ಸೇಷನ್ ವಿಜಯ್ ದೇವರಕೊಂಡ (Vijay Devrakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಪೊಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ರಶ್ಮಿಕಾ ಮತ್ತು ದೇವರಕೊಂಡ  ಇಬ್ಬರೂ ಮದುವೆಯ ಉಡುಪಿನಲ್ಲಿ ಕಾಣಬಹುದು. ಈ ಫೋಟೋವನ್ನು ನೋಡಿದ ನಂತರ ಅವರ ಅಭಿಮಾನಿಗಳು ಅವರು ಮದುವೆಯಾಗಿದ್ದಾರೆ ಎಂದು ಊಹಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಇದು ಎಡಿಟ್ ಮಾಡಿದ ಫೋಟೋ ಎಂದು ಊಹಿಸುತ್ತಿದ್ದಾರೆ ಮತ್ತು ಮುಂದೊಂದು ದಿನ ಈ ಎಡಿಟಿಂಗ್ ರಿಯಾಲಿಟಿ ಆಗಬಹುದು ಎಂದು ಆಶಿಸುತ್ತಿದ್ದಾರೆ. ನಿಜವಾಗಲೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾದ್ರಾ?
 
 

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಸಂಬಂಧದ ಸುದ್ದಿಗಳು ಆಗಾಗ್ಗೆ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ, ಆದರೆ ಈಗ ಅವರ ಈ ಫೋಟೋವು  ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ. ಫೋಟೋ ಸಖತ್‌ ವೈರಲ್‌ ಆಗಿದ್ದು, ಇಬ್ಬರು ಮದುವೆಯಾಗಿದ್ದಾರೆ ಎಂದು ಜನ ಗೆಸ್‌ ಮಾಡುತ್ತಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಅಫೇರ್ ಬಗ್ಗೆ ಮಾಧ್ಯಮಗಳಲ್ಲಿ ಬಹಳ ದಿನಗಳಿಂದ ಸುದ್ದಿಯಾಗಿತ್ತು. ಆದರೆ, ಇದನ್ನು ಇಬ್ಬರೂ ಅಧಿಕೃತವಾಗಿ ದೃಢಪಡಿಸಿರಲಿಲ್ಲ. ಇಬ್ಬರೂ ಯಾವಾಗಲೂ ಒಬ್ಬರನ್ನೊಬ್ಬರು ತಮ್ಮ ಒಳ್ಳೆಯ ಸ್ನೇಹಿತರು ಎಂದು ಕರೆಯುತ್ತಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಅಫೇರ್ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುವದು ಮಾತ್ರವಲ್. ಗೋವಾ, ಮಾಲ್ಡೀವ್ಸ್‌ನಲ್ಲಿಯೂ ಆಗಾಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೂ, ಇವರಿಬ್ಬರ ಸಂಬಂಧ ಅಧಿಕೃತವಾಗಿ ದೃಢಪಡಿಸಿರಲಿಲ್ಲ. ಇಬ್ಬರೂ ಯಾವಾಗಲೂ ಒಬ್ಬರನ್ನೊಬ್ಬರು ತಮ್ಮ ಒಳ್ಳೆಯ ಸ್ನೇಹಿತರು ಎಂದು ಕರೆಯುತ್ತಾರೆ.

ಕರಣ್ ಜೋಹರ್ ಅವರ ಚಾಟ್ ಶೋ 'ಕಾಫಿ ವಿತ್ ಕರಣ್ 7' ಸಂಚಿಕೆಯಲ್ಲಿ, ಅನನ್ಯ ಪಾಂಡೆ ವಿಜಯ್ ರಶ್ಮಿಕಾ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂದು ಸುಳಿವು ನೀಡಿದರು. ವಾಸ್ತವವಾಗಿ, ವಿಜಯ್ ಮತ್ತು ಅನನ್ಯಾ ತಮ್ಮ 'ಲೈಗರ್' ಚಿತ್ರದ ಪ್ರಚಾರಕ್ಕಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 

ಅದೇ ರೀತಿ ಅಕ್ಟೋಬರ್‌ನಲ್ಲಿ ವಿಜಯ್ ಮತ್ತು ರಶ್ಮಿಕಾ ಮಾಲ್ಡೀವ್ಸ್‌ನಲ್ಲಿ ಒಟ್ಟಿಗೆ ರಜೆ ಕಳೆದಿದ್ದಾರೆ.  ರಶ್ಮಿಕಾ ಅವರ ಚಿತ್ರ ಫೋಟೋವೊಂದರಲ್ಲಿ ಧರಿಸಿದ್ದ ಸನ್‌ಗ್ಲಾಸ್‌ ಒಂದು ದಿನದ ಹಿಂದೆ ವಿಮಾನ ನಿಲ್ದಾಣದಲ್ಲಿ ವಿಜಯ್ ಧರಿಸಿದ್ದಂತೆಯೇ ಇತ್ತು ಮತ್ತು ಅದೇ ಸನ್‌ಗ್ಲಾಸ್‌ ರಶ್ಮಿಕಾ  ಧರಿಸಿದ್ದರು ಎಂದು ಹಲವರು ಊಹಿಸಿದ್ದಾರೆ. 
 

ವಿಜಯ್ ಮತ್ತು ರಶ್ಮಿಕಾ ಅವರ ಅಭಿಮಾನಿಗಳು ಅವರ ಸಂಬಂಧದ ಬಗ್ಗೆ ಎಷ್ಟು ಖಚಿತವಾಗಿದ್ದಾರೆಂದರೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್‌ ದೇವರಕೊಂಡ ಫ್ಯಾನ್‌ ಪೇಜ್‌ ಒಂದು ಈ ಫೋಟೋವನ್ನು ಪೋಸ್ಟ್‌ ಮಾಡಿದ್ದು, ಈ ಜೋಡಿಗೆ ವಿರೋಶ್ ಎಂಬ ಹೆಸರನ್ನು ಸಹ ನೀಡಿದ್ದಾರೆ. 

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು 'ಗೀತ ಗೋವಿಂದಂ', 'ಡಿಯರ್ ಕಾಮ್ರೇಡ್' ಮತ್ತು 'ವರ್ಲ್ಡ್ ಫೇಮಸ್ ಲವರ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ಅವರ ಕೆಮಿಸ್ಟ್ರಿ ಅನ್ನು ಪ್ರೇಕ್ಷಕರು ಸಖತ್‌ ಮೆಚ್ಚಿಕೊಂಡಿದ್ದಾರೆ.

ವಿಜಯ್ ಕೊನೆಯದಾಗಿ 'ಲೈಗರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದೆ ಎಂದು ಸಾಬೀತಾಯಿತು. ಅಂದಹಾಗೆ, ರಶ್ಮಿಕಾ ಅವರ ಹಿಂದಿ ಚೊಚ್ಚಲ ಚಿತ್ರ 'ಗುಡ್ ಬೈ' ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ದುರದೃಷ್ಟವಶಾತ್, ಈ ಚಿತ್ರವೂ ಕೆಲಸ ಮಾಡಲು ಸಾಧ್ಯವಾಗಲಿಲ್ಲ.

click me!